ಹರಪನಹಳ್ಳಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ತಾಲೂಕಿನ ಬಡ ಕುಟುಂಬದ ಯುವಕನೊಬ್ಬ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ತುರ್ತು ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ಹಣ ಆಗತ್ಯವಿದೆ. ಆರ್ಥಿಕ ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಿದ್ದಾನೆ.ತಾಲೂಕಿನ ಅರೇಮಜ್ಜಿಗೇರಿ ಗ್ರಾಮದ ಭೊವಿ ದುರುಗಪ್ಪ, ಹುಲಿಗೆಮ್ಮ ದಂಪತಿಯ ಕಿರಿಯ ಪುತ್ರ ಭೋವಿ ಯೋಗೇಶ್(೨೧) ಈತನಿಗೆ ಎರಡೂ ಕಿಡ್ನಿಗಳು ಚಿಕ್ಕ ವಯಸ್ಸಿಗೆ ವಿಫಲಗೊಂಡಿದ್ದು, ಈವರೆಗೆ ಚಿಕಿತ್ಸೆಗೆಂದು ₹೫ ಲಕ್ಷ ಖರ್ಚು ಮಾಡಿದ್ದಾರೆ. ಸದ್ಯ ಮಂಗಳೂರಿನ ಯೆನಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆಗಾಗಿ ಇನ್ನು ₹7-8 ಲಕ್ಷ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ ಅಷ್ಟೊಂದು ಮೊತ್ತ ನನ್ನ ಬಳಿ ಇಲ್ಲ. ಹೀಗಾಗಿ ದಾನಿಗಳು ಆರ್ಥಿಕವಾಗಿ ನೆರವು ನೀಡಬೇಕು ಎಂದು ಯುವಕನ ಸಹೋದರ ಭೋವಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.ನಮ್ಮ ಕುಟುಂಬ ಆರ್ಥಿಕವಾಗಿ ಕಡು ಬಡತನಲ್ಲಿದ್ದು, ಜೀವನ ಸಾಗಿಸುವುದಕ್ಕೆ ಬಹಳ ಕಷ್ಟವಾಗುತ್ತಿದೆ. ತಂದೆ-ತಾಯಿಯ ಆರೋಗ್ಯವು ಹದಗೆಟ್ಟಿದ್ದು, ಚಿಕಿತ್ಸೆ ಕೊಡಿಸುತ್ತಿದ್ದೇನೆ. ಇದೀಗ ನನ್ನ ಸೋದರನ ಆರೋಗ್ಯದಲ್ಲಿ ಸಣ್ಣ ವಯಸ್ಸಿಗೆ ಈ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ದಾನಿಗಳು ಹಣಕಾಸಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.
ನೆರವು ನೀಡಲು ಇಚ್ಛಿಸುವ ದಾನಿಗಳು ಕೆನರಾ ಬ್ಯಾಂಕ್‌ನ ಹರಪನಹಳ್ಳಿ ಶಾಖೆಯ ಖಾತೆ ಸಂಖ್ಯೆ: 06102210103214 (ಯೋಗೀಶ್ ಭೋವಿ), ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ0010610 ಅಥವಾ ಫೋನ್ ಪೇ ಸಂಖ್ಯೆ: 9663122344 ಗೆ ಹಣ ಪಾವತಿಸಬೇಕು ಎಂದು ಮನವಿ ಮಾಡಿದರು.