ಸಾರಾಂಶ
ಶುದ್ಧ ನೀರು, ಗಾಳಿ ಮಾನವ ಸಂಕುಲಕ್ಕೆ ಅಗತ್ಯವಿದೆ. ಆದ್ದರಿಂದ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ದಿನೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ಶುದ್ಧ ನೀರು, ಗಾಳಿ ಮಾನವ ಸಂಕುಲಕ್ಕೆ ಅಗತ್ಯವಿದೆ. ಆದ್ದರಿಂದ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ದಿನೇಶ್ ಹೇಳಿದರು.ತಾಲೂಕಿನ ಸಪ್ತಗಿರಿ ವಲಯದ ಭವಾನಿ ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಫಿ ಯೋಜನೆ, ಜ್ಞಾನವಿಕಾಸ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ನೀರು ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೂರ್ವಿಕರ ಕಾಲದಲ್ಲಿ ನೀರು ಭಾವಿ, ಕೆರೆ ನದಿಯಲ್ಲಿ ಶುದ್ಧವಾಗಿ ಸಿಗುತಿತ್ತು. ಆದರೆ ಇಂದು ನಾವು ಮಿನರಲ್ ವಾಟರ್ ಹಣ ಕೊಟ್ಟು ಕುಡಿಯುವಂತಾಗಿದೆ. ಇದಕ್ಕೆ ಕಾರಣ ನಮಗೆ ನೀರಿನ ಮಹತ್ವದ ಅರಿವೇ ಇಲ್ಲದೆ ನಾವು ನೀರನ್ನು ವೆಚ್ಚ ಮಾಡುತ್ತಿದ್ದೇವೆ. ಹೀಗೆ ಮುಂದುವರಿದರೆ ನಾವು ನೀರಿನ್ನು ಮಾತ್ರೆಯಲ್ಲಿ ನೋಡಬೇಕಾಗುತ್ತದೆ ಎಂದು ತಿಳಿಸಿದರು.ಅನೈರ್ಮಲ್ಯದಿಂದ ಆಗುವ ದುಷ್ಪರಿಣಾಮ ಹಾಗೂ ಕೋವಿಡ್ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟ ಮತ್ತು ನೀರಿನ ದುರ್ಬಳಕೆಯಿಂದ ಆಗುವ ದುಷ್ಪರಿಣಾಮವನ್ನು ಬಿಂಬಿಸುವ ಬೀದಿ ನಾಟಕವನ್ನು ಕೊರಟಗೆರೆ ದಾಸರಹಳ್ಳಿಯ ಮಂಜುನಾಥ ಕಲಾ ತಂಡ ಪ್ರದರ್ಶಿಸಿ ಅರಿವು ಮೂಡಿಸಿದರು.ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ, ರಂಗನಾಥನಗರ ಒಕ್ಕೂಟದ ಕೋಶಾಧಿಕಾರಿ ರಮ್ಯ, ತಾಲೂಕು ಜ್ಞಾವಿಕಾಸದ ಸಮನ್ವಯ ಅಧಿಕಾರಿ ಮಮತ, ವಲಯದ ಮೇಲ್ವಿಚಾರಕಿ ಮೀನಾ ಇದ್ದರು.