ರಾಜಧನ, ಜಿಎಸ್‌ಟಿ ವಂಚಿಸಿ ಕೇರಳಕ್ಕೆ ನೈಸರ್ಗಿಕ ಸಂಪತ್ತು ಲೂಟಿ!

| Published : Apr 04 2025, 12:47 AM IST

ರಾಜಧನ, ಜಿಎಸ್‌ಟಿ ವಂಚಿಸಿ ಕೇರಳಕ್ಕೆ ನೈಸರ್ಗಿಕ ಸಂಪತ್ತು ಲೂಟಿ!
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳ ರಾಜ್ಯಕ್ಕೆ ರಾಯಲ್ಟಿ, ಎಂಡಿಪಿ ಹಾಗೂ ಜಿಎಸ್‌ಟಿ ವಂಚಿಸಿ ಕಲ್ಲು,ಎಂ.ಸ್ಯಾಂಡ್‌ ರಾಜಾರೋಷವಾಗಿ ನೂರಾರು ಟ್ರಿಪ್‌ ದೊಡ್ಡ ದೊಡ್ಡ ಟಿಪ್ಪರ್‌ ತೆರಳುತ್ತಿದ್ದರೂ ತಾಲೂಕು ಆಡಳಿತ ವಂಚನೆ ತಪ್ಪಿಸಲು ಸಂಪೂರ್ಣ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೇರಳ ರಾಜ್ಯಕ್ಕೆ ರಾಯಲ್ಟಿ, ಎಂಡಿಪಿ ಹಾಗೂ ಜಿಎಸ್‌ಟಿ ವಂಚಿಸಿ ಕಲ್ಲು,ಎಂ.ಸ್ಯಾಂಡ್‌ ರಾಜಾರೋಷವಾಗಿ ನೂರಾರು ಟ್ರಿಪ್‌ ದೊಡ್ಡ ದೊಡ್ಡ ಟಿಪ್ಪರ್‌ ತೆರಳುತ್ತಿದ್ದರೂ ತಾಲೂಕು ಆಡಳಿತ ವಂಚನೆ ತಪ್ಪಿಸಲು ಸಂಪೂರ್ಣ ವಿಫಲವಾಗಿದೆ.

ಪ್ರತಿ ನಿತ್ಯ ಬೆಳಗ್ಗೆಯಿಂದ ರಾತ್ರಿ 9 ರ ತನಕ ನೂರಾರು ದೊಡ್ಡ ದೊಡ್ಡ ಟಿಪ್ಪರ್‌ಗಳಲ್ಲಿ ಕಲ್ಲು,ಎಂ.ಸ್ಯಾಂಡ್‌,ಜಲ್ಲಿ ಎಂಡಿಪಿ ಹಾಗೂ ರಾಯಲ್ಟಿ ಜೊತೆಗೆ ಜಿಎಸ್‌ಟಿ ವಂಚಿಸಿ ಪೊಲೀಸ್‌ ಹಾಗೂ ಅರಣ್ಯ ಇಲಾಖೆಗಳ ಚೆಕ್‌ ಪೋಸ್ಟ್‌ ಗಳ ಮುಂದೆಯೇ ತೆರಳುತ್ತಿವೆ.

ನೆರೆ ರಾಜ್ಯವಾದ ಕೇರಳಕ್ಕೆ ಗುಂಡ್ಲುಪೇಟೆ ತಾಲೂಕಿನಿಂದ ತೆರಳುವ ಟಿಪ್ಪರ್‌ ಗಳಲ್ಲಿ ಎಂಡಿಪಿ, ರಾಯಲ್ಟಿ ಇದೆಯಾ? ಎಷ್ಟು ಟನ್‌ ಇದೆ? ಜಿಎಸ್‌ಟಿ ಕಟ್ಟಿದೆಯಾ? ಎಂದು ಕೇಳುವ ತಾಕತ್ತು ಅರಣ್ಯ ಹಾಗೂ ಪೊಲೀಸ್‌ ಚೆಕ್‌ ಪೋಸ್ಟ್‌ ಗೆ ಇಲ್ಲ!

ಕಾರಣ ಟಿಪ್ಪರ್‌ ಗಳ ಮಾಲೀಕರು ಕೇರಳ ಮೂಲದ ವ್ಯಕ್ತಿಯ ಏಜೆಂಟ್‌ ಮೂಲಕ ಅರಣ್ಯ ಹಾಗೂ ಪೊಲೀಸ್‌ ಚೆಕ್‌ ಪೋಸ್ಟ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೂ ಟಿಪ್ಪರ್‌ ಗೆ ಇಷ್ಟು ಹಣ ಅಂತ ನಿಗದಿಪಡಿಸಿರುವ ಕಾರಣ ಟಿಪ್ಪರ್‌ ಗಳು ಚೆಕ್‌ ಪೋಸ್ಟ್‌ ಮುಂದೆ ಹೋದರೂ ತಡೆದು ಕೇಳುತ್ತಿಲ್ಲ ಎಂಬ ದೂರಿದೆ.

ಒಂದು ಎಂಡಿಪಿ,ರಾಯಲ್ಟಿಯಲ್ಲಿ ಪ್ರತಿ ನಿತ್ಯ ನಾಲ್ಕಾರು ಟ್ರಿಪ್ ಕಲ್ಲು, ಎಂ.ಸ್ಯಾಂಡ್‌,ಜಲ್ಲಿ ತೆರಳುತ್ತಿದೆ. ಇದನ್ನು ಕೇಳಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಭಾಗದ ಭೂ ವಿಜ್ಞಾನಿ ತಪಾಸಣೆಗೆ ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೆ ಎಂಡಿಪಿ,ರಾಯಲ್ಟಿ,ಜಿಎಸ್‌ಟಿ ಇಲ್ಲದೆ ಟಿಪ್ಪರ್‌ ಹಗಲು ರಾತ್ರಿ ಹೋಗುತ್ತಿರುವ ಬಗ್ಗೆ ಪೊಲೀಸ್‌, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಅಧಿಕಾರಿಗಳಿಗೆ ಗೊತ್ತಿದೆ ಆದರೆ ಲಂಚದಾಸೆಗೆ ದಿಢೀರ್‌ ತಪಾಸಣೆ ನಡೆಸುತ್ತಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಅಲ್ಲೊಂದು ಇಲ್ಲೊಂದು ಕೇಸು ಹಾಕುತ್ತೆ, ರಾಜಕಾರಣಿಗಳ ಒತ್ತಡ ಬಂದ್ರೆ ದಂಡ ಹಾಕಿ ಬಿಟ್ಟು ಕಳುಹಿಸುವ ಚಾಳಿ ಇದೆ.

ಓಪನ್‌ ಗೂ ಮುಂಚೆ

ಬೆಳಗ್ಗೆ ಆರು ಗಂಟೆಗೆ ಮದ್ದೂರು ಚೆಕ್‌ ಪೋಸ್ಟ್‌ ಓಪನ್‌ ಆಗುತ್ತೇ? ಟಿಪ್ಪರ್‌ ಗಳು ಎಂಡಿಪಿ,ರಾಯಲ್ಟಿ,ಜಿಎಸ್‌ಟಿ ಇಲ್ಲದೆ ೨೫ ರಿಂದ ೩೦ ಟಿಪ್ಪರ್‌ ಗಳು ಚೆಕ್‌ ಪೋಸ್ಟ್‌ ಓಪನ್‌ ಆಗೋದೆ ತಡೆ ಒಂದರ ಹಿಂದೆ ಒಂದು ಸಾಗುತ್ತವೆ ಎಂದು ಸ್ಥಳೀಯರು ದೂರಿದ್ದಾರೆ.

ಬೆಳಗ್ಗೆ ೫ ಗಂಟೆಗೆ ಚೆಕ್‌ ಪೋಸ್ಟ್‌ ಗೆ ಬರುವ ಟಿಪ್ಪರ್‌ ಗಳು ಯಾವುದೇ ಎಂಡಿಪಿ, ರಾಯಲ್ಟಿ, ಜಿಎಸ್‌ಟಿ ಇಲ್ಲದ ಟಿಪ್ಪರ್‌ ಗಳು ಬಂದು ನಿಲ್ಲುತ್ತವೆ. ಗೇಟ್‌ ಓಪನ್‌ ಆದ ತಕ್ಷಣ ಟಿಪ್ಪರ್‌ ಕೇರಳದತ್ತ ಸಂಚರಿಸುತ್ತಿವೆ.

ತಾಲೂಕಿನ ನೈಸರ್ಗಿಕ ಸಂಪತ್ತು ರಾಜಧನ ವಂಚನೆ ಜೊತೆಗೆ ಜಿಎಸ್‌ಟಿ ಇಲ್ಲದೆ ಅಕ್ರಮವಾಗಿ ರಾಜಾರೋಷವಾಗಿ ಕೇರಳಕ್ಕೆ ಲೂಟಿ ಆಗುತ್ತಿದ್ದರೂ ಜಿಲ್ಲಾಡಳಿತ ಬ್ರೇಕ್‌ ಹಾಕದೆ ಇರುವುದು ಗಮನಿಸಿದರೆ ಜಿಲ್ಲಾಡಳಿತ ಈ ದಂಧೆಯಲ್ಲಿ ಶಾಮೀಲಾಗಿದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.