ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿಪಂ ಮಾಜಿ ಸದಸ್ಯ ಕೆರೆಹಳ್ಳಿ ನವೀನ್ ಸತತ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಮಹದೇವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮದ ಸಹಕಾರ ಸಂಘದ ದಿ.ಎಚ್.ಎಸ್.ಮಹದೇವಪ್ರಸಾದ್ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆರೆಹಳ್ಳಿ ನವೀನ್, ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಯ್ಯ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಡಿ.ಎಲ್. ಸುರೇಶ್ ಅವರು ಅಧಿಕೃತವಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು. ಸಭೆಯಲ್ಲಿ ಸಂಘದ ನಿರ್ದೇಶಕರಾದ ಆರ್.ಕೆಂಪರಾಜು, ಕೆ.ಬಿ.ಪುಟ್ಟರಾಜು, ರಾಜಕುಮಾರ್, ಕೆ.ನಾಗರಾಜಯ್ಯ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಸುಮರಿ, ಎಂ.ಪಿ.ರವಿ, ತಾಪಂ ಮಾಜಿ ಸದಸ್ಯ ಬಿ.ಎಸ್.ರೇವಣ್ಣ, ಸವಿತಾ, ರೇವಮ್ಮ, ವರದರಾಜು, ಎಂಡಿಸಿಸಿ ಮೇಲ್ವಿಚಾರಕ ಮಂಜು, ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಜೇಂದ್ರಕುಮಾರ್ ಇದ್ದರು. ಬ್ಯಾಂಕಿಂಗ್ ಸೇವೆ ನೀಡಲು ಬದ್ಧ:ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧ ಆಯ್ಕೆಯಾದ ಕೆರೆಹಳ್ಳಿ ನವೀನ್ ಅಧಿಕಾರ ಸ್ವೀಕರಿಸಿ ಮಾತನಾಡಿ, ರೈತರು ಹಾಗೂ ಸಂಘದ ನಿರ್ದೇಶಕರು ನನ್ನನ್ನು ಮೂರನೇ ಬಾರಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು, ಸಂತಸ ತಂದಿದೆ. ನಮ್ಮೆಲ್ಲರ ಸೇವೆ ಮಾಡಲು ಸದಾ ಸಿದ್ದನಿದ್ದೇನೆ. ಈಗಾಗಲೇ ಸಂಘಕ್ಕೆ 25 ಲಕ್ಷ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. 10 ಕೋಟಿ ರು. ಸಾಲ ನೀಡುವ ಗುರಿ ಹೊಂದಿದ್ದು, ಇನ್ನು 10 ಕೋಟಿ ರು.ಗಳಿಗ ಸಾಲಕ್ಕೆ ಪ್ರಸ್ತಾವನೆಗೆ ಸಲ್ಲಿಸಲಾಗಿದೆ ಎಂದರು. ಇನ್ನು ಹೆಚ್ಚಿನ ರೀತಿಯಲ್ಲಿ ಸಂಘವನ್ನು ಅಭಿವೃದ್ದಿಪಡಿಸಲು ಎಲ್ಲ ನಿರ್ದೇಶಕರು ಕೈಜೋಡಿಡಬೇಕು. ಸಂಘದಿಂದ ವಾಹನಗಳ ಮೇಲಿನ ಸಾಲ, ವ್ಯಾಪಾರಾಭಿವೃದ್ದಿ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ ಸೇರಿದಂತೆ ಸರ್ಕಾರ ಸವಲತ್ತುಗಳನ್ನು ಕಲ್ಪಿಸಿ, ಅನ್‌ಲೈನ್ ಸೇವೆ ಮಾಡಲು ಕ್ರಮ ವಹಿಸಲಾಗಿದೆ. ಸಂಘವನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಲೀಡ್ ಬ್ಯಾಂಕ್,ನಬಾರ್ಡ್ ಬ್ಯಾಂಕ್‌ಗಳ ಸಹಕಾರ ವನ್ನು ಪಡೆದುಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಮುಕ್ಕಡಹಳ್ಳಿ ರವಿಕುಮಾರ್, ಹರವೆ ರಂಗಸ್ವಾಮಿ, ಕೆರೆರಹಳ್ಳಿ ರೇವಣ್ಣ, ಗ್ರಾ.ಪಂ. ಸದಸ್ಯ ಶಂಕರ್, ಮಲ್ಲಪ್ಪ, ಮಹದೇವಸ್ವಾಮಿ ಇತರರಿದ್ದರು.