ಸಾರಾಂಶ
ಧ್ರುವನಾರಾಯಣ್ ಅವರು ರಾಜಕೀಯ ಜೀವನದಲ್ಲಿ ಕುಟುಂಬಕ್ಕಿಂತಲೂ ಅವರ ಸಾರ್ವಜನಿಕರಿಗೇ ಹೆಚ್ಚು ಸಮಯ ಕೊಡುತ್ತಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಂಜನಗೂಡಿನ ಕಾಯಕಯೋಗಿ ಧ್ರುವನಾರಾಯಣ ಅಭಿಮಾನಿಗಳ ಬಳಗ ಹೊರ ತಂದಿರುವ 2025ನೇ ವರ್ಷದ ಕ್ಯಾಲೆಂಡರ್ ಅನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು.ಈ ವೇಳೆ ಧ್ರುವನಾರಾಯಣ ಒಡನಾಡಿ ಸೋಮೇಶ್ ಮಾತನಾಡಿ, ಧ್ರುವನಾರಾಯಣ್ ಅವರು ರಾಜಕೀಯ ಜೀವನದಲ್ಲಿ ಕುಟುಂಬಕ್ಕಿಂತಲೂ ಅವರ ಸಾರ್ವಜನಿಕರಿಗೇ ಹೆಚ್ಚು ಸಮಯ ಕೊಡುತ್ತಿದ್ದರು. ಹೀಗಾಗಿಯೇ ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನರ ಬಾಯಲ್ಲಿ ಇಂದಿಗೂ ಧ್ರುವನಾರಾಯಣ ಅವರು ಸಂಸದರಾಗಿ ಉಳಿದಿದ್ದಾರೆ. ನಂಜನಗೂಡು ಶಾಸಕರಾಗಿರುವ ದರ್ಶನ್ ಅವರು ತಂದೆಯ ಹಾದಿಯಲ್ಲೇ ಸಾಗುತ್ತಾ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಮೈಮುಲ್ ಮಾಜಿ ನಿರ್ದೇಶಕ ಶ್ರೀನಿವಾಸಮೂರ್ತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ನಂಜನಗೂಡು ಯುವ ಬಳಗದ ಲೋಕೇಶ್ ಮೊದಲಾದವರು ಇದ್ದರು.