ಸಾರಾಂಶ
ಚಿಕ್ಕಮಗಳೂರುವೈಷ್ಣೋದೇವಿ ಯಾತ್ರೆಗೆ ತೆರಳುತ್ತಿರುವ ಸಮಯದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹೀನಾ ಕೃತ್ಯವೆಸಗಿರುವ ಉಗ್ರ ಸಂಘಟನೆಯನ್ನು ಸದೆ ಬಡಿದು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ರಾಷ್ಟ್ರಪತಿಗೆ ಒತ್ತಾಯಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವೈಷ್ಣೋದೇವಿ ಯಾತ್ರೆಗೆ ತೆರಳುತ್ತಿರುವ ಸಮಯದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹೀನಾ ಕೃತ್ಯವೆಸಗಿರುವ ಉಗ್ರ ಸಂಘಟನೆಯನ್ನು ಸದೆ ಬಡಿದು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ರಾಷ್ಟ್ರಪತಿಗೆ ಒತ್ತಾಯಿಸಿದ್ದಾರೆ.ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಪರಿಷತ್ ಮುಖಂಡರು ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನ ಘೋಷಿತ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕ ಸಂಘಟನೆ ಕೃತ್ಯವೆಸಗಿ ರಾಷ್ಟ್ರದ ಬಹುಸಂಖ್ಯಾತ ಹಿಂದೂಗಳಿಗೆ ಧಕ್ಕೆಯುಂಟು ಮಾಡಿ ದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪರಿಷತ್ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ವೈಷ್ಣೋ ದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುವ ವೇಳೆ ಅಮಾಯಕ ಹಿಂದೂ ಬಾಂಧವರ ಮೇಲೆ ಉಗ್ರ ಸಂಘಟನೆ ದಾಳಿ ನಡೆಸಿ ಸುಮಾರು 10 ಮಂದಿ ನಿರ್ದೋಷಿ ಹಿಂದೂ ಯಾಂತ್ರಿಕರ ಸಾವಿಗೆ ಕಾರಣ ರಾಗಿದ್ದಾರೆ ಎಂದು ಹೇಳಿದರು.ಇಂಥಹ ಅಮಾನವೀಯ ಕೃತ್ಯದಿಂದ ದೇಶ ಆಘಾತಕ್ಕೊಳಗಾಗಿದೆ. ಜಮ್ಮು ಕಾಶ್ಮೀರ ಇಂದಿಗೂ ಪಾಕಿಸ್ತಾನ ಘೋಷಿತ ಭಯೋತ್ಪಾದನೆ ಸಂಘಟನೆಯಿಂದ ಮುಕ್ತವಾಗಿಲ್ಲ. 370 ವಿಧಿಯನ್ನು ರದ್ದುಪಡಿಸಿದ ನಂತರ ಆಶಾದೀಪ ಪ್ರಜ್ವಲಿಸಿದರೂ ಭಯೋತ್ಪಾದಕರ ಅಟ್ಟಹಾಸಕ್ಕೆ ಕಡಿವಾಣ ಇಲ್ಲದಂತಾಗಿದೆ ಎಂದರು.ಮುಖ್ಯವಾಗಿ ಹಿಂದೂಗಳನ್ನು ಗುರಿಪಡಿಸಿ ಹತ್ಯೆ ಮಾಡುತ್ತಿರುವ ಉಗ್ರ ಸಂಘಟನೆಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನೆಲ್ಲೇ ಪಾಕಿಸ್ತಾನದ ಹಸ್ತಾಕ್ಷೇಪ ಸ್ಪಷ್ಟವಾಗಿದೆ. ಹೀಗಾಗಿ ಎನ್‌ಡಿಎ ನೇತೃತ್ವದ ನೂತನ ಸರ್ಕಾರ ಹೇಯ ಕೃತ್ಯವೆಸಗಿರುವ ಇಸ್ಲಾಮಿಕ್ ಭಯೋತ್ಪಾದಕರು ದೇಶದ ಸ್ವಾಯತ್ತತೆಗೆ ಸವಾಲು ಹಾಕಿದಂತಾಗಿದೆ ಎಂದು ಹೇಳಿದರು.ಬಹುಸಂಖ್ಯಾತ ಹೊಂದಿರುವ ಹಿಂದೂಗಳ ಮೇಲೆ ಹೀನಾ ಕೃತ್ಯವೆಸಗುವ ಸಂಘಟನೆ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಕೃತ್ಯದಲ್ಲಿ ಸಿಲುಕಿರುವ ಹಿಂದೂಗಳಿಗೆ ರಕ್ಷಣೆ ಒದಗಿಸ ಬೇಕು ಎಂದರು.ಮನವಿ ಸಲ್ಲಿಸಿದ ಸಂದರ್ಭದಲ್ಲಿ ಪರಿಷತ್ ಜಿಲ್ಲಾ ಸಹ ಸಂಯೋಜಕ ಶ್ಯಾಮ್ ವಿ.ಗೌಡ, ನಗರ ಸಂಯೋಜಕ ಸುನೀಲ್ ಆಚಾರ್ಯ, ಧರ್ಮಪ್ರಸಾರ ಪ್ರಮುಖ ಪ್ರದೀಪ್, ಗೋರಕ್ಷ ಪ್ರಮುಖ ಕಿರಣ್, ಮಠ ಮಂದಿರ ಪ್ರಮುಖ್ ಆಟೋ ಶಿವಣ್ಣ ಹಾಜರಿದ್ದರು.