ರಾಜ್ಯಗಳ ಮಧ್ಯೆ ಬಾಂಧವ್ಯ ಬೆಳೆಯಲುಭಾಷೆ ಕೂಡ ಮುಖ್ಯ: ಸಚಿವೆ ಶೋಭಾ

| Published : Oct 08 2024, 01:04 AM IST

ರಾಜ್ಯಗಳ ಮಧ್ಯೆ ಬಾಂಧವ್ಯ ಬೆಳೆಯಲುಭಾಷೆ ಕೂಡ ಮುಖ್ಯ: ಸಚಿವೆ ಶೋಭಾ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳದ ವಿದ್ಯಾರ್ಥಿಗಳು ಕನ್ನಡ ಭಾಷೆ ಕಲಿತು ರಾಜ್ಯಗಳ ಮಧ್ಯೆ ಬಾಂಧವ್ಯ ಬೆಸೆಯಬೇಕು. ಭಾಷೆಯಲ್ಲಿ ಭೇದಭಾವ ತೋರಬಾರದು. ನಾವೆಲ್ಲಾ ಭಾರತಾಂಭೆ ಮಕ್ಕಳು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪೀಣ್ಯ ದಾಸರಹಳ್ಳಿ:

ಎಂ.ಎ.ಜೆ ಫೌಂಡೇಷನ್ ಧನ್ವಂತರಿ ಶಿಕ್ಷಣ ಸಂಸ್ಥೆಯಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ‘ಆರ್ಮಧಮ್ 2024 ಓಣಂ’ ಆಚರಣೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಸ್.ಮುನಿರಾಜು ಜ್ಯೋತಿ ಬೆಳಗಿಸಿ ಮಾತನಾಡಿದರು.

ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ವೈಶಿಷ್ಟ್ಯ ಸಂಪ್ರದಾಯವಿದ್ದು, ಅದರಂತೆ ಕೇರಳದ ಓಣಂ ಹಬ್ಬ ದೇಶದಲ್ಲೇ ಗಮನ ಸೆಳೆದಿದೆ. ಧನ್ವಂತರಿ ಶಿಕ್ಷಣ ಸಂಸ್ಥೆ ಕೇರಳದಿಂದ ವ್ಯಾಸಂಗಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಓಣಂ ಆಚರಣೆ ಹಮ್ಮಿಕೊಂಡಿರುವುದು ಎರಡು ರಾಜ್ಯಗಳ ಭಾಂದವ್ಯ ಬೆಸೆಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಶಾಸಕ ಎಸ್.ಮುನಿರಾಜು ಮಾತಾನಾಡಿ, ಓಣಂ ಹಬ್ಬವು ದೇಶದ ಸಂಸ್ಕೃತಿಯನ್ನು ಬೆಸೆಯುವುದರೊಂದಿಗೆ ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬ. ಈ ಸಾಂಸ್ಕೃತಿಕ ಹಬ್ಬ ಎಲ್ಲರಿಗೂ ಸಮೃದ್ಧಿಯನ್ನು ಹಾಗೂ ಒಳಿತನ್ನು ತರಲಿ ಎಂದರು.

ಕಾಲೇಜಿನ ಚೇರ್ಮನ್ ಜೆ.ಆರಿಫ್ ಅಹಮದ್, ಅಕಾಡೆಮಿಕ್ ಡೈರೆಕ್ಟರ್ ಡಾ। ಗಣೇಶ್, ಪ್ರಾಂಶುಪಾಲೆ ಲಕ್ಷ್ಮೀದೇವಿ, ಶಿಕ್ಷಣ ತಜ್ಞ ಗೋಪಿನಾಥ್ ವನ್ನಾರಿ, ದಾಸರಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಸೋಮಶೇಖರ್, ನಾಸಿಂ ಫೌಂಡೇಶನ್ ಯುಎಸ್ಎ ಅಧ್ಯಕ್ಷ ಸೈಯದ್ ಅಕ್ರಂ ಇದ್ದರು.