ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಖರ್ಗೆಗಿಲ್ಲ

| Published : Jul 10 2025, 12:46 AM IST

ಸಾರಾಂಶ

ಭಾರತದ ಸಂಸ್ಕೃತಿ ಪರಂಪರೆ ಮೈಗೂಡಿಸಿಕೊಂಡು ಸ್ವಯಂ ಶಿಸ್ತಿನಿಂದ ಸಮಾಜಸೇವೆ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ತೊಡಗಿಕೊಂಡಿರುವ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಸಚಿವ ಪ್ರಿಯಾಂಕಾ ಖರ್ಗೆಯವರಿಗಿಲ್ಲ ಎಂದು ಮಾಜಿ ಶಾಸಕ‌ ಸಂಜಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭಾರತದ ಸಂಸ್ಕೃತಿ ಪರಂಪರೆ ಮೈಗೂಡಿಸಿಕೊಂಡು ಸ್ವಯಂ ಶಿಸ್ತಿನಿಂದ ಸಮಾಜಸೇವೆ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ತೊಡಗಿಕೊಂಡಿರುವ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಸಚಿವ ಪ್ರಿಯಾಂಕಾ ಖರ್ಗೆಯವರಿಗಿಲ್ಲ ಎಂದು ಮಾಜಿ ಶಾಸಕ‌ ಸಂಜಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ರಾಷ್ಟ್ರದಲ್ಲಿ ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿ ದೇಶ ಸೇವೆ ಸದಾ ಸಿದ್ಧವಿರುವ ಅನೇಕರ ಬಲಿದಾನದಿಂದ ದೇಶದ ಅಭಿವೃದ್ಧಿಗೆ ಸದಾ ಸಿದ್ಧವಿರುವ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ನಿಗಾ ಇರಬೇಕು. ಪ್ರತಿ ದಿನ ಶಾಖೆಯನ್ನು ನಡೆಸಿ ಸ್ವಯಂ‌ ಸೇವಕರು ದೈಹಿಕ ವ್ಯಾಯಾಮ, ಸಂಸ್ಕಾರಾತ್ಮಕ ಚಟುವಟಿಕೆಗಳು, ದೇಶಭಕ್ತಿಯ ಭಾವನೆ ಘಟ್ಟಿಗೊಳಿಸುವ ಕಾರ್ಯದ ಬಗ್ಗೆ ಒಮ್ಮೆ ಬಂದು ನೋಡಿ ಎಂದು ಸವಾಲು ಹಾಕಿದರು. ಆರ್‌ಎಸ್‌ಎಸ್ ಭಾರತ ದೇಶಕ್ಕೆ ನರೇಂದ್ರ ಮೋದಿಯಂತ ನಾಯಕರನ್ನ ನೀಡಿದೆ. ಅವರು ಹೊಂದಿರುವ ರಾಷ್ಟ್ರೀಯ ಬದ್ಧತೆ, ಕಾರ್ಯವಿಧಾನವನ್ನು ಪ್ರಪಂಚವೇ ಕೊಂಡಾಡುತ್ತಿದೆ. ನೂರರ ಹೊಸ್ತಿಲಲ್ಲಿರುವ ಸಂಘ ನಿಸ್ವಾರ್ಥ ಸೇವೆಯಲ್ಲಿ ಪಾಲ್ಗೊಂಡು ದೇಶದ ಅಭಿವೃದ್ಧಿ ಪರ ಸದಾ ಯೋಚಿಸುವ ಕಾರ್ಯಕರ್ತರನ್ನ ಹೊಂದಿರುವ ರಾಷ್ಟ್ರೀಯ ಸ್ವಯಂ‌ ಸೇವಕ ಸಂಘವನ್ನು ಬ್ಯಾನ್ ಮಾಡುವ ಹೇಳಿಕೆ ನೀಡಿ ಹಗಲು ಗನಸು ಕಾಣುತ್ತಿರುವ ಪ್ರಿಯಾಂಕಾ ಖರ್ಗೆಯವರೆ ನಿಮ್ಮಂತೆ ವಂವಂಶಪರಂಪರೆ ಅಧಿಕಾರಕ್ಕೆ ಅಂಟಿಕೊಂಡು ಜನರ ಹಣ ಲೂಟಿ ಹೊಡೆದು ಅಭಿವೃದ್ಧಿ ಶೂನ್ಯ ಕಲಬುರ್ಗಿ ಮಾಡಿದಂತೆ ಅಲ್ಲ. ನಿಮ್ಮ ರಾಜಕೀಯ. ಹಿನ್ನೆಲೆ ಏನು ಎನ್ನುವುದನ್ನು ಜನ ತಿಳಿದಿದ್ದಾರೆ. ಅದನ್ನು ಅರಿತು ಮಾತನಾಡಬೇಕು ಎಂದು ಪ್ರಕಟಣೆಯಲ್ಲಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.