ಕೋಲಾರದ ಜಾಲಪ್ಪ ಆಸ್ಪತ್ರೆಯಿಂದ ಬೆಂಗಳೂರು ನಾಗರಭಾವಿ ಫೋರ್ಟಿಸ್ ಆಸ್ಪತ್ರೆಗೆ ಮಾನವ ಮೂತ್ರಪಿಂಡವನ್ನು ತ್ವರಿತವಾಗಿ ಸಾಗಿಸಲು ನಮ್ಮ ಮೆಟ್ರೋ ಶುಕ್ರವಾರ ನೆರವಾಗಿದೆ.ಕೇವಲ 37ನಮಿಷಗಳಲ್ಲಿ ಪೂರ್ಣಗೊಳಿಸಿ ಆಸ್ಪತ್ರೆಗೆ ಮೂತ್ರ ಪಿಂಡ ತಲುಪಿಸುವಲ್ಲಿ ಮೆಟ್ರೋ ಯಶಸ್ವಿಯಾಗಿದೆ.
ಬೆಂಗಳೂರು : ಕೋಲಾರದ ಜಾಲಪ್ಪ ಆಸ್ಪತ್ರೆಯಿಂದ ಬೆಂಗಳೂರು ನಾಗರಭಾವಿ ಫೋರ್ಟಿಸ್ ಆಸ್ಪತ್ರೆಗೆ ಮಾನವ ಮೂತ್ರಪಿಂಡವನ್ನು ತ್ವರಿತವಾಗಿ ಸಾಗಿಸಲು ನಮ್ಮ ಮೆಟ್ರೋ ಶುಕ್ರವಾರ ನೆರವಾಗಿದೆ.
ಕೇವಲ 37ನಮಿಷಗಳಲ್ಲಿ ಪೂರ್ಣಗೊಳಿಸಿ ಆಸ್ಪತ್ರೆಗೆ
ಸತತ ಟ್ರಾಫಿಕ್ ಜಾಮ್ನಿಂದಾಗಿ ಅರ್ಧ ದಿನ ಕಳೆಯುವ ಸಂದರ್ಭದಲ್ಲಿ ಬನ್ನಿಗಾನಹಳ್ಳಿ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ಪ್ರಯಾಣವನ್ನು ಕೇವಲ 37ನಮಿಷಗಳಲ್ಲಿ ಪೂರ್ಣಗೊಳಿಸಿ ಆಸ್ಪತ್ರೆಗೆ ಮೂತ್ರ ಪಿಂಡ ತಲುಪಿಸುವಲ್ಲಿ ಮೆಟ್ರೋ ಯಶಸ್ವಿಯಾಗಿದೆ.
2.58 ಗಂಟೆಗೆ ರೈಲಿಗೆ ಹತ್ತಿ- 3.35 ಗಂಟೆಗೆ ಅತ್ತಿಗುಪ್ಪೆ ನಿಲ್ದಾಣ ತಲುಪುವಲ್ಲಿ ಯಶಸ್ವಿ
ಅಂಗಾಗವನ್ನು ಹೊತ್ತ ಸಿಬ್ಬಂದಿಯನ್ನು ಮಧ್ಯಾಹ್ನ 2.58 ಗಂಟೆಗೆ ಬೆನ್ನಿಗಾನಹಳ್ಳಿ ನಿಲ್ದಾಣದ ಮೆಟ್ರೋ ರೈಲಿಗೆ ಹತ್ತಿಸಲಾಯಿತು. ರೈಲು 3.35 ಗಂಟೆಗೆ ಅತ್ತಿಗುಪ್ಪೆ ನಿಲ್ದಾಣ ತಲುಪುವಲ್ಲಿ ಯಶಸ್ವಿಯಾಯಿತು. ಕೂಡಲೇ ಮೂತ್ರ ಪಿಂಡವನ್ನು ಸಮೀಪದಲ್ಲೇ ಇದ್ದ ಆಸ್ಪತ್ರೆಗೆ ಸಾಗಿಸಿ ರೋಗಿಯೊಬ್ಬರಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ.
ಮೂತ್ರ ಪಿಂಡ ಸಾಗಣೆಯೊಂದಿಗೆ ನಮ್ಮ ಮೆಟ್ರೋ ಇದುವರಗೆ ಏಳು ಜೀವ ಉಳಿಸುವ ಅಂಗಾಂಗಗಳ ಸಾಗಣೆಗೆ ನೆರವಾಗಿದೆ. ಒಂದು ಯಕೃತ್, ನಾಲ್ಕು ಹೃದಯಗಳು, ಮತ್ತು ಒಂದು ಜೋಡಿ ಶ್ವಾಸಕೋಶಗಳು ಸೇರಿವೆ. ಜೀವ ಉಳಿಸುವ ವೈದ್ಯಕೀಯ ವಿಧಾನಗಳಿಗೆ ಸಾರ್ವಜನಿಕ ಸಾರಿಗೆ ಮತ್ತು ಆರೋಗ್ಯ ಸಂಸ್ಥೆಗಳ ನಡುವಿನ ಸಮಯದ ಮಹತ್ವವನ್ನು ಈ ಪ್ರಯತ್ನಗಳು ತೋರಿಸಿವೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.


