ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಿ

| Published : Jun 07 2024, 12:15 AM IST

ಸಾರಾಂಶ

ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ನಿರ್ದೇಶಕ ಸತೀಶ್ ಸುವರ್ಣ ಹೇಳಿದರು.

ಗುಬ್ಬಿ: ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ನಿರ್ದೇಶಕ ಸತೀಶ್ ಸುವರ್ಣ ಹೇಳಿದರು.

ತಾಲೂಕಿನ ಹೊದಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರು. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ನೀವು ಬೆಳವಣಿಗೆ ಆಗುವುದರ ಜೊತೆಗೆ ಗಿಡಗಳನ್ನು ಬೆಳೆಸಬೇಕು. ಧರ್ಮಸ್ಥಳ ಯೋಜನೆಯು ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಲಕ್ಷಾಂತರ ಗಿಡಗಳನ್ನು ಬೆಳೆಸುತ್ತಿದೆ ಎಂದರು.

ಗ್ರಾಪಂ ಸದಸ್ಯರಾದ ಶಿವಪ್ಪ, ಯೋಜನಾಧಿಕಾರಿ ರಾಜೇಶ್, ಗ್ರಾಮಸ್ಥ ಮಂಜುನಾಥ ಪಟೇಲ್, ನಟರಾಜು, ಶಾಲೆಯ ಮುಖ್ಯ ಶಿಕ್ಷಕ ಸುರೇಶ್, ಕೃಷಿ ಮೇಲ್ವಿಚಾರಕ ರಘುರಾಜ್, ವಲಯದ ಮೇಲ್ವಿಚಾರಕ ಶ್ರೀಮತಿ ಇಂದ್ರಮ್ಮ ಭಾಗವಹಿಸಿದ್ದರು.