೨೨ರಿಂದ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

| Published : Feb 14 2025, 12:32 AM IST

೨೨ರಿಂದ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಫೆ. ೨೨ರಂದು ಸಂಜೆ ೪.೩೦ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಸಚಿವ ಮಂಕಾಳ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಹೊನ್ನಾವರ: ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ೯೦ನೇ ವರ್ಷದ ಸಂಭ್ರಮ ಹಾಗೂ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಫೆ. ೨೨ರಿಂದ ಮಾ. ೨ರ ವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ. ೨೨ರಂದು ಸಂಜೆ ೪.೩೦ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಸಚಿವ ಮಂಕಾಳ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪ್ರದರ್ಶನಾಂಗಣವನ್ನು ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ನಿರಂಜನ ವಾನಳ್ಳಿ ಉದ್ಘಾಟಿಸುವರು. ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಪರಿಷತ್ತಿಗೆ ಪ್ರದಾನ ಮಾಡಲಾಗುವುದು.ಫೆ. ೨೩ರಂದು ಸಂಜೆ ೪.೩೦ ಗಂಟೆಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಯಕ್ಷಗಾನ ಭಾಗವತ ವಿದ್ವಾನ್ ಗಣಪತಿ ಭಟ್ ಅವರಿಗೆ ಪ್ರದಾನ ಮಾಡಲಾಗುವುದು. ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಡೀನ್ ಪ್ರೊ. ಎಂ.ಎನ್. ವೆಂಕಟೇಶ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರಕುಮಾರ ಕೊಡ್ಗಿ, ಡಾ. ಮಿಲಿಂದ ಕುಲಕರ್ಣಿ ಪಾಲ್ಗೊಳ್ಳುವರು. ಕಲಾಪೋಷಕ ಪ್ರಶಸ್ತಿಯನ್ನು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ, ಮಂಗಳೂರಿನ ಎಸ್. ಪ್ರದೀಪಕುಮಾರ ಕಲ್ಕೂರ್ ಅವರಿಗೆ ಪ್ರದಾನ ಮಾಡಲಾಗುವುದು. ನಾಟ್ಯೋತ್ಸವ ಸಂಮಾನವನ್ನು ಲೇಖಕಿ ಭುವನೇಶ್ವರಿ ಹೆಗಡೆ ಅವರಿಗೆ ನೀಡಲಾಗುವುದು.ಫೆ. ೨೪ರಂದು ಸಂಜೆ ೪.೩೦ ಗಂಟೆಗೆ ನಾಟ್ಯೋತ್ಸವ ಸಂಮಾನವನ್ನು ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ, ಮೋಹನಕುಮಾರ ಹಬ್ಬು, ಭಾಗವತ ಗೋಪಾಲಕೃಷ್ಣ ಭಟ್ಟ ಜೋಗಿಮನೆ ಅವರಿಗೆ ನೀಡಲಾಗುವುದು. ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಶಿವರಾಮ ಗಾಂವಕರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಲಾಪೋಷಕ ಜಿ.ಜಿ. ಶಂಕರ, ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ ತಾಂಡೇಲ, ಗ್ರಾಪಂ ಅಧ್ಯಕ್ಷೆ ಚಿತ್ರಾಕ್ಷಿ ಗೌಡ, ಮಾನಾಸುತ ಶಂಭು ಹೆಗಡೆ ಪಾಲ್ಗೊಳ್ಳುವರು.ಫೆ. ೨೫ರಂದು ಸಂಜೆ ೪.೩೦ ಗಂಟೆಗೆ ನಾಟ್ಯೋತ್ಸವ ಸಂಮಾನವನ್ನು ಅರ್ಥಧಾರಿ ಜಬ್ಬಾರ ಸಮೋ, ಭಾಗವತ ಡಾ. ಸುರೇಂದ್ರ ಫಣಿಯೂರು, ರಾಮಕೃಷ್ಣ ಮಯ್ಯ ಅವರಿಗೆ ನೀಡಲಾಗುವುದು. ಸಹಕಾರಿ ಧುರೀಣ ವಿ.ಎನ್. ಭಟ್ ಅಳ್ಳಂಕಿ ಅಧ್ಯಕ್ಷತೆ ವಹಿಸುವರು. ಶಿರಸಿಯ ಅನಂತಮೂರ್ತಿ ಹೆಗಡೆ, ಸಾಹಿತಿ ಜಿ.ಎನ್. ಮೋಹನ, ಮಂಕಿಯ ಗೋಲ್ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಕಸಾಪ ಅಧ್ಯಕ್ಷ ಎಸ್.ಎಚ್. ಗೌಡ ಪಾಲ್ಗೊಳ್ಳುವರು. ೯ ದಿನಗಳ ಕಾಲ ಸನ್ಮಾನ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ನರಸಿಂಹ ಹೆಗಡೆ, ಶ್ರೀಧರ ಹೆಗಡೆ ಇತರರಿದ್ದರು.