ಡ್ರಗ್ಸ್ ವಿರುದ್ಧ ಕೇರಳ ಟು ಕಾಶ್ಮೀರ್ ಸೈಕಲ್ ಯಾತ್ರೆ

| Published : Mar 22 2024, 01:04 AM IST

ಡ್ರಗ್ಸ್ ವಿರುದ್ಧ ಕೇರಳ ಟು ಕಾಶ್ಮೀರ್ ಸೈಕಲ್ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಸೇ ನೋ ಡ್ರಗ್ಸ್’ ಎನ್ನುವ ಬಿತ್ತಿಪತ್ರ ಹಿಡಿದು, ವಿಶ್ವದಾಖಲೆಗಾಗಿ ಒಂದೇ ಚಕ್ರವಿರುವ ಸೈಕಲ್‌ನಲ್ಲಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಸಾಫ್ಟ್‌ವೇರ್ ಎಂಜಿನಿಯರ್ ಸನಿದ್ ಮತ್ತು ಅವನ ಸ್ನೇಹಿತರಾದ ತಾಹಿರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಅಭಿಷೇಕ್ ಸೈಕಲ್‌ ಯಾತ್ರೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಲ್ಯಾಣಪುರಯುವಸಮಾಜವನ್ನು ನಾಶ ಮಾಡುತ್ತಿರುವ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಸೇ ನೋ ಡ್ರಗ್ಸ್’ ಎನ್ನುವ ಬಿತ್ತಿಪತ್ರ ಹಿಡಿದು, ವಿಶ್ವದಾಖಲೆಗಾಗಿ ಒಂದೇ ಚಕ್ರವಿರುವ ಸೈಕಲ್‌ನಲ್ಲಿ ಹೊರಟ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಸಾಫ್ಟ್‌ವೇರ್ ಎಂಜಿನಿಯರ್ ಸನಿದ್ ಮತ್ತು ಅವನ ಸ್ನೇಹಿತರಾದ ತಾಹಿರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಅಭಿಷೇಕ್ ಅವರನ್ನು ಸಂತೆಕಟ್ಟೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ದರ್ಬಾರ್ ಮೂಲಕ ಬರಮಾಡಿಕೊಳ್ಳಲಾಯಿತು.ನಂತರ ಕಾಲೇಜಿನ ವರಾಂಡದಲ್ಲಿ ವಿದ್ಯಾರ್ಥಿಗಳಿಗೆ ಏಕಚಕ್ರ ಸೈಕಲ್‌ನ ಪ್ರಾತ್ಯಕ್ಷಿಕೆ ತೋರಿಸಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ವಹಿಸಿದ್ದರು.ಉಪ ಪ್ರಾಂಶುಪಾಲರಾದ ಸೋಫಿಯಾ ಡಯಾಸ್, ವಿದ್ಯಾರ್ಥಿ ದರ್ಬಾರ್‌ನ ಸಂಚಾಲಕ ಡಾ.ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಅನಿಲ್ ದಾಂತೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.* ಲೀಕ್ ಔಟ್ ನಾಟಕ ಪ್ರದರ್ಶನ

ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿ ದರ್ಬಾರ್ ಸಹಯೋಗದಲ್ಲಿ ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಅವರ ಲೀಕ್ ಔಟ್ ಏಕವ್ಯಕ್ತಿ ನಾಟಕ ಪ್ರದರ್ಶನ ಕಾಲೇಜಿನ ವರಾಂಡದಲ್ಲಿ ಪ್ರದರ್ಶಿಸಲಾಯಿತು. ಸುಮಾರು ಒಂದೂವರೆ ಗಂಟೆ ನಾಟಕ ಪ್ರದರ್ಶನ ನಂತರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ವಿದ್ಯಾರ್ಥಿ ದರ್ಬಾರ್ ಸಂಚಾಲಕ ಡಾ. ನಿತ್ಯಾನಂದ ಶೆಟ್ಟಿ, ಉಪ ಪ್ರಾಂಶುಪಾಲೆ ಸೋಫಿಯಾ ಡಯಾಸ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.