30ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸುಮಾರು 16 ವರ್ಷಗಳ ನಂತರ ಒಂದೆಡೆ ಕಲೆತು ಕುಣಿದು ಕುಪ್ಪಳಿಸಿದರು. ಪರಸ್ಪರ ಆಲಿಂಗನ ಮಾಡಿಕೊಂಡು ಕೈಕೈ ಕುಲುಕಿದರು. ಬಡತನದ ಬೇಗೆಯಲ್ಲಿ ಓದಿ ಉನ್ನತ ಹುದ್ದೆ ಪಡೆದು ಸ್ವಾವಲಂಬನೆ ಬದುಕು ಕಂಡ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹಳೆಯ ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪಿನ ಬುತ್ತಿಗಳನ್ನು ಗುರುಗಳ ಮುಂದೆ ಓದಿದ ನೆನಪಿನ ಮಧುರ ಕ್ಷಣಗಳನ್ನು ಮೆಲುಕು ಹಾಕಿ ಗುರುಗಳೊಂದಿಗೆ ಕೆಲಹೊತ್ತು ಖುಷಿಯಿಂದ ಹರಟುತ್ತ ನಲಿದಾಡಿದರು.ಪಟ್ಟಣದ ಕೆಪಿಎಸ್ ಶಾಲೆಯಲ್ಲಿ 2009-10ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಶಾಲಾ ಆವರಣದಲ್ಲಿ ಗುರುಗಳ ಸ್ಮರಿಸಲು ಹಮ್ಮಿಕೊಳ್ಳಲಾಗಿದ್ದ ಗುರು ವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ ಸರ್ಕಾರಿ ಶಾಲೆ ಉಳಿಯಲು ಹೊಸ ಭಾಷ್ಯ ಬರೆಯಿತು.
30ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸುಮಾರು 16 ವರ್ಷಗಳ ನಂತರ ಒಂದೆಡೆ ಕಲೆತು ಕುಣಿದು ಕುಪ್ಪಳಿಸಿದರು. ಪರಸ್ಪರ ಆಲಿಂಗನ ಮಾಡಿಕೊಂಡು ಕೈಕೈ ಕುಲುಕಿದರು. ಬಡತನದ ಬೇಗೆಯಲ್ಲಿ ಓದಿ ಉನ್ನತ ಹುದ್ದೆ ಪಡೆದು ಸ್ವಾವಲಂಬನೆ ಬದುಕು ಕಂಡ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.ಕಿಕ್ಕೇರಿಯಲ್ಲಿನ ಕೆಪಿಎಸ್ ಶಾಲೆಗೆ ಕಾಲ್ನಡಿಗೆಯಲ್ಲಿ ಬಂದು ಓದು ಕಲಿಯುತ್ತಿದ್ದ ರೀತಿ, ಮಳೆಯಲ್ಲಿ ನೆನೆದು ಮನೆಗೆ ತೆರಳುತ್ತಿದ್ದ ಸ್ಥಿತಿ, ಶಿಕ್ಷಕರು ತಿಳಿಸಿದ ಪಾಠ ಕಂಠ ಪಾಠ ಮಾಡಿ ಒಪ್ಪಿಸಲು ಪಡುತ್ತಿದ್ದ ಫಜೀತಿ ಎಲ್ಲವನ್ನು ಶಿಕ್ಷಕರ ಮುಂದೆ ತೆರೆದಿಟ್ಟರು.
ತಮ್ಮ ಸಂಸ್ಕಾರದ ವಿದ್ಯೆ, ಸನ್ನಡತೆಯ ಬದುಕು, ದಿನಪತ್ರಿಕೆಗಾಗಿ ನಿತ್ಯ ಚಡಪಡಿಸಿ ಕಿತ್ತುಕೊಂಡು ಓದಲು ನೀಡುತ್ತಿದ್ದ ಗುರುಗಳ ಸ್ಪೂರ್ತಿಯೇ ತಮ್ಮ ಬದುಕಿಗೆ ದಾರಿ ದೀಪವಾಗಿದೆ ಎಂದು ಒಕ್ಕೊರಲಿನಿಂದ ವಿದ್ಯಾರ್ಥಿಗಳು ತಿಳಿಸಿದರು.ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ, ಬ್ಯಾಂಕ್ ಸೇವೆ, ಶಿಕ್ಷಕ ವೃತ್ತಿ, ಉಪನ್ಯಾಸಕ, ಇಂಜಿನಿಯರ್, ಪ್ರಗತಿಪರರೈತ ಮತ್ತಿತರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಬಲು ದೂರದಿಂದತಮ್ಮ ನೆಚ್ಚಿನ ಗುರುಗಳಿಗೆ ವಂದಿಸಿ, ಅಭಿನಂದಿಸಿ ಆಶೀರ್ವಾದ ಪಡೆಯಲು ತುದಿಗಾಲಲ್ಲಿ ನಿಂತಿದ್ದರು.
ಅಂದು ಶಿಕ್ಷಕರು ನೀಡುತ್ತಿದ್ದ ಶಿಕ್ಷೆಯನ್ನು ಭಯದಿಂದ ಸ್ವೀಕರಿಸಿ ಓದು ಕಲಿಯುತ್ತಿದ್ದರು. ಇಂದು ಎಲ್ಲವೂ ಮರೆಯಾಗಿದೆ. ಗುರಿ ಸಾಧನೆಗೆ ಗುರು ಇರುವ ಆತ್ಮಸ್ಥೈರ್ಯ ಇತ್ತು. ಇಂದು ಎಲ್ಲವೂ ಮರೆಯಾಗಿದೆ. ಸಂಸ್ಕಾರ ವಿದ್ಯೆ ಮೊದಲು ಎಲ್ಲವೂ ಮೊಬೈಲ್ ಎನ್ನುವಂತಾಗಿದೆ. ಮೊಬೈಲ್ ಚಟ ಬಿಡಿಸಿ ಮಕ್ಕಳಿಗೆ ಓದುವ ಹಂಬಲ ಮೂಡಿಸಿ. ಇದೇ ಗುರುಗಳಿಗೆ ನೀಡುವ ಕಾಣಿಕೆ ಎಂದು ಬೆನ್ನುತಟ್ಟಿದರು.ಗುರುಗಳಾದ ಎಸ್.ಎಂ.ಬಸವರಾಜು, ಬಿ.ಎನ್. ಪರಶಿವಮೂರ್ತಿ, ಎಸ್. ಭಾಸ್ಕರ್, ಎಸ್.ಎ. ಕುಮಾರ್, ಎಚ್.ಆರ್. ಸುಧೀರ್, ಅಶೋಕ್, ಮದರಸಾಬ್, ಎಚ್.ಎಸ್. ಗೀತಾ, ಜೆ. ರಶ್ಮಿ, ಎಚ್.ಎಸ್. ದಿವ್ಯಕಲಾ, ಮಾಲತಿ, ಎಂ.ಆರ್.ಜಗದಾಂಭ, ಸುಮಾವತಿ, ಸಹಾಯಕಚಂದ್ರೇಗೌಡಅವರಿಗೆ ನೆನಪಿನ ಗುರುಕಾಣಿಕೆ ನೀಡಿ ಫಲತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಿ ಸಂಭ್ರಮಿಸಿದರು. ಶಿಷ್ಯರೊಂದಿಗೆ ಗುರುಗಳು ಕುಳಿತು ಹೋಳಿಗೆ ಊಟ ಸವಿದರು.
ಎಲ್.ಕೆ. ಹರೀಶ್, ಕೆ.ಪಿ. ಮಹೇಂದ್ರ, ಷಣ್ಮುಖ, ಎಂ.ಎಚ್. ದೀಪು, ಅವಿನಾಶ್, ಎಲ್,ಕೆ. ಧರ್ಮೇಂದ್ರ, ಜಹಿರ್ ಪಾಷ, ಟಿ.ಕೆ.ಕಿರಣ್, ಜಮುನಾ, ಗೌಡಲಕ್ಷ್ಮೀ, ಅರುಣ್‌ಕುಮಾರಿಇದ್ದರು.