ಸಾರಾಂಶ
ತರೀಕೆರೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಪೂರ್ವಾಭಾವಿ ಸಭೆಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ಎಂ. ಉಮಾಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ನಂದಕುಮಾರ್, ಕೆ.ವಿ. ನಾಗೇಶ್ ಗೌಡ, ಶಂಕರಪ್ಪ, ಸುಂದರೇಶ್ ಗೌಡ, ತಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು..
ಕನ್ನಡಪ್ರಭವಾರ್ತೆ ತರೀಕೆರೆ
ಪ್ರತಿ ವರ್ಷದಂತೆ ಜೂನ್ ೨೭ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡ ಜಯಂತಿ ಈ ಭಾರಿಯೂ ಸಹ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು ಕಾರ್ಯಕ್ರಮಕ್ಕೆ ಇತ್ತೀಚೆಗೆ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಎಸ್. ಎಲ್. ಭೋಜೇಗೌಡ ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿರುವ ಸಿ.ಟಿ. ರವಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಹ್ವಾನಿಸಿ ಸನ್ಮಾನಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ನಡೆದ ಪೂರ್ವಾಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ಎಂ. ಉಮಾಶಂಕರ್ ಈ ನಿರ್ಧಾರ ಪ್ರಕಟಿಸಿದರು.ತರೀಕೆರೆ ತಾಲೂಕಿನಲ್ಲಿ ಕಸಬಾ, ಲಕ್ಕವಳ್ಳಿ, ಲಿಂಗದಹಳ್ಳಿ ಹೋಬಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಒಕ್ಕಲಿಗ ಕುಲಬಾಂಧವರು ಇದ್ದು ಪ್ರತಿ ವರ್ಷ ಒಂದೊಂದು ಹೋಬಳಿ ಮುಖ್ಯ ಕೇಂದ್ರಗಳಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆದರೆ ಆಯಾ ಹೋಬಳಿಯ ಒಕ್ಕಲಿಗರಿಗೆ ಅನುಕೂಲವಾಗಲಿದೆ. ಈ ಕಾರ್ಯಕ್ರಮಕ್ಕೆ ತಾಲೂಕು ಸಂಘದ ವತಿಯಿಂದ ಅಗತ್ಯ ಮಾರ್ಗದರ್ಶನ ಸಲಹೆ ಸೂಚನೆ ನೀಡುವುದಾಗಿ ಅವರು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಲಿಂಗದಹಳ್ಳಿ ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ತಮ್ಮಯ್ಯ ಮಾತನಾಡಿ, ಲಿಂಗದಹಳ್ಳಿ ಹೋಬಳಿಯಲ್ಲಿ ಕಳೆದ ಬಾರಿ ಭೀಕರ ಬರಗಾಲವಿದ್ದ ಕಾರಣ ಕಾರ್ಯಕ್ರಮ ನಡೆಸಲು ಕಷ್ಟಕರವಾಗಿತ್ತು. ಮುಂಬರುವ ವರ್ಷಗಳಲ್ಲಿ ಅವಕಾಶ ಸಿಕ್ಕರೆ ಲಿಂಗದಹಳ್ಳಿ ಹೋಬಳಿಯಲ್ಲಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡುವುದಾಗಿ ತಿಳಿಸಿದರು.ತರೀಕೆರೆ ಪಟ್ಟಣದಲ್ಲೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ನಡೆಸೋಣ ಎಂದು ಲಕ್ಕವಳ್ಳಿ ಹೋಬಳಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಟಿ.ವಿ. ನಾಗೇಶ್ ಗೌಡ, ಶಂಕರೇಗೌಡ, ಎಂ.ಸಿ. ಹಳ್ಳಿ ದೇವೇಗೌಡ, ಕಾರ್ಯದರ್ಶಿ ಸುಂದರೇಶಗೌಡ, ಟಿ.ಎಂ. ಕೃಷ್ಣ, ಭೀಮೇಶ್, ನಂದಕುಮಾರ್, ಕುಮಾರಣ್ಣ, ಪರಮೇಶ್ವರಪ್ಪ ಮತ್ತು ಮಹಿಳಾ ಚುಂಚಶ್ರೀ ಘಟಕದ ಅಧ್ಯಕ್ಷರಾದ ರಾಜೇಶ್ವರಿ ನಂದಕುಮಾರ್, ಕಾರ್ಯದರ್ಶಿ ಕಲಾವತಿ, ಲಿಂಗದಹಳ್ಳಿ ಹೋಬಳಿ ಘಟಕದ ಕಾರ್ಯದರ್ಶಿ ಎಂ.ಆರ್. ಧನಂಜಯ, ಸಿದ್ದಯ್ಯ, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.