ಕನ್ನಡಪ್ರಭ ವಾರ್ತೆ, ಕೆಜಿಎಫ್ಚರ್ಚ್‌ವೊಂದರಲ್ಲಿ ಮದುವೆ ನಡೆಯುತ್ತಿದ್ದಾಗಲೇ ಮಧುಮಗಳ ತಂದೆಯನ್ನು ಆಂಡ್ರಸನ್‌ಪೇಟೆ ಪೊಲೀಸರು ಹೊತ್ತೊಯ್ದು ಬಂಧಿಸಿದ ಘಟನೆ ನಡೆದಿದೆ.ಏನಿದು ಪ್ರಕರಣ? ಆಂಡ್ರಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಬಳಿ ಬಲವಂತವಾಗಿ ಹಪ್ತಾ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗ ಲೆನಿನ್ (೨೩), ತಂದೆ ಸ್ಟಾನ್ಲಿ ಎಂಬುವರ ವಿರುದ್ಧ ಆಂಡ್ರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಮೊದಲ ಆರೋಪಿ ಮಗ ಲೆನಿನ್ ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಳಪಡಿಸಿದ್ದರು. ಭಾನುವಾರ ಸ್ಟಾನ್ಲಿ ಮಗಳ ಮದುವೆಯನ್ನು ನಗರದ ಪ್ರತಿಷ್ಠಿತ ಚರ್ಚ್‌ವೊಂದರಲ್ಲಿ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಆಂಡ್ರಸನ್‌ಪೇಟೆ ಪೊಲೀಸರು ಎರಡನೇ ಆರೋಪಿ ತಂದೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಗಡೀಪಾರು ಮಾಡಿದ್ದ ಎಸ್ಪಿ:
೧೦ ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಸ್ಟಾನ್ಲಿಯನ್ನು ಕಲಬುರಗಿ ಜಿಲ್ಲೆಗೆ ಇತ್ತೀಚೆಗಷ್ಟೇ ಗಡೀಪಾರು ಮಾಡಲಾಗಿತ್ತು. ಮಗಳ ಮದುವೆಯ ನಿಮಿತ್ತ ನ್ಯಾಯಾಲಯದಲ್ಲಿ ಒಂದು ವಾರ ಕಾಲ ರಜೆ ಪಡೆದು ತನ್ನ ಮಗಳ ಮದುವೆಯಲ್ಲಿ ಭಾಗವಹಿಸಿದ್ದರು. ಹಪ್ತಾ ವಸೂಲಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಸ್ಟಾನ್ಲಿಯನ್ನು ಮದುವೆ ನಡೆಯುತ್ತಿದ್ದ ಸಂದರ್ಭದಲ್ಲೇ ಕಾದಿದ್ದು ಆಂಡ್ರಸನ್‌ಪೇಟೆ ಪೊಲೀಸರು ನಾಟಕೀಯ ಬೆಳವಣಿಗೆಯಲ್ಲಿ ಬಂಧಿಸಿ ಹೊತ್ತೊಯ್ದಿದಿದ್ದಾರೆ.೧೯ಕೆಜಿಎಫ್೪ಕುಖ್ಯಾತ ರೌಡಿಯನ್ನು ಹೊತ್ತೊಯ್ದು ಬಂಧಿಸಿ ಪೊಲೀಸರು.ಮಗಳ ಮದುವೆ ನಡೆಯುತ್ತಿದ್ದಾಗಲೇತಂದೆ ಹೊತ್ತೊಯ್ದು ಬಂಧಿಸಿದ ಖಾಕಿ!
ಹಪ್ತಾ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗ ಲೆನಿನ್ (೨೩), ತಂದೆ ಸ್ಟಾನ್ಲಿ ಎಂಬುವರ ವಿರುದ್ಧ ಆಂಡ್ರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಮೊದಲ ಆರೋಪಿ ಮಗ ಲೆನಿನ್ ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಳಪಡಿಸಿದ್ದರು. ಭಾನುವಾರ ಸ್ಟಾನ್ಲಿ ಮಗಳ ಮದುವೆಯನ್ನು ನಗರದ ಪ್ರತಿಷ್ಠಿತ ಚರ್ಚ್‌ವೊಂದರಲ್ಲಿ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಆಂಡ್ರಸನ್‌ಪೇಟೆ ಪೊಲೀಸರು ಎರಡನೇ ಆರೋಪಿ ತಂದೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.