ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಮನ್ಮುಲ್, ಪಿಎಲ್‌ಡಿ ಬ್ಯಾಂಕ್ ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್‍ಯಕರ್ತರು ವೈಮನಸ್ಸು ಬದಿಗಿಟ್ಟು ಒಗ್ಗಟ್ಟನಿಂದ ಕೆಲಸ ಮಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೇರಿಸಲು ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿವಿಮಾತು ಹೇಳಿದರು.ತಾಲೂಕಿನ ಎಲೆಕೆರೆ ಹ್ಯಾಂಡ್‌ಪೋಸ್ಟ್‌ನಲ್ಲಿರುವ ರುತ್ವಿ ಅಕ್ಷಯ್ ಕನ್ವೆನಷನ್ ಹಾಲ್‌ನಲ್ಲಿ ನಡೆದ ಜೆಡಿಎಸ್, ಕಾರ್‍ಯಕರ್ತರು ಮುಖಂಡರು ಸಭೆಯಲ್ಲಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಕ್ಷದ ಕೆಲವು ಕಾರ್‍ಯಕರ್ತರಲ್ಲಿ ವೈಮನಸ್ಸಿನಿಂದ ನಾವು ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ ಎಂದರು.
ಈ ನೋವುಗಳನ್ನು ಅನುಭವಿಸಿದ್ದೀರಾ. ಅದಕ್ಕೆ ಉತ್ತರವಾಗಿ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅತ್ಯಧಿಕ ಮತ ಕೊಟ್ಟು ಗೆಲ್ಲಿಸಿಕೊಟ್ಟಿದ್ದೀರಿ. ಹಾಗೆಯೇ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಸಹ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಪಕ್ಷವನ್ನು ಅಧಿಕಾರದ ಗದ್ದುಗೆ ಏರಿಸುವ ಕೆಲಸ ಮಾಡಬೇಕು ಎಂದರು.ಮನ್ಮುಲ್ ಚುನಾವಣೆಯ ದಿನಾಂಕ ಈಗಾಗಲೇ ನಿಗದಿಯಾಗಿದೆ. ಜತೆಗೆ ಪಿಡಿಎಲ್ ಬ್ಯಾಂಕ್ ಚುನಾವಣೆಯೂ ಸಹ ಶೀಘ್ರದಲ್ಲಿಯೇ ನಡೆಯಲಿದೆ. ಮುಂದಿನ ಜನವರಿಯಿಂದ ಮಾರ್ಚ್ ತಿಂಗಳಲ್ಲಿ ಬಹುತೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ. ಪಕ್ಷದ ಕಾರ್‍ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು. ಪಕ್ಷದಲ್ಲಿರುವ ಒಡಕುಗಳನ್ನು ಗ್ರಾಮ ಮಟ್ಟದಲ್ಲಿಯೇ ಸರಿಪಡಿಸಿಕೊಂಡು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಮನ್ಮುಲ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಮುಂದಿನ ಸೋಮವಾರ ಡಿ.23ಕ್ಕೆ ಇದೇ ರುತ್ವಿ ಅಕ್ಷಯ್ ಕನ್ವೆನಷನ್ ಹಾಲ್‌ನಲ್ಲಿ ಡೇರಿ ಎಲ್ಲಾ ಡೆಲಿಗೆಟ್(ಮತದಾನದ ಹಕ್ಕು)ಪಡೆದಿರುವ ಹಾಗೂ ಕಾರ್‍ಯಕರ್ತರು, ಮುಖಂಡರ ಸಭೆ ನಡೆಸಲಾಗುವುದು. ಅಷ್ಟರಲ್ಲಿ ಚುನಾವಣೆಗೆ ಆಕಾಂಕ್ಷಿತ ಅಭ್ಯರ್ಥಿಗಳು ಪಕ್ಷದ ಅಧ್ಯಕ್ಷರಾದ ಮಲ್ಲೇಶ್ ಅವರ ಬಳಿ ಅರ್ಜಿಸಲ್ಲಿಸಿ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಸಮರ್ಥವಾದ ಅಭ್ಯರ್ಥಿ ಆಯ್ಕೆ ಮಾಡುವ ಕೆಲಸ ಮಾಡಲಾಗುವುದು ಎಂದರು.ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಮನ್ಮುಲ್ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಬಯಸುವ ಆಕಾಂಕ್ಷಿತರು ಮೊದಲ ಅರ್ಜಿ ಸಲ್ಲಿಸಿ ನಂತರ ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚಿಸಿ ಚುನಾವಣೆಗೆ ಎದುರಿಸುವ ಸಾಮರ್ಥ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪಕ್ಷದ ಕಾರ್‍ಯಕರ್ತರು ಮುಖಂಡರು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಬಲವರ್ಧನೆಗೊಳಿಸಬೇಕು ಎಂದು ಕರೆ ನೀಡಿದರು.
ಸಭೆ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಮಾಜಿ ಸಿಎಂ ಎಸ್.ಎಂ.ಕೃಷ್ಣರಿಗೆ ಒಂದು ನಿಮಿಷ ಮೌನದ ಮೂಲಕ ಸಂತಾಪ ಸೂಚಿಸಿದರು. ಬಳಿಕ ರುತ್ವಿಕನ್ವನ್‌ಷನ್ ಹಾಲ್‌ನಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿಮೆ ಎದುರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಶುಭಹಾರೈಸಿದರು.ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಚಲುವರಾಜು, ಗುರುಸ್ವಾಮಿ, ಕ್ಯಾತನಹಳ್ಳಿ ಪ್ರವೀಣ್‌ಗವಿಗೌಡ, ತಾಪಂ ಮಾಜಿ ಅಧ್ಯಕ್ಷ ಎಂ.ಸಿ.ಯಶವಂತ್‌ಕುಮಾರ್, ಮಾಜಿ ಸದಸ್ಯ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ನಂಜೇಗೌಡ, ರುತ್ವಿಅಕ್ಷಯ್ ಕನ್ವೆನಷನ್ ಮಾಲೀಕ ಅಕ್ಷಯ್ ಸೇರಿದಂತೆ ಹಲವರು ಹಾಜರಿದ್ದರು.