ಸಾರಾಂಶ
Khasabedarapade dancing performance
ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಜಿಲ್ಲಾ ಜಾನಪದ ಕಲಾ ಮಂಡಲದ ವತಿಯಿಂದ ಮೆರವಣಿಗೆಯಲ್ಲಿ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಖಾಸಾ ಬೇಡರ ಪಡೆ ಕುಣಿತ ಪ್ರದರ್ಶಿಸಿದರು. ಖಾಸಾ ಬೇಡರ ಪಡೆ ನೃತ್ಯ ಬುಡಕಟ್ಟು ಸಂಸ್ಕೃತಿಯ ಮೂಲ ವೈಭವವಾಗಿದೆ. ಕಲಾವಿದರು ಕೈಯಲ್ಲಿ ಗಂಡುಗೊಡಲಿ ಹಿಡಿದು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕಲಾವಿದರು ನೃತ್ಯ ಪ್ರದರ್ಶಿಸಿದರು. ಕಲಾಮಂಡಲದ ಜಿ.ರಾಜಣ್ಣ, ಎಸ್. ಉಮಾಪತಿ, ಶ್ರೀಧರ, ದರ್ಶನ, ಆರ್.ಅಮೋಘವರ್ಷ, ಆರ್.ಅರುಣ್‌ಕುಮಾರ್, ಆರ್.ಅಭಿಲಾಷ್, ಎಸ್.ಮಧುಸೂಧನ ಭಾಗವಹಿಸಿ ಯಶಸ್ವಿ ಪ್ರದರ್ಶನ ನೀಡಿದರು. ಕೋಟೆ ಮುಂಭಾಗದಿಂದ ಆರಂಭವಾದ ನೃತ್ಯ ತರಾಸು ರಂಗಮಂದಿರದವರೆಗೂ ನಡೆಯಿತು.
----------ಫೋಟೋ ಫೈಲ್ ನೇಮ್ 17 ಸಿಟಿಡಿ3--