ಮೆಟ್ರೋ: ಕೆಂಗೇರಿ-ಚಲ್ಲಘಟ್ಟಸುರಕ್ಷತಾ ತಪಾಸಣೆ ಪೂರ್ಣ

| Published : Oct 04 2023, 01:00 PM IST

ಮೆಟ್ರೋ: ಕೆಂಗೇರಿ-ಚಲ್ಲಘಟ್ಟಸುರಕ್ಷತಾ ತಪಾಸಣೆ ಪೂರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್‌) ಶುಕ್ರವಾರ ಸುರಕ್ಷತಾ ತಪಾಸಣೆ
ಕನ್ನಡಪ್ರಭ ವಾರ್ತೆ ಬೆಂಗಳೂರು ನಮ್ಮ ಮೆಟ್ರೋದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್‌) ಶುಕ್ರವಾರ ಸುರಕ್ಷತಾ ತಪಾಸಣೆ ನಡೆಸಿದ್ದು, ಮುಂದಿನ ವಾರ ಈ ಮಾರ್ಗದ ಕಾರ್ಯಾಚರಣೆಗೆ ಒಪ್ಪಿಗೆ ನೀಡುವ ನಿರೀಕ್ಷೆಯಿದೆ. ನೇರಳೆ ಕಾರಿಡಾರ್‌ನ ವಿಸ್ತರಿತ 1.9 ಕಿಮೀ ಅಂತರದ ಈ ಮಾರ್ಗ ಇದಾಗಿದೆ. ಮುಂದಿನ ಮಂಗಳವಾರ ಬೆಂಗಳೂರು ಮೆಟ್ರೋ ರೈಲ್ವೆ ನಿಗಮಕ್ಕೆ ಸಿಎಂಆರ್‌ಎಸ್‌ ಈ ಮಾರ್ಗದ ಸುರಕ್ಷತಾ ಪ್ರಮಾಣಪತ್ರ ಸಲ್ಲಿಸುವ ನಿರೀಕ್ಷೆಯಿದೆ. ಕೆಲ ನಿಬಂಧನೆಗಳೊಂದಿಗೆ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಇದಾದ ಬಳಿಕ ಮುಂದಿನ ವಾರವೇ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಮಾರ್ಗದ ಕಾರ್ಯಾಚರಣೆ ಉದ್ಘಾಟನೆಗೆ ದಿನ ನಿಗದಿಸುವಂತೆ ಕೋರಿ ಪತ್ರ ಬರೆಯಲಾಗುವುದು ಎಂದು ಮೆಟ್ರೋ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಸಿಎಂಆರ್‌ಎಸ್‌ ತಪಾಸಣೆ ಹಿನ್ನೆಲೆಯಲ್ಲಿ ಇಡೀದಿನ ಕೆಂಗೇರಿ ಮತ್ತು ಮೈಸೂರು ರಸ್ತೆ ನಿಲ್ದಾಣ ಮೆಟ್ರೋ ಮಾರ್ಗ ಬಂದ್‌ ಆಗಿತ್ತು. ಅಲ್ಲದೆ, ಸಿಗ್ನಲಿಂಗ್ ಕಾರಣಕ್ಕೆ ಕೆ.ಆರ್‌.ಪುರ- ಗರುಡಾಚಾರ್‌ಪಾಳ್ಯ ನಡುವಿನ ಮೆಟ್ರೋ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ವಿಸ್ತರಿತ ಮಾರ್ಗದ ಕೆ.ಆರ್‌.ಪುರ-ಬೈಯ್ಯಪ್ಪನಹಳ್ಳಿ (2 ಕಿ.ಮೀ.) ನಡುವೆ ಈಗಾಗಲೇ ತಪಾಸಣೆ ಪೂರ್ಣಗೊಂಡಿದ್ದು, ಇಲ್ಲಿ ರೈಲ್ವೆ ಸಂಚಾರಕ್ಕೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ್ದಾರೆ. ಇದೀಗ ಕೆಂಗೇರಿ- ಚಲ್ಲಘಟ್ಟ (1.9 ಕಿ.ಮೀ) ಮಾರ್ಗದ ತಪಾಸಣೆಯೂ ಮುಗಿದಿದ್ದು, ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ 43 ಕಿ.ಮೀ. ರೈಲ್ವೆ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. --- ಫೋಟೋ ನಮ್ಮ ಮೆಟ್ರೋದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್‌) ಶುಕ್ರವಾರ ಸುರಕ್ಷತಾ ತಪಾಸಣೆ ನಡೆಸಿತು.