ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಜಗತ್ತಿನಲ್ಲಿ ಖ್ಯಾತಿ: ಮಲ್ಲಿಕಾರ್ಜುನ್

| Published : Jul 25 2025, 12:30 AM IST

ಸಾರಾಂಶ

ಇಂದಿಗೂ ಬೆಂಗಳೂರಿನಲ್ಲಿ 64 ವಿವಿಧ ಕುಶಲಕರ್ಮಿಗಳ ಹೆಸರಿನ ಪ್ರದೇಶಗಳಿವೆ.‌ ಕೃಷಿ ಹಾಗೂ ಕುಡಿಯುವ ನೀರಿಗೆ ಮಾದರಿಯಾದ ಜಲ ವ್ಯವಸ್ಥೆ ರೂಪಿಸಲಾಗಿತ್ತು. ನಗರದಲ್ಲೇ ನೂರಾರು ಕೆರೆ ನಿರ್ಮಿಸಿದ ಮಹನೀಯರ ಜಯಂತ್ಯುತ್ಸವ ಮಾಡುತ್ತಿರುವ ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ವೇಗವಾಗಿ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತು ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ಜೈನಹಳ್ಳಿಯ ಶ್ರೀಕೆಂಪೇಗೌಡ ಗೆಳಯರ ಬಳಗದಿಂದ ನಡೆದ ನಾಡಪ್ರಭು ಶ್ರೀಕೆಂಪೇಗೌಡರ 516ನೇ ಜಯಂತ್ಯುತ್ಸವ ಪ್ರಯುಕ್ತ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ನಗರ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದ ಕೆಂಪೇಗೌಡರು ಕೃಷಿಕರು, ಕುಶಲಕರ್ಮಿಗಳು, ವ್ಯಾಪಾರಸ್ಥರು, ಜನಸಾಮಾನ್ಯರ ಅಗತ್ಯಗಳನ್ನು ಅರಿತು ಎಲ್ಲರಿಗೂ ವಿಷೇಶವಾದ ಪ್ರಾತಿನಿಧ್ಯ ನೀಡಿದರು ಎಂದರು.

ಇಂದಿಗೂ ಬೆಂಗಳೂರಿನಲ್ಲಿ 64 ವಿವಿಧ ಕುಶಲಕರ್ಮಿಗಳ ಹೆಸರಿನ ಪ್ರದೇಶಗಳಿವೆ.‌ ಕೃಷಿ ಹಾಗೂ ಕುಡಿಯುವ ನೀರಿಗೆ ಮಾದರಿಯಾದ ಜಲ ವ್ಯವಸ್ಥೆ ರೂಪಿಸಲಾಗಿತ್ತು. ನಗರದಲ್ಲೇ ನೂರಾರು ಕೆರೆ ನಿರ್ಮಿಸಿದ ಮಹನೀಯರ ಜಯಂತ್ಯುತ್ಸವ ಮಾಡುತ್ತಿರುವ ಶ್ಲಾಘನೀಯ ಎಂದರು.

ಜೈನಹಳ್ಳಿ ಯುವಕರು ಕೆಂಪೇಗೌಡರಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಗ್ರಾಮದಲ್ಲಿ ಪುತ್ತಳಿ ನಿರ್ಮಾಣಕ್ಕೆ ಯುವಕರು ಮನವಿ ನೀಡಿದ್ದಾರೆ. ನಾನು ಕೂಡ ವೈಯಕ್ತಿಕವಾಗಿ ಕೈಲಾದ ಸಹಾಯ ನೀಡುತ್ತೇನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ ಲೋಕೇಶ್, ಜೈನಹಳ್ಳಿ ಗ್ರಾಮಕ್ಕೆ ವಿಶೇಷ ಇತಿಹಾಸದ ಜೊತೆಗೆ ಜೆಡಿಎಸ್ ಪಕ್ಷಕ್ಕೆ ಪ್ರತಿ ಚುನಾವಣೆಯಲ್ಲೂ ಶಕ್ತಿ ತುಂಬುತ್ತಿರುವ ಗ್ರಾಮ. ನಾಡಪ್ರಭು ಶ್ರೀ ಕೆಂಪೇಗೌಡರು ನಿಷ್ಕಳಂಕ ಜೀವನ, ಅಚಲ ಸ್ವಾಮಿ ನಿಷ್ಠೆ, ಅನುಪಮ ದೈವ ಭಕ್ತಿಗಳು ನಾಡಿಗೆ ಮಾದರಿಗಳಾಗಿವೆ ಎಂದರು.

ಕೆಂಪೇಗೌಡರ ಆಡಳಿತ ಕುಶಲತೆ ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ವಿಚಾರ ಧಾರೆಗಳನ್ನು ಯುವ ಸಮುದಾಯಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಈ ವೇಳೆ ಜೈನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರಣಿ, ಗ್ರಾಪಂ ಉಪಾಧ್ಯಕ್ಷ ಸುಂದ್ರೇಶ್, ಸದಸ್ಯರಾದ ನಾಗಮ್ಮ ಜಾಲೆಂದ್ರ, ತಾರಾ ಮುಕುಂದ, ಹಿರಿಯ ಮುಖಂಡರಾದ ನಂಜುಂಡಶೆಟ್ಟಿ, ನರಸೇಗೌಡ, ನೀಲಕಂಠ ಶಾಸ್ತ್ರಿ, ರಾಮಕೃಷ್ಣಗೌಡ, ನಿವೃತ್ತ ಶಿಕ್ಷಕ ಚಂದ್ರೆಗೌಡ, ರಾಮೇಗೌಡ, ಗೌಡೇಗೌಡ, ಕೆಂಪೇಗೌಡ ಸಂಘದ ಅಧ್ಯಕ್ಷ ಚಂದ್ರೆಗೌಡ, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಕಿರಣ್, ಸಹ ಕಾರ್ಯದರ್ಶಿ ಪ್ರತಾಪ್, ಖಜಾಂಚಿ ಶಿವೇಗೌಡ,ಜೆ.ಎಂ ಸುನಿಲ್,ತುಳಸಿ ರಾಮೇಗೌಡ, ಅಶೋಕ್, ಮಂಜುನಾಥ್ ,ಜೇ.ಜೆ ನಿಂಗರಾಜೇಗೌಡ, ಯುವ ಮುಖಂಡ ಸಂತೋಷ್ ಸೇರಿದಂತೆ ಉಪಸ್ಥಿತರಿದ್ದರು.