ಸಾರಾಂಶ
ಕಲಾದಗಿ ಗ್ರಾಮದ ಮತಗಟ್ಟೆ ಸಂಖ್ಯೆ ೧೯೫ರಲ್ಲಿ ಅಪರಿಚಿತ ಯುವಕನೊಬ್ಬ ಖೊಟ್ಟಿ ಮತದಾನಕ್ಕೆ ಮುಂದಾಗಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಲಾದಗಿ: ಗ್ರಾಮದ ಮತಗಟ್ಟೆ ಸಂಖ್ಯೆ ೧೯೫ರಲ್ಲಿ ಅಪರಿಚಿತ ಯುವಕನೊಬ್ಬ ಖೊಟ್ಟಿ ಮತದಾನಕ್ಕೆ ಮುಂದಾಗಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಮತಕೇಂದ್ರ ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಮತಗಟ್ಟೆಯಲ್ಲಿ ಒಂದಿಷ್ಟು ಖೊಟ್ಟಿ ಮತ ಚಲಾವಣೆ ಆಗಿದ್ದು, ಮತಗಟ್ಟೆಯಲ್ಲಿ ಮರುಮತದಾನ ಮಾಡಬೇಕೆಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.