ಸಾರಾಂಶ
ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಕೊಡ್ಲಿಪೇಟೆ ಒಕ್ಕಲಿಗ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಎರಡನೆ ವರ್ಷದ ನಾಡಪ್ರಭು ಕಂಪೇಗೌಡ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯುವರತ್ನ ತಂಡ ಚಾಂಪಿಯನ್‍ಶೀಪ್ ಪಡೆದುಕೊಂಡರೆ ಸ್ಟಾರ್ ವಾರಿಯರ್ಸ್ ತಂಡ ರನ್ನರ್ಸ್ ಸ್ಥಾನ ಪಡೆಯಿತು. 
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಯುವಕರು ಕ್ರೀಡಾ ಚಟುವಟಿಕೆಯ ಜೊತೆಯಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟಿದ್ದಾರೆ.ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಕೊಡ್ಲಿಪೇಟೆ ಒಕ್ಕಲಿಗ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಎರಡನೆ ವರ್ಷದ ನಾಡಪ್ರಭು ಕಂಪೇಗೌಡ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಗಳು ಬಹುಮಾನವಾಗಿ ಪಡೆದುಕೊಳ್ಳುವ ಹಣವನ್ನು ಗ್ರಾಮೀಣ ಭಾಗದ ಪ್ರತಿಭಾನ್ವಿತ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಲು ವಿನಿಯೋಗಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ತಹಸೀಲ್ದಾರ್ ಜಯರಾಮ್, ತಾಲೂಕು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಕೊಡ್ಲಿಪೇಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಶೇಖರ್, ಉದ್ದೇಮಿ ರಮೇಶ್, ರಾಮೇಗೌಡ, ಬ್ಯಾಡಗೊಟ್ಟ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಹನೀಪ್, ಪ್ರಮುಖರಾದ ತೇಜಕುಮಾರ್, ಜೆ.ಎಲ್.ಜನಾರ್ದನ್, ಪ್ರಸನ್ನ, ಅಭಿ, ಒಕ್ಕಲಿಗ ಯುವ ವೇದಿಕೆ ಕಾರ್ಯದರ್ಶಿ ಅವಿನಾಶ್ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.ಕೆಂಪೇಗೌಡ ಕ್ರಿಕೇಟ್ ಲೀಗ್ ನಲ್ಲಿ ಯುವರತ್ನ ತಂಡ ಚಾಂಪಿಯನ್‍ಶೀಪ್ ಪಡೆದುಕೊಂಡರೆ ಸ್ಟಾರ್ ವಾರಿಯರ್ಸ್ ತಂಡ ರನ್ನರ್ಸ್ ಸ್ಥಾನ ಪಡೆಯಿತು. ಕ್ರಿಕೇಟ್ ಪಂದ್ಯಾವಳಿಯಲ್ಲಿ ಕೊಡ್ಲಿಪೇಟೆ ಹೋಬಳಿಯಿಂದ 12 ತಂಡಗಳುಕರಡ ಬುಲ್ಸ್ ಚಾಂಪಿಯನ್ಸ್ :
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿತ 2ನೇ ವರ್ಷದ ವಿಪ್ರ ಕ್ರೀಡಾಕೂಟದ ಅಂಗವಾಗಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಕರಡ ಬುಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು, ಮಡಿಕೇರಿ ವಿಪ್ರಾಸ್ ತಂಡವು ರನ್ನರ್ ಪ್ರಶಸ್ತಿ ಪಡೆದುಕೊಂಡಿತು.ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರಡ ತಂಡ, ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 76 ರನ್ ಗಳಿಸಿತು. ತಂಡದ ಪರ ಪ್ರಕಾಶ್ 29 ಹಾಗೂ ಹರಿ 24 ರನ್ ಗಳಿಸಿದರು. ಇದನ್ನು ಬೆನ್ನಟ್ಟಿದ ಮಡಿಕೇರಿ ವಿಪ್ರಾಸ್ ತಂಡ 3 ವಿಕೆಟ್ ಗಳ ನಷ್ಟಕ್ಕೆ 6 ಓವರ್‌ಗಳಲ್ಲಿ 65 ರನ್‌ಗಳನ್ನಷ್ಟೇ ಗಳಿಸಿ ಸೋಲನುಭವಿಸಿತು. ತಂಡದ ಪರ ವಿನಯ್ 26 ರನ್ ಗಳಿಸಿದರು.ಟೂರ್ನಿಯಲ್ಲಿ ಕುಶಾಲನಗರ, ವೀರಾಜಪೇಟೆ ಈಗಲ್ಸ್, ಟೀಮ್ ಬೆನಕ, ಗೋಣಿಕೊಪ್ಪ ಅರ್ಚಕರ ಸಂಘ, ಅಡ್ವೋಕೇಟ್ ಬ್ರಹ್ಮಾಸ್, ಗುಡ್ಡೆ ಹಿತ್ಲು ಕ್ರಿಕೆಟರ್ಸ್, ಚೆಯ್ಯಂಡಾಣೆ ವಾರಿಯರ್ಸ್ ಸೇರಿ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು. ತೀರ್ಪುಗಾರರಾಗಿ ನಯನ್, ನಂದೀಶ್, ರಕ್ಷಿತ್ ಭಾಗವಹಿಸಿದ್ದರು.
ಹಗ್ಗಜಗ್ಗಾಟ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ವೀರಾಜಪೇಟೆ ಈಗಲ್ಸ್ ತಂಡ ವಿಜೇತರಾಗಿದ್ದು, ಮಹಿಳೆಯರ ವಿಭಾಗದಲ್ಲಿ ಪೊನ್ನಂಪೇಟೆ ಶ್ರೀ ದೇವಿ ತಂಡ ಜಯ ಸಾಧಿಸಿತು.ಫೆ.25ರಂದು ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣೆ ಮಡಿಕೇರಿಯ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.;Resize=(128,128))
;Resize=(128,128))
;Resize=(128,128))
;Resize=(128,128))