ಡಂಬಳದಲ್ಲಿ ಕೆಸಿಸಿ ಬ್ಯಾಂಕ್‌ ಆರಂಭ, ಬೇಡಿಕೆ ಈಡೇರಿಕೆ-ಶಿವಕುಮಾರಗೌಡ ಪಾಟೀಲ

| Published : Jan 27 2024, 01:19 AM IST

ಡಂಬಳದಲ್ಲಿ ಕೆಸಿಸಿ ಬ್ಯಾಂಕ್‌ ಆರಂಭ, ಬೇಡಿಕೆ ಈಡೇರಿಕೆ-ಶಿವಕುಮಾರಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ, ಕೂಲಿಕಾರ್ಮಿಕರ, ಸಣ್ಣಪುಟ್ಟ ವ್ಯಾಪಾರಸ್ಥರ ಹಲವು ವರ್ಷಗಳ ಬೇಡಿಕೆಯಾದ ಡಂಬಳದಲ್ಲಿ ಕೆಸಿಸಿ ಬ್ಯಾಂಕ್ ಶಾಖೆಯನ್ನು ತೆರೆಯಬೇಕು ಎನ್ನುವ ಮಹದಾಸೆ ಈಗ ನೆರವೇರುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.

ಡಂಬಳ: ರೈತರ, ಕೂಲಿಕಾರ್ಮಿಕರ, ಸಣ್ಣಪುಟ್ಟ ವ್ಯಾಪಾರಸ್ಥರ ಹಲವು ವರ್ಷಗಳ ಬೇಡಿಕೆಯಾದ ಡಂಬಳದಲ್ಲಿ ಕೆಸಿಸಿ ಬ್ಯಾಂಕ್ ಶಾಖೆಯನ್ನು ತೆರೆಯಬೇಕು ಎನ್ನುವ ಮಹದಾಸೆ ಈಗ ನೆರವೇರುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಇವತ್ತು ಏಕಕಾಲದಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್ ಆಶ್ರಯದಲ್ಲಿ 5 ಗ್ರಾಮೀಣ ಶಾಖೆಗಳು ಆರಂಭಗೊಂಡಿವೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.ಡಂಬಳ ಗ್ರಾಮದ ಮುಖ್ಯ ಬಜಾರದಿಂದ ಮುಂಡರಗಿ ನಗರಕ್ಕೆ ತೆರಳುವ ರಸ್ತೆಯಲ್ಲಿ ಇರುವ ವಿ.ಟಿ. ಮೇಟಿಯವರ ಮಳಿಗೆಯಲ್ಲಿ ನೂತನ ಕೆಸಿಸಿ ಬ್ಯಾಂಕ್ ಶಾಖೆ ಉದ್ಘಾಟಿಸಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಅವರು ಮಾತನಾಡಿದರು.

ಈಗಾಗಲೇ ಡಂಬಳ ಹೋಬಳಿಯ ಅನೇಕ ಗ್ರಾಮಗಳ ಗ್ರಾಹಕರನ್ನು ಸದಸ್ಯರನ್ನಾಗಿ ಪಾಸ್ ಬುಕ್ ಮಾಡಿಕೊಡಲಾಗಿದೆ. ಹಾಗೆ ಅನೇಕರಿಂದ ಠೇವಣಿ ಸಂಗ್ರಹಿಸಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಪ್ರೋತ್ಸಾಹಿಸಿ ಕೃಷಿ ಸೇರಿದಂತೆ ಅನೇಕ ವಹಿವಾಟುಗಳನ್ನು ಮಾಡಲು ಬ್ಯಾಂಕ್ ಆರ್ಥಿಕ ನೆರವು ನೀಡಲಿದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಗ್ರಾಹಕರಿಗೆ ಠೇವಣಿ ಪತ್ರ ನೀಡಲಾಯಿತು.ಈ ಸಂದರ್ಭದಲ್ಲಿ ವಿ.ಟಿ. ಮೇಟಿ, ಹಾಲಪ್ಪ ಕಬ್ಬೇರಹಳ್ಳಿ, ಬಸವರೆಡ್ಡಿ ಬಂಡಿಹಾಳ, ಮಹೇಶ ಗಡಗಿ, ಸುರೇಶ ಗಡಗಿ, ಮರಿಯಪ್ಪ ಸಿದ್ದಣ್ಣವರ, ಸಿದ್ದಣ್ಣ ನಂಜಪ್ಪನವರ, ಸಿದ್ದಪ್ಪ ಹಡಪದ, ಚನ್ನಪ್ಪ ಪ್ಯಾಟಿ, ಸಿದ್ದು ಮೇಟಿ, ಸಿದ್ದು ಹಿರೇಮಠ, ಬಾಬು ಮೂಲಿಮನಿ, ಜಾಕೀರಹುಸೇನ ಮೂಲಿಮನಿ, ಶಿವಪ್ಪ ಅಂಕದ, ಬಸಪ್ಪ ಕಬ್ಬೇರಹಳ್ಳಿ, ಶರಣು ಬಂಡಿಹಾಳ, ಎಸ್.ಜಿ.ಆಲದಕಟ್ಟಿ, ಡಿಸಿಓ ಮಾಧವ ಕುಲಕರ್ಣಿ, ಬಿಆಯ್ ಕೆ.ಬಿ. ದೊಡ್ಡಮನಿ, ಮುಂಡರಗಿ ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಎಸ್.ವಿ. ಕೂಗು, ಡಂಬಳ ಶಾಖೆಯ ವ್ಯವಸ್ಥಾಪಕರಾದ ಮಹಾಂತೇಶ ಸುರಕೋಡ, ಮಹಮ್ಮದರಫೀಕ ನಮಾಜಿ, ಪ್ರಶಾಂತ ಕೋರ್ಲಹಳ್ಳಿ, ಸಿಬ್ಬಂದಿ ವರ್ಗ ಡಂಬಳ ಹೋಬಳಿಯ ಸುತ್ತಲಿನಮುತ್ತಲಿನ ಗ್ರಾಮಸ್ಥರು ಇದ್ದರು.