ಸಾರಾಂಶ
ಸಂಘಕ್ಕೆ ಸದಸ್ಯರೇ ಜೀವಾಳ. ಅವರು ಸಾಲ ಪಡೆದು ಸಕಾಲಕ್ಕೆ ಮರುಪಾವತಿಸಿದರೆ ಸಂಘಗಳು ಉಳಿಯುತ್ತವೆ. ಸಂಘ ನಿಂತ ನೀರಾಗಬಾರು, ಅದು ಚಲನೆಯಲ್ಲಿದ್ದಾಗ ಸಂಘ ಹೆಚ್ಚೆಚ್ಚು ಬೆಳೆಯುತ್ತವೆ.
ಕೊಪ್ಪಳ:
ಸರ್ಕಾರಿ ನೌಕರರ ಹಣಕಾಸಿನ ತೊಂದರೆಗೆ ಪತ್ತಿನ ಸಹಕಾರ ಸಂಘಗಳೇ ಆಶ್ರಯ ಎಂದು ಹಿರಿಯ ಪ್ರಾಚಾರ್ಯ ರಾಜಶೇಖರ ಪಾಟೀಲ ಹೇಳಿದರು.ತಾಲೂಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ೧೫ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘಕ್ಕೆ ಸದಸ್ಯರೇ ಜೀವಾಳ. ಅವರು ಸಾಲ ಪಡೆದು ಸಕಾಲಕ್ಕೆ ಮರುಪಾವತಿಸಿದರೆ ಸಂಘಗಳು ಉಳಿಯುತ್ತವೆ. ಸಂಘ ನಿಂತ ನೀರಾಗಬಾರು, ಅದು ಚಲನೆಯಲ್ಲಿದ್ದಾಗ ಸಂಘ ಹೆಚ್ಚೆಚ್ಚು ಬೆಳೆಯುತ್ತವೆ ಎಂದರು.ನಿವೃತ್ತ ಉಪನ್ಯಾಸಕ ಸೋಮನಗೌಡ ಪಾಟೀಲ ಮಾತನಾಡಿ, ನೌಕರರಿಗೆ ಹಣಕಾಸಿನ ಅನೇಕ ತೊಂದರೆ ಎದುರಾಗಾದ ಅತ್ಯಂತ ಸರಳವಾಗಿ ಸಾಲ ಸಿಗುವ ಕೇಂದ್ರಗಳೆಂದರೆ ಪತ್ತಿನ ಸಹಕಾರಿ ಸಂಘಗಳು ಎಂದು ಹೇಳಿದರು.ಅಧ್ಯಕ್ಷ ವಿದ್ಯಾಧರ ಮೇಘರಾಜ ವಾರ್ಷಿಕ ವರದಿ ಓದಿದರು. ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿ, ನಿವೃತ್ತ ಉಪನ್ಯಾಸಕ ಎ.ವಿ. ಉಪಧ್ಯಾಯ, ಪ್ರಾಚಾರ್ಯ ಎಚ್.ಎಸ್. ದೇವರಮನಿ, ಗವಿಸಿದ್ಧಪ್ಪ ದೊಡ್ಡಮನಿ, ಕಾರ್ಯದರ್ಶಿ ರಾಚಪ್ಪ ಕೇಸರಬಾವಿ ಉಪಸ್ಥಿತರಿದ್ದರು.
ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಸ್ವಾಗತಿಸಿದರೆ, ಮಹಾನಂದಿ ಹುಣಿಸೇಮರದ ಕಾರ್ಯಕ್ರಮ ನೆರೆವೇರಿಸಿದರು. ಈ ವೇಳೆ ನಿವೃತ್ತ ಉಪನ್ಯಾಸಕರಾದ ಚಂದ್ರಶೇಖರ ಮಂಗಳೂರು, ಬಸವರಾಜ ಸವಡಿ, ಎಚ್.ಎಸ್. ಬಾರಕೇರ, ಸರೋಜ, ಟಿ.ಆರ್. ಶೇಖರಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯ ಕೊಟ್ರಪ್ಪ ಪುತ್ರ ಮಲ್ಲಿಕಾರ್ಜುನ ಅತಿ ಹೆಚ್ಚು ಅಂಕ ಗಳಿಸಿದ್ದರಿಂದ ಸನ್ಮಾನಿಸಲಾಯಿತು.