ನಾವು ಕೊಡುವ ಹಣದಿಂದ ಅವರ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದಿಲ್ಲ. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಹೆಚ್ಚು ಜನರು ಮುರಳಿ ಅವರಿಗೆ ನೆರವಾದರೆ ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ ಹೊಸ ಜೀವನ ನೀಡಬಹುದು.

ಕನ್ನಪ್ರಭ ವಾರ್ತೆ ಮಂಡ್ಯ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದ ಮುರಳಿ ಅವರಿಗೆ ಖ್ಯಾತ ವೈದ್ಯ ಡಾ.ಅನಿಲ್ ಆನಂದ್ ಅವರು ಆರ್ಥಿಕ ನೆರವು ನೀಡಿದರು. ಗುರುವಾರ ಮುರಳಿ ನಿವಾಸಕ್ಕೆ ತೆರಳಿದ ಅವರು ೧೦ ಸಾವಿರ ರು. ಧನಸಹಾಯ ಮಾಡಿದರು. ಹೃದಯರೋಗ, ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಮುರಳಿ ಅವರಿಗೆ ಕಿಡ್ನಿ ಕಸಿ ಮಾಡಲು ೩೦ ಲಕ್ಷ ರು. ಖರ್ಚಾಗಲಿದ್ದು, ಧನಸಹಾಯ ಮಾಡುವಂತೆ ಮನವಿ ಮಾಡಿದ್ದರು. ಮುರಳಿ ಕುಟುಂಬದವರ ಮನವಿಗೆ ಸ್ಪಂದಿಸಿದ ಡಾ.ಅನಿಲ್ ಆನಂದ್ ನೆರವು ನೀಡಿದ್ದಾರೆ. ನಾವು ಕೊಡುವ ಹಣದಿಂದ ಅವರ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದಿಲ್ಲ. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಹೆಚ್ಚು ಜನರು ಮುರಳಿ ಅವರಿಗೆ ನೆರವಾದರೆ ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ ಹೊಸ ಜೀವನ ನೀಡಬಹುದು ಎಂದರು.

ಮುರಳಿ ಹಾಗೂ ಅವರ ಕುಟುಂಬದವರಿಗೆ ಧೈರ್ಯ ತುಂಬಿದರು.

ಮೈಸೂರಿನಲ್ಲಿ ಕಾನೂನು ವಿವಿ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ದಿನೇಶ್‌ ಗೂಳಿಗೌಡ ಮನವಿ

ಬೆಂಗಳೂರು:

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯನ್ನು ಮೈಸೂರಿನಲ್ಲಿ ಸ್ಥಾಪಿಸುವಂತೆ ವಿಧಾನ ಪರಿಷತ್‌ ಸದಸ್ಯ ಹಾಗೂ ಕಾನೂನು ವಿವಿ ಸಲಹಾ ಮಂಡಳಿ ಸದಸ್ಯ ದಿನೇಶ್‌ ಗೂಳಿಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಅವರಿಗೆ ಪತ್ರ ಬರೆದಿರುವ ಅವರು, ಕಾನೂನು ವಿವಿ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 176 ಕಾನೂನು ಕಾಲೇಜುಗಳಿದ್ದು, ಮೂವತ್ತು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಮೈಸೂರು, ಬೆಂಗಳೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಸೇರಿ ಹಳೆ ಮೈಸೂರು ಪ್ರಾಂತ್ಯದ ಭಾಗದಲ್ಲಿರುವ ಶೇ. 50ರಷ್ಟು ಕಾಲೇಜುಗ‍ಳಿವೆ. ಹೀಗಾಗಿ ಶೇ. 50ಕ್ಕೂ ವಿದ್ಯಾರ್ಥಿಗಳು ಕೂಡ ಈ ಭಾಗದವರೇ ಆಗಿದ್ದಾರೆ.

ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿರುವುದರಿಂದ ಇವರೆಲ್ಲರೂ ತಮ್ಮ ಶೈಕ್ಷಣಿಕ ದಾಖಲಾತಿ, ಅಂಕಪಟ್ಟಿ ಅಥವಾ ಇತರೆ ಆಡಳಿತಾತ್ಮಕ ಕೆಲಸಗಳಿಗಾಗಿ ದೂರದ ಹುಬ್ಬಳ್ಳಿಗೆ ಪ್ರಯಾಣಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಮೈಸೂರಿನಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.