ಸಾರಾಂಶ
ಕೆಸಿಸಿ ಬ್ಯಾಂಕ್ ಗ್ರಾಹಕರ, ರೈತರ ಅನುಕೂಲಕ್ಕಾಗಿ ಪ್ರಸ್ತುತ ಹೊಸ ಬೆಳಕು ಕಾರ್ಯಕ್ರಮದಡಿ ಹೊಸ ಸಾಲ ವಿತರಣೆ, ಠೇವಣಾತಿ ಸಂಗ್ರಹ ಸೇರಿದಂತೆ ಅನೇಕ ಯೋಜನೆಗಳು ಚಾಲ್ತಿಯಲ್ಲಿವೆ, ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬ್ಯಾಂಕ್ ನಿರ್ದೇಶಕ ಎಂ.ಎಫ್. ಕಲಗುಡಿ ಹೇಳಿದರು.
ಮುಳಗುಂದ: ಕರ್ನಾಟಕ ಸೆಂಟ್ರಲ್ ಕೋ-ಆಪ್ ಬ್ಯಾಂಕ್ ಗ್ರಾಹಕರ, ರೈತರ ಅನುಕೂಲಕ್ಕಾಗಿ ಪ್ರಸ್ತುತ ಹೊಸ ಬೆಳಕು ಕಾರ್ಯಕ್ರಮದಡಿ ಹೊಸ ಸಾಲ ವಿತರಣೆ, ಠೇವಣಾತಿ ಸಂಗ್ರಹ ಸೇರಿದಂತೆ ಅನೇಕ ಯೋಜನೆಗಳು ಚಾಲ್ತಿಯಲ್ಲಿವೆ, ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬ್ಯಾಂಕ್ ನಿರ್ದೇಶಕ ಎಂ.ಎಫ್. ಕಲಗುಡಿ ಹೇಳಿದರು.ಪಟ್ಟಣದ ಕೆಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದ ಹೊಸ ಬೆಳಕು ಕಾರ್ಯಕ್ರಮ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಪುನಶ್ಚೇತನದ ನಂತರ ಎಲ್ಲ ತರಹ ಸಾಲದ ಯೋಜನೆಗಳನ್ನು ರೂಪಿಸಲಾಗಿದೆ. ರೈತರಿಗೆ, ವ್ಯಾಪಾರಸ್ಥರಿಗೆ ಹೆಚ್ಚಿನ ಆರ್ಥಿಕ ಸಾಲ ಸೌಲಭ್ಯ ಒದಗಿಸುವಲ್ಲಿ ಬ್ಯಾಂಕ್ ಮುಂಚೂಣೆಯಲ್ಲಿದೆ. ಸಹಕಾರಿ ಸಂಘಗಳ ತಮ್ಮ ಠೇವುಗಳನ್ನು ಕೆಸಿಸಿ ಬ್ಯಾಂಕ್ ನಲ್ಲೆ ಇರಿಸಿ, ಇನ್ನೂ ಹೆಚ್ಚು ಹೆಚ್ಚು ಗ್ರಾಹಕರು ತಮ್ಮ ಉಳಿತಾಯ ಖಾತೆಗಳನ್ನು ತೆರೆಯಬೇಕು. ಈ ನಿಟ್ಟಿನಲ್ಲಿ ಬ್ಯಾಂಕಿನ ಆರ್ಥಿಕ, ಡಿಜಿಟಲ್ ಸೇವಾ ಸೌಲಭ್ಯಗಳ ಕುರಿತು ಗ್ರಾಹಕರಿಗೆ ತಿಳುವಳಿಕೆ ನೀಡಿದೆ. ಗ್ರಾಹಕರು ತಮ್ಮ ಕುಂದು ಕೊರತೆ ತಿಳಿಸಿ, ನಿವಾರಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ 2024 ರ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಹೊಸ ಸಾಲ, ಉಳಿತಾಯ ಖಾತೆ, ಠೇವಣಿ ಪತ್ರಗಳನ್ನ ಗ್ರಾಹಕರಿಗೆ ವಿತರಿಸಲಾಯಿತು. ಪಪಂ ಎಸ್.ಸಿ. ಬಡ್ನಿ, ಮುಖಂಡರಾದ ಅಶೋಕ ಸೋನಗೋಜಿ, ರಾಮಣ್ಣ ಕಮಾಜಿ, ಎಸ್.ಆರ್. ಕತ್ತಿ, ವಿರೂಪಾಕ್ಷಪ್ಪ ನಾಗರಡ್ಡಿ, ರಾಜೇಶ್ವರಿ ಮುರಗೋಡ, ಶಾಖೆ ವ್ಯವಸ್ಥಾಪಕ ಎಚ್.ಎಂ. ಮಳ್ಳಣ್ಣವರ, ಸಿ.ಎಂ. ಹೊನ್ನಪ್ಪನವರ, ಎಸ್.ಎಸ್. ಯರಗುದಿ, ಸುನೀಲ ಚಳಗೇರಿ, ವಿಶ್ವನಾಥ ಲಮಾಣಿ, ಸುರೇಶಕುಮಾರ್ ಎಸ್, ಜಿ.ಎಂ. ಕೊಲ್ಲಾರಿ ಹಾಗೂ ಗ್ರಾಹಕರು ಇದ್ದರು.