ಸಾರಾಂಶ
ಜಾತಿಗಣತಿಯನ್ನು ಆಗಿಂದಾಗ್ಗೆ ನಡೆಸಿ ರಾಜ್ಯ ಸರ್ಕಾರ ವರದಿಯನ್ನು ಬಹಿರಂಗಪಡಿಸುತ್ತಿಲ್ಲ. ಜಾತ್ಯತೀತವಾಗಿರುವ ನಮ್ಮ ರಾಷ್ಟ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಜನಗಣತಿಯ ಆದ್ಯತೆ ಇದೆಯೇ ಎಂದು ಅರಕಲಗೂಡು ತಾಲೂಕಿನ ಕೆಸವತ್ತೂರು ಶ್ರೀ ಸಿದ್ಧಲಿಂಗೇಶ್ವರ ಮಠದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ ಅವರು ಪ್ರಶ್ನಿಸಿದರು. ಒಳಮೀಸಲಾತಿಯನ್ನು ಈ ಹಿಂದಿನ ಸರ್ಕಾರ ಈ ವರದಿಯನ್ನು ತಿರಸ್ಕರಿಸಿತು. ಆದ್ದರಿಂದ ನಮ್ಮ ರಾಷ್ಟ್ರದಲ್ಲಿ ಜನಗಣತಿಯ ಆದ್ಯತೆ ಇಲ್ಲ ಎಂದು ಕೆಸವತ್ತೂರು ಮಠದ ಶ್ರೀಗಳು ತಿಳಿಸಿದರು.
ರಾಮನಾಥಪುರ: ಜಾತಿಗಣತಿಯನ್ನು ಆಗಿಂದಾಗ್ಗೆ ನಡೆಸಿ ರಾಜ್ಯ ಸರ್ಕಾರ ವರದಿಯನ್ನು ಬಹಿರಂಗಪಡಿಸುತ್ತಿಲ್ಲ. ಜಾತ್ಯತೀತವಾಗಿರುವ ನಮ್ಮ ರಾಷ್ಟ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಜನಗಣತಿಯ ಆದ್ಯತೆ ಇದೆಯೇ ಎಂದು ಅರಕಲಗೂಡು ತಾಲೂಕಿನ ಕೆಸವತ್ತೂರು ಶ್ರೀ ಸಿದ್ಧಲಿಂಗೇಶ್ವರ ಮಠದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ ಅವರು ಪ್ರಶ್ನಿಸಿದರು.
ಕೆಸವತ್ತೂರು ಶ್ರೀ ಸಿದ್ಧಲಿಂಗೇಶ್ವರ ಮಠದಲ್ಲಿ ಮಾತನಾಡಿದ ಶ್ರೀಗಳು, ನಮ್ಮ ರಾಷ್ಟ್ರದಲ್ಲಿ ಜಾತಿ ಅದಾರದ ಮೇಲೆ ನಮ್ಮ ನಮ್ಮ ಸವಲತ್ತುಗಳನ್ನು ಪಡೆಯಬೇಕಾ, ನಮ್ಮ ರಾಜ್ಯ ಹಾಗೂ ದೇಶದಲ್ಲಿ ಎಲ್ಲ ಜನಾಂಗಗಳಲ್ಲಿ ಕಡು ಬಡವರಿದ್ದಾರೆ. ಒಂದು ಕಡೆ ಜಾತಿ ಬೇಡ ಎಂದು ಹೇಳುವ ಸರ್ಕಾರ ಮತ್ತೆ ಜಾತಿಗಣತಿ ನಡೆಸುವುದು ಏಕೆ ಎಂದು ಸರ್ಕಾರವನ್ಮು ಪ್ರಶ್ನಿಸಿದ ಅವರು ಒಳ ಮೀಸಲಾತಿ ಜಾರಿ ವಿಷಯದಲ್ಲಿ ಬಹಳಷ್ಟು ಜನಾಂಗೀಯದವರು ಸಹಮತಕ್ಕೆ ವಿರೋಧಿಸಿದ್ದಾರೆ. ಅದರೆ ಅಧಿಕೃತ ದತ್ತಾಂಶದ ಅಧಾರದ ಮೇಲೆ ಒಳಮೀಸಲಾತಿ ಮೇಲೆ ಜಾರಿಮಾಡಬೇಡಿ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಈ ಒಳಮೀಸಲಾತಿಯನ್ನು ಈ ಹಿಂದಿನ ಸರ್ಕಾರ ಈ ವರದಿಯನ್ನು ತಿರಸ್ಕರಿಸಿತು. ಆದ್ದರಿಂದ ನಮ್ಮ ರಾಷ್ಟ್ರದಲ್ಲಿ ಜನಗಣತಿಯ ಆದ್ಯತೆ ಇಲ್ಲ ಎಂದು ಕೆಸವತ್ತೂರು ಮಠದ ಶ್ರೀಗಳು ತಿಳಿಸಿದರು.