ಸಾರಾಂಶ
ಮನೆಯಲ್ಲಿ ಪೋಷಕರು ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಚಲನವಲನಗಳನ್ನು ಗಮನಿಸಬೇಕು. ಯಾವ ಮಕ್ಕಳು ಒಂಟಿಯಾಗಿರಲು ಇಷ್ಟ ಪಡುತ್ತಾರೆ. ಸರಿಯಾಗಿ ನಿದ್ದೆ ಮಾಡದೆ ಇರುತ್ತಾರೆ ಅಂತಹ ಮಕ್ಕಳನ್ನು ಕೂರಿಸಿಕೊಂಡು ಸಮಾಧಾನವಾಗಿ ಮಕ್ಕಳ ಸಮಸ್ಯೆ ಕೇಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ಮನೆಯಲ್ಲಿ ಪೋಷಕರು ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಚಲನವಲನಗಳನ್ನು ಗಮನಿಸಬೇಕು. ಯಾವ ಮಕ್ಕಳು ಒಂಟಿಯಾಗಿರಲು ಇಷ್ಟ ಪಡುತ್ತಾರೆ. ಸರಿಯಾಗಿ ನಿದ್ದೆ ಮಾಡದೆ ಇರುತ್ತಾರೆ ಅಂತಹ ಮಕ್ಕಳನ್ನು ಕೂರಿಸಿಕೊಂಡು ಸಮಾಧಾನವಾಗಿ ಮಕ್ಕಳ ಸಮಸ್ಯೆ ಕೇಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.ಅವರು ನಗರದ ಸರ್ಕಾರಿ ಕನ್ನಡ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಹದಿಹರೆಯದವರ ಆರೋಗ್ಯ ರಕ್ಷಣೆ ಮತ್ತು ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಆಗಲಿ, ಅಕ್ಕಪಕ್ಕದ ಮನೆಯವರಿಂದಲೇ ಆಗಲಿ ಯಾರೇ ನಿಮ್ಮ ಮೇಲೆ ದೌರ್ಜನ್ಯ ಮಾಡಿದರೆ ಭಯಪಡದೆ ತಕ್ಷಣ ನಿಮ್ಮ ತಂದೆ ತಾಯಿಗಳೊಂದಿಗೆ ಹಾಗೂ ಶಾಲೆಯ ಶಿಕ್ಷಕರೊಂದಿಗೆ ಹಂಚಿಕೊಳ್ಳಿ ಭಯಪಡಬೇಡಿ. ಯಾವುದೇ ಸಂದರ್ಭದಲ್ಲೂ ಗುಟ್ಟನ್ನು ಮುಚ್ಚಿಡಬೇಡಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಇದೆ ನಿಮಗೆ ಉಚಿತವಾಗಿ ಕಾನೂನಿನ ಸೇವೆ ಸಿಗಲಿದೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಪಟ್ಟನಾಯಕನಹಳ್ಳಿ ಪೊಲೀಸ್ ಸಬ್ ಇನ್ಸಪೆಕ್ಟರ್ ಭವಿತ ಅವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಮಕ್ಕಳು ಚಿಕ್ಕಂದಿನಿಂದಲೇ ಕಾನೂನಿನ ಅರಿವು ಮೂಡಿಸಿಕೊಳ್ಳಬೇಕು. ಮಕ್ಕಳು ತಮಗೆ ೧೮ ವರ್ಷ ತುಂಬುವವರೆಗೂ ಯಾವುದೇ ವಾಹನ ಚಲಾಯಿಸಬೇಡಿ. ನೀವು ವಾಹನ ಚಾಲನೆ ಮಾಡಿದರೆ ನಿಮ್ಮ ತಂದೆ ತಾಯಿಗಳಿಗೆ ೨೫ ಸಾವಿರ ದಂಡ ವಿಧಿಸಲಾಗುತ್ತದೆ. ಶಿರಾ ತಾಲೂಕಿನಲ್ಲಿ ಇತ್ತೀಚೆಗೆ ಪ್ರತಿ ದಿನಕ್ಕೆ ಒಂದು ಪ್ರಕರಣವಾದರೂ ಪೋಕ್ಸೋ ಪ್ರಕರಣ ದಾಖಲಾಗುತ್ತಿದೆ. ಮಕ್ಕಳು ತಮ್ಮ ತಂದೆ ತಾಯಿಗಳನ್ನು ಪ್ರೀತಿಸಿ ಅದನ್ನು ಬಿಟ್ಟು ಯಾರದೋ ಆಕರ್ಷಣೆಗೆ ಒಳಗಾಗಬೇಡಿ ಎಂದರು. ವಕೀಲರಾದ ಸಿ.ಎಸ್.ಸರಸ್ವತಿ ಅವರು ಮಾತನಾಡಿ ತಂದೆ ತಾಯಿಗಳು ಹೆಣ್ಣು ಮಕ್ಕಳಿಗೆ ೧೮ ವರ್ಷ ಹಾಗೂ ಗಂಡು ಮಕ್ಕಳಿಗೆ ೨೧ ವರ್ಷ ತುಂಬುವರೆಗೂ ಯಾರೂ ಮದುವೆ ಮಾಡಬಾರದು. ಆ ರೀತಿ ಮದುವೆ ಮಾಡಿದರೆ ಅವರಿಗೆ ಕಾನೂನಿನಲ್ಲಿ ೨ ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಭಾಸ್ಕರ್, ಶಿಕ್ಷಕರಾದ ಫೈಯಾಜ್, ವೀರಣ್ಣ.ಎಚ್.ಆರ್, ಮುದ್ದಣ್ಣ, ಕೆಂಚಮ್ಮ, ದಾಕ್ಷಾಯಿಣಿ, ಅನಿತಮ್ಮ, ರಾಜೇಶ್ವರಿ, ನೇತ್ರಾವತಿ ಸೇರಿದಂತೆ ಹಲವರು ಹಾಜರಿದ್ದರು. ಪಟ್ಟನಾಯಕನಹಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭವಿತ ಸೇರಿದಂತೆ ಹಲವರು ಹಾಜರಿದ್ದರು.