ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕಿಕ್ಕೇರಿ ಗ್ರಾಮ ಪಂಚಾಯ್ತಿ ನೂತ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಕೆ.ಜಿ.ಪುಟ್ಟರಾಜು ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರ ಒಡಂಬಡಿಕೆಯಂತೆ ಹಿಂದಿನ ಅಧ್ಯಕ್ಷ ಎಸ್.ಕೆ.ಬಾಲಕೃಷ್ಣರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಕೆ.ಆರ್.ಪುಟ್ಟರಾಜು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 16 ಸದಸ್ಯರಿರುವ ಗ್ರಾಪಂನಲ್ಲಿ ಚುನಾವಣೆ ವೇಳೆ 6 ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿ ಅರುಣ್‌ಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ಅನಿಲ್‌ಬಾಬು, ಪಿಡಿಒ ಚಲುವರಾಜು ಕಾರ್ಯ ನಿರ್ವಹಿಸಿದರು.ಈ ವೇಳ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ದಯಾನಂದ್, ಸದಸ್ಯರಾದ ಎಸ್.ಕೆ.ಬಾಲಕೃಷ್ಣ, ಕೆ.ಆರ್.ರಾಜೇಶ್, ಕೆ.ಬಿ.ಚಂದ್ರಶೇಖರ್, ಕೆ.ಆರ್. ಕೃಷ್ಣ, ರೇಣುಕಾ ಅನಂತ, ಭಾರತಿ ಪ್ರಕಾಶ್, ಸರಸ್ವತಿ ಗೋವಿಂದರಾಜು, ಗ್ರಾಮ ಮುಖಂಡರು ಇದ್ದರು.
ನಾಳೆ ಸರ್ವಸದಸ್ಯರ ಸಭೆಮಂಡ್ಯ: ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘದಿಂದ ಸೆ.೨೨ರಂದು ಬೆಳಗ್ಗೆ ೧೧ ಗಂಟೆಗೆ ನಗರದ ವೈಷ್ಣವಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನಂಜುಂಡಸ್ವಾಮಿ ತಿಳಿಸಿದರು. ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಮಾರಂಭ ಉದ್ಘಾಟಿಸುವರು. ನಿವೃತ್ತ ಅಧೀಕ್ಷಕ ಚಂದ್ರಹಾಸ್, ಖ್ಯಾತ ವಕೀಲ ಎಂ.ಬಿ. ಹರಿಪ್ರಸಾದ್ ಸಮಾರಂಭದಲ್ಲಿ ಭಾಗವಹಿಸುವರು ಎಂದರು. ಸಂಘದ ರಮೇಶ, ಮೋಹನ್‌ಕುಮಾರ್ ಗೋಷ್ಠಿಯಲ್ಲಿದ್ದರು.
ಸೆ.೨೨ರಂದು ಸರ್ವಸದಸ್ಯರ ಸಭೆಕನ್ನಡಪ್ರಭ ವಾರ್ತೆ ಮಂಡ್ಯಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಸೆ.೨೨ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಂಘದ ನಿರ್ವಾಹಕ ಗುರುಶಂಕರ್ ತಿಳಿಸಿದರು.
ಮೈಸೂರಿನ ಉರಿಲಿಂಗಪೆದ್ದಿ ಮಠದ ಪೂಜ್ಯ ಜ್ಞಾನಪ್ರಕಾಶ್ ಸ್ವಾಮೀಜಿ, ನಳಂದ ವಿವಿಯ ಬೋಧಿದತ್ತ ಬಂತೇಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮಾರಂಭ ಉದ್ಘಾಟಿಸುವರು. ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಪಿ. ರವಿಕುಮಾರ್, ಎಂ. ಕೃಷ್ಣಮೂರ್ತಿ ಇತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸಂಘದ ನಿರ್ವಹಕರಾದ ಎಚ್.ಕೆ. ಜಯಶಂಕರ್, ಎಂ. ಕುಮಾರ್, ಮರುಗನ್, ಟಿ.ಎನ್. ರಾಜೇಶ್ ಗೋಷ್ಠಿಯಲ್ಲಿದ್ದರು.