ಸಾರಾಂಶ
ಭಟ್ಕಳ: ಮನೆ ಮನಗಳಲ್ಲಿ ಸಾಹಿತ್ಯದ ಕಂಪನ್ನು ಪಸರಿಸಲು ಮನೆಯಂಗಳದಲ್ಲಿ ಕಾವ್ಯೋತ್ಸವ ಕಾರ್ಯಕ್ರಮ ಪರಿಣಾಮಕಾರಿದೆ ಎಂದು ಸಮಾಜ ಸೇವಕ ಬೇತಾಳ ಮಹಾಲೆ ಶಿರಾಲಿ ತಿಳಿಸಿದರು.ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ರಾಜ್ಯೋತ್ಸವ ಮಾಸದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದಡಿಯಲ್ಲಿ ಶಿಕ್ಷಕಿ ಇಂದುಮತಿ ಪ್ರಹ್ಲಾದ ರಾಯಚೂರು ಅವರ ನಿವಾಸದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಕಾವ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವನ್ನು ಮನೆ ಮನೆಗಳಲ್ಲಿ, ಶಾಲೆಗಳಲ್ಲಿ ಆಯೋಜಿಸುವ ಮೂಲಕ ಕನ್ನಡ ನುಡಿಸೇವೆಯನ್ನು ಮಾಡುವಲ್ಲಿ ಎಲ್ಲರೂ ಅಭಿಮಾನದಿಂದ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.ಶಿಕ್ಷಕ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯಕ್ರಮಗಳನ್ನು ಸಂಘಟಿಸಿ ಹೆಚ್ಚು ಹೆಚ್ಚು ಜನರನ್ನು ಅದರಲ್ಲೂ ಶಿಕ್ಷಕ ಸಮುದಾಯವನ್ನು ಸಾಹಿತ್ಯ ಕಾರ್ಯಕ್ರಮದಡೆಗೆ ಸೆಳೆಯುತ್ತಿರುವುದು ಸಂತಸದ ವಿಚಾರ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವೆಂಕಟೇಶ್ ನಾಯ್ಕ, ಲೆಕ್ಕಪತ್ರ ಪರಿಶೋಧಕ ಯು.ಎ. ಲೋಹಾನಿ, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಕುಮಾರ್ ನಾಯ್ಕ, ಪ್ರಹ್ಲಾದ ರಾಯಚೂರು, ಸಾಹಿತಿ ಶಂಭು ಹೆಗಡೆ, ನಾರಾಯಣ ಯಾಜಿ ಶಿರಾಲಿ ಮಾತನಾಡಿದರು.ಕವಿಗೋಷ್ಠಿಯಲ್ಲಿ ಸುಮಲತಾ ನಾಯ್ಕ, ಜಿ.ಟಿ. ಭಟ್, ಹೇಮಲತಾ ಶೆಟ್, ನೇತ್ರಾವತಿ ಶಾನಭಾಗ, ವಿನೋದ ನಾಯ್ಕ, ಶಂಕರ ನಾಯ್ಕ, ಇಂದುಮತಿ ಬಿ.ಜೆ., ಸ್ವರಚಿತ ಕವಿತೆ ವಾಚಿಸಿದರೆ, ಗಣಪತಿ ಶಿರೂರು ವಚನ ಗಾಯನ ಹಾಡಿದರು. ಕಸಾಪ ಗೌರವ ಕೋಶ್ಯಾಧ್ಯಕ್ಷ ಶ್ರೀಧರ ಶೇಟ್ ಶಿರಾಲಿ ಸ್ವಾಗತಿಸಿ, ಆಶಯ ನುಡಿಗಳನ್ನಾಡಿದರು. ಶಿಕ್ಷಕಿ ಸವಿತಾ ಶೇಟ್ ನಿರೂಪಿಸಿದರು. ಮಂಜುಳಾ ಶಿರೂರು ಪ್ರಾರ್ಥಿಸಿದರು. ಜಯಶ್ರೀ ಆಚಾರಿ, ಪೂರ್ಣಿಮಾ ಕರ್ಕಿಕರ್, ಗೀತಾ ಬಂಢಾರಿ, ಸುಮನಾ ಕೆರೆಕಟ್ಟೆ, ನಾಡು ನುಡಿಯ ಗೀತೆಯನ್ನು ಪ್ರಸ್ತುತಪಡಿಸಿದರು. ಮಧು ಹೆಗಡೆ ಬನವಾಸಿಗೆ ಆರೋಗ್ಯ ಜ್ಯೋತಿ ಪ್ರಶಸ್ತಿ
ಶಿರಸಿ: ಬೆಂಗಳೂರಿನ ಪ್ರಸಿದ್ಧ ಅಪೊಲೋ ಆಸ್ಪತ್ರೆಯಲ್ಲಿ ಅನಸ್ತೇಷಿಯಾ ಟೆಕ್ನಿಷಿಯನ್ ಆಗಿರುವ ಬನವಾಸಿಯ ಮಧುಕೇಶ್ವರ ರಾಮಚಂದ್ರ ಹೆಗಡೆ ಅವರಿಗೆ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸೇವೆ ಹಾಗೂ ಸಾಧನೆಗಾಗಿ ಪ್ರತಿಷ್ಠಿತ ಆರೋಗ್ಯ ಜ್ಯೋತಿ ಪ್ರಶಸ್ತಿ- ೨೦೨೪ನ್ನು ನೀಡಲಾಗಿದೆ.ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಮತ್ತು ಸಾಧಕರಿಗೆ ಬೆಂಗಳೂರಿನ ರಾಘವಿ ಚಾರಿಟೇಬಲ್ ಟ್ರಸ್ಟ್ ಸೇವಾ ಫೌಂಡೇಷನ್, ಶ್ರೀ ಲಕ್ಷ್ಮೀ ಆಸ್ಪತ್ರೆಗಳ ಸಮೂಹ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇತರ ಸಂಘ- ಸಂಸ್ಥೆಗಳು ಸೇರಿ ಪ್ರತಿವರ್ಷ ನೀಡುವ ಈ ಪ್ರಶಸ್ತಿಯನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.ಬನವಾಸಿಯ ರಾಮಚಂದ್ರ ಹೆಗಡೆ ಮತ್ತು ಸೌಭಾಗ್ಯ ಅವರ ಪುತ್ರನಾದ ಮಧುಕೇಶ್ವರ ಹೆಗಡೆ ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆ, ಬೆಂಗಳೂರಿನ ಸಾಕ್ರಾ ಇಂಟರ್‌ನ್ಯಾಷನಲ್ ಆಸ್ಪತ್ರೆ ಮುಂದಾದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಅನಸ್ತೇಷಿಯಾ ಟೆಕ್ನೀಷಿಯನ್ ಆಗಿ ಕೆಲಸ ಮಾಡಿದ್ದು, ಪ್ರಸ್ತುತ ಅಪೋಲೋ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳಾಗಿರುವ ಇವರು ಹಲವು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕೋವಿಡ್ ಸಂದರ್ಭದಲ್ಲಿ ನಿರಂತರ ಸೇವೆ ಸಲ್ಲಿಸಿದ್ದರು. ಈ ಎಲ್ಲ ಸೇವೆಗಳನ್ನು ಪರಿಗಣಿಸಿ ಇವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.