ಸಾರಾಂಶ
ವಿಜಯಪುರ: ನಗರದಲ್ಲಿರುವ ಹೆಸ್ಕಾಂ ಗ್ರಾಮೀಣ ಉಪ ವಿಭಾಗದ ಕಚೇರಿಯನ್ನು ಹೊರವಲಯದ ಶಿವಗಿರಿಗೆ ಸ್ಥಳಾಂತರ ಮಾಡುವುದನ್ನು ತಡೆಹಿಡಿಯುವಂತೆ ಒತ್ತಾಯಿಸಿ ರೈತ ಭಾರತ ಪಕ್ಷದಿಂದ ಅಧೀಕ್ಷಕ ಅಭಿಯಂತರರು ಹೆಸ್ಕಾಂ ವಿಜಯಪುರ ಅವರ ಮೂಲಕ ಹುಬ್ಬಳ್ಳಿಯ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ, ನಗರ ಶಾಸಕರು ಹಾಗೂ ನಾಗಠಾಣ ಮತಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಹೊಸ ಕಟ್ಟಡವನ್ನು ಕಟ್ಟಿಸಿದ್ದು, ಅಲ್ಲಿಗೆ ಗ್ರಾಮೀಣ ಉಪವಿಭಾಗವನ್ನು ಸ್ಥಳಾಂತರ ಮಾಡುವುದರಿಂದ ಹಳ್ಳಿಯ ಜನರಿಗೆ ನೇರವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅನಾನುಕೂಲಗಳಾಗುತ್ತವೆ. ನೇರವಾಗಿ ಅಲ್ಲಿಗೆ ಹೋಗಲು ಬಸ್ಸಿನ ಸೌಕರ್ಯ ಇಲ್ಲದಿರುವುದರಿಂದ ಗ್ರಾಹಕರಿಗೆ ಇದರಿಂದ ಅನುಕೂಲವಾಗುವುದಿಲ್ಲ. ಆದಕಾರಣ ಕೂಡಲೇ ಗ್ರಾಮೀಣ ಉಪ ವಿಭಾಗವನ್ನು ಸ್ಥಳಾಂತರ ಮಾಡಬಾರದು. ಈಗಿರುವಲ್ಲೇ ಮುಂದುವರಿಸಿ ವಿಜಯಪುರ ನಗರದಲ್ಲಿ ಇನ್ನೊಂದು ಉಪ ವಿಭಾಗವನ್ನು ಮಾಡಬೇಕು. ಈ ಭಾಗದ ಜನರು ತಮ್ಮ ದಿನ ನಿತ್ಯದ ಕೆಲಸಗಳಿಗೆ ಸೋಲಾಪುರ ರಸ್ತೆಗೆ ಹೋಗಿಬರಲು ಅನಾನುಕೂಲವಾಗುತ್ತದೆ. ಈಗಿರುವ ಕಟ್ಟಡದಲ್ಲಿ ವಿಜಯಪುರ ನಗರ ವಿಭಾಗ-3ನ್ನು ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಗ್ರಾಮೀಣ ಉಪ ವಿಭಾಗವನ್ನು ಸ್ಥಳಾಂತರ ಮಾಡಬಾರದು. ಒಂದು ವೇಳೆ ಮಾಡಲು ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಹೆಗಡಿಹಾಳ ತಾಂಡಾ ಮುಖಂಡ ಗಂಗಾರಾಮ ರಾಠೋಡ ಉಪಸ್ಥಿತರಿದ್ದರು.