ಕಾಯಕ ನಿಷ್ಠೆ ಧರ್ಮದ ಬುನಾದಿ: ಡಾ. ಸಂಗಮೇಶ ಕಲಹಾಳ

| Published : Jun 16 2024, 01:49 AM IST

ಸಾರಾಂಶ

ನಾವು ಮಾಡುವ ಸತ್ಯ, ಶುದ್ಧ ಕಾಯಕದಿಂದ ನಾವಿರುವಲ್ಲಿಯೇ ಕೈಲಾಸ ಸೃಷ್ಟಿಸಿಕೊಳ್ಳಬೇಕಾಗಿದೆ.

ಸಿದ್ದರಾಮೇಶ್ವರ ಶಿವಯೋಗಿಗಳ ವಚನ ಚಿಂತನಾ ಗೋಷ್ಠಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಶಿವಶರಣರ ದೃಷ್ಟಿಯಲ್ಲಿ ದೇವಲೋಕ, ಮರ್ತ್ಯಲೋಕ ಎಂಬವು ಬೇರೆ ಎಲ್ಲೂ ಇಲ್ಲ. ನಾವು ಮಾಡುವ ಸತ್ಯ, ಶುದ್ಧ ಕಾಯಕದಿಂದ ನಾವಿರುವಲ್ಲಿಯೇ ಕೈಲಾಸ ಸೃಷ್ಟಿಸಿಕೊಳ್ಳಬೇಕಾಗಿದೆ ಎಂದು ನಿವೃತ್ತ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಸಂಗಮೇಶ ಕಲಹಾಳ ಹೇಳಿದರು.

ತಾಲೂಕಿನ ಕಲ್ಲಭಾವಿ ಗ್ರಾಮದ ವೀರ ಬಸವಾರ್ಯಮಠದ ಆವರಣದಲ್ಲಿ ಲಿಂಗೈಕ್ಯೆ ಶರಣೆ ಶರಣಮ್ಮ ಗೌಡಪ್ಪ ದೇವಲ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಸಿದ್ದರಾಮೇಶ್ವರ ಶಿವಯೋಗಿಗಳ ವಚನ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಕವೇ ಕೈಲಾಸ ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ತಿಳಿಸಿದಂತೆ ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದರು.

ರಾಯಚೂರು ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಮಾತನಾಡಿ, ಬಸವಣ್ಣನವರ ತಮ್ಮ ವಚನಗಳ ಮೂಲಕ ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಜನರಿಗೆ ತಿಳಿಸಿದರು. ನಾವೆಲ್ಲರೂ ಬಸವಣ್ಣನವರ ವಚನ ಮಾರ್ಗದಲ್ಲಿ ಸಾಗಿದರೆ ಸಮಾಜವು ಶಾಂತಿಯ ತೋಟವಾಗುತ್ತದೆ. ನಿತ್ಯ ನಿರಂಜನ, ನಿರಾಕಾರ ಮತ್ತು ಪರವಸ್ತುವೆನಿಸಿದ ಪರಶಿವನೆಂಬ ಮಹಾಬಯಲಿನಲ್ಲಿ ಬೆರೆತು ಬಯಲಾಗುವುದೇ ಕೈಲಾಸ ಎಂದು ಹೇಳಿದರು.

ಶರಣಬಸಪ್ಪ ಬ್ಯಾಲಿಹಾಳ, ಬಸವರಾಜಪ್ಪ ಇಂಗಳದಾಳ, ಅರ್ಚನಾ ಸಸಿಮಠ, ವೀರುಪಾಕ್ಷಯ್ಯ ಹಿರೇಮಠ, ಶರಣಪ್ಪ ಅಸಬಿ, ರೇಣುಕಪ್ಪ ಮಂತ್ರಿ, ರುದ್ರಪ್ಪ ಹಳ್ಳಿ, ಲಿಂಗಜ್ಜ ಬೇವೂರು, ದೇವಪ್ಪ ಕೋಳೂರು, ಶಿವಣ್ಣ ಕರುವೀನ, ನರಸಪ್ಪ ತೆಲಗರ, ಸಣ್ಣ ಅಮರಪ್ಪ ಅಳ್ಳಳ್ಳಿ, ಹನಮಗೌಡ ಬಳ್ಳಾರಿ ಸೇರಿದಂತೆ ಮತ್ತಿತರರಿದ್ದರು.

ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ:

2024-25ನೇ ಸಾಲಿಗಾಗಿ ಯಲಬುರ್ಗಾ, ಕುಕನೂರ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ, ನಂತರದ ಬಾಲಕ / ಬಾಲಕಿಯರ ವಸತಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳಾದ ಯಲಬುರ್ಗಾ ತಾಲೂಕಿನ ಯಲಬುರ್ಗಾ, ಹಿರೇಅರಳಿಹಳ್ಳಿ, ಗಾಣದಾಳ, ಚಿಕ್ಕಮ್ಯಾಗೇರಿ, ಹಿರೇವಂಕಲಕುಂಟಾದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಯಲಬುರ್ಗಾ ಹಾಗೂ ಬೇವೂರಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಕುಕನೂರು ತಾಲೂಕಿನ ಕುಕನೂರು, ಸೋಂಪುರ, ರಾಜೂರಿನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಮಂಗಳೂರಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.ಪರಿಶಿಷ್ಟ ಜಾತಿ ಮೆಟ್ರಿಕ್ ನಂತರ ವಸತಿ ನಿಲಯಗಳಾದ ಯಲಬುರ್ಗಾದ ಮೆಟ್ರಿಕ್ ನಂತರದ (ಎಸ್ಸಿ) ಬಾಲಕರ ವಸತಿ ನಿಲಯ ಹಾಗೂ ಮಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಕುಕನೂರಿನ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.ಆಸಕ್ತ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ವೆಬ್‌ಸೈಟ್ www.sw.kar.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ಪ್ರತಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಹಿಂದಿನ ತರಗತಿಯ ಅಂಕಪಟ್ಟಿಯ ದೃಢೀಕೃತ ಝರಾಕ್ಸ್, ವಿದ್ಯಾರ್ಥಿ ಮತ್ತು ಪೋಷಕರ ಆಧಾರ ಕಾರ್ಡ್ ಝರಾಕ್ಸ್ ಪ್ರತಿ, ಪಾಸ್‌ಪೋರ್ಟ್ ಅಳತೆಯ 4 ಫೋಟೋಗಳನ್ನು ಸಹಾಯಕ ನಿರ್ದೇಶಕರು(ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ, ಯಲಬುರ್ಗಾ ಕಚೇರಿಗೆ ಸಲ್ಲಿಸಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.