ಸಾರಾಂಶ
ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷರಾಗಿ ವೈ. ಕೆ. ಮೋಳೆಯ ಕೆಂಪರಾಜುರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಆರ್. ಮೋಹನ್ ಹೇಳಿದರು.
ಯಳಂದೂರು: ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷರಾಗಿ ವೈ. ಕೆ. ಮೋಳೆಯ ಕೆಂಪರಾಜುರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಆರ್. ಮೋಹನ್ ಹೇಳಿದರು.
ಪಟ್ಟಣದಲ್ಲಿ ಆದೇಶ ಪ್ರತಿ ವಿತರಿಸಿ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣವು ಕೆಂಪರಾಜು ಅವರ ಹೋರಾಟ, ಸ್ಪಂದನಾ ಮನೋಭಾವ ಗುರುತಿಸಿ ತಾಲೂಕು ಅಧ್ಯಕ್ಷರಾಗಿ ನೇಮಿಸಲಾಗಿದೆ. ಅವರು ಮುಂದಿನ ದಿನಗಳಲ್ಲಿ ಸಂಘಟನೆಗೆ ಹೆಚ್ಚು ಗೌರವ ತಂದುಕೊಡುವ ನಿಟ್ಟಿನಲ್ಲಿ ಹೋರಾಟಗಳಿಗೆ ಅಣಿಯಾಗಬೇಕು, ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು ದಿಟ್ಟತೆ ತೋರಬೇಕು, ನೊಂದವರು, ಬಡವರ ಪರವಾಗಿ ಸ್ಪಂದಿಸುವಂತಾಗಬೇಕು ಎಂದರು.ತಾಲೂಕು ಅಧ್ಯಕ್ಷ ಕೆಂಪರಾಜು ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ನಾನು ಅಭಾರಿಯಾಗಿದ್ದು ನೊಂದವರು, ಬಡವರು, ದೀನ- ದಲಿತರ ಸಂಕಷ್ಟಗಳಿಗೆ ಅಣಿಯಾಗುವೆ, ಸಾಮಾಜಿಕ ಸೇವೆ ನನ್ನ ಗುರಿ, ನಾಡು, ನುಡಿ ಜಲ ಹಾಗೂ ವಿದ್ಯಾರ್ಥಿಗಳ ಪರವಾಗಿ ಧ್ವನಿಯಾಗುವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷ, ಜಿಲ್ಲಾ ಉಪಾಧ್ಯಕ್ಷ ನಾಗೇಶ್ ನಾಯಕ್, ಜಿಲ್ಲಾ ಗೌರವ ಸಲಹೆಗಾರ ಅಣ್ಣಗಳ್ಳಿ ಬಸವರಾಜ್, ಯಳಂದೂರು ಬಳೇಪೇಟೆ ಪಿ ಎ ಸಿ ಸಿ ಅಧ್ಯಕ್ಷ ವೈ ಬಿ ಮಹೇಶ್, ಮಂಡಲ ಮುಖಂಡರುಗಳಾದ ಅನಿಲ್, ಮಹೇಶ್, ವೈ ಡಿ ಸೂರ್ಯನಾರಾಯಣ, ಗೋವಿಂದರಾಜು, ದೊಡ್ಡರಾಜು, ಸಂಪತ್ ಕುಮಾರ್, ಮಾದೇಶ, ದೊಡ್ಡರಾಜು, ಮಹೇಶ್, ಕಿಟ್ಟಿ, ಯೋಗೇಶ್, ಪ್ರದೀಪ್, ಮಂಜುನಾಥ್, ಸುರೇಶ ಇದ್ದರು