ತಾಂಬಾದಲ್ಲಿ ಕೆಂಪೇಗೌಡ ಜಯಂತಿ

| Published : Jun 28 2024, 12:47 AM IST

ಸಾರಾಂಶ

ಕೆಂಪೇಗೌಡರು ಎಲ್ಲ ಜಾತಿ, ಸಮುದಾಯದವರಿಗೆ ನೆಲೆ ಕಲ್ಪಿಸಿಕೊಟ್ಟು, ಬೆಂಗಳೂರು ನಗರವನ್ನು ನಿರ್ಮಿಸಿ, ಸರ್ವಧರ್ಮ ಸಹಿಷ್ಣುತೆಯ ಪ್ರಜಾನಾಯಕರಾಗಿದ್ದರು. ಅವರು ಇಂದಿಗೂ ಆದರ್ಶಪ್ರಾಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ತಾಂಬಾ: ಕೆಂಪೇಗೌಡರು ಎಲ್ಲ ಜಾತಿ, ಸಮುದಾಯದವರಿಗೆ ನೆಲೆ ಕಲ್ಪಿಸಿಕೊಟ್ಟು, ಬೆಂಗಳೂರು ನಗರವನ್ನು ನಿರ್ಮಿಸಿ, ಸರ್ವಧರ್ಮ ಸಹಿಷ್ಣುತೆಯ ಪ್ರಜಾನಾಯಕರಾಗಿದ್ದರು. ಅವರು ಇಂದಿಗೂ ಆದರ್ಶಪ್ರಾಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಕಿ ಎಸ್ ಡಿ ಬಿರಾದಾರ, ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿದರು.

ಮುಖ್ಯ ಶಿಕ್ಷಕರಾದ ವ್ಹಿ.ವೈ.ಪತ್ತಾರ, ಎ.ಎಂ.ಬೆದ್ರೇಕರ ಹಾಗೂ ಶಿಕ್ಷಕರಾದ ಎಸ್‌ಎಸ್‌.ಅರಬ, ಜೆ.ಎಂ.ಪತಂಗಿ, ಎಸ್.ಎಂ.ಪಂಚಮುಖಿ, ಎಸ್.ಬಿ.ಕುಲಕರ್ಣಿ, ಸಾವಿತ್ರಿ ಸಂಗಮದ, ಎನ್.ಬಿ.ಚೌದರಿ, ಎಸ್ ಪಿ ಪೂಜಾರಿ, ಎಸ್.ಎನ್.ಡಂಗಿ, ಜೆ.ಸಿ.ಗುಣಕಿ, ಎಸ್ ವ್ಹಿ ಬೇನೂರ, ಎಫ್‌.ಎ.ಹೊರ್ತಿ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.