ಸಾರಾಂಶ
ಸಮೀಪದ ಕಕ್ಕಬೆಯ ನೆಟ್ಟು ಮಾಡಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿದು ರಕ್ಷಿಸಲಾಗಿದೆ.
ನಾಪೋಕ್ಲು: ಸಮೀಪದ ಕಕ್ಕಬೆಯ ನೆಟ್ಟು ಮಾಡಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿದು ರಕ್ಷಿಸಲಾಗಿದೆ . ಗ್ರಾಮದ ನಿವಾಸಿ ವೈಕೋಲ್ ಉಸ್ಮಾನ್ ಅವರ ಮನೆಯ ಸಮೀಪದಲ್ಲಿ ಭಾನುವಾರ ದೊಡ್ಡ ಗಾತ್ರದ ಹಾವೊಂದು ಪತ್ತೆಯಾಗಿ ಮನೆಯ ಮಂದಿ ಭಯ ಭೀತರಾಗಿದ್ದರು. ಈ ಬಗ್ಗೆ ಸ್ಥಳೀಯ ನಿವಾಸಿಗಳಾದ ಪಾಂಡ ನರೇಶ ಹಾಗೂ ರಘು ಪರಿಶೀಲಿಸಿ ಕಾಳಿಂಗ ಸರ್ಪ ಎಂದು ಖಾತರಿಪಡಿಸಿಕೊಂಡು ಉರಗ ತಜ್ಞ ಪೊನ್ನಿರ ಸ್ನೇಕ್ ಗಗನ್ ಅವರಿಗೆ ಮಾಹಿತಿ ನೀಡಲಾಗಿತ್ತು. ಸೋಮವಾರ ಸ್ಥಳಕ್ಕೆ ಆಗಮಿಸಿ ಪೊನ್ನಿರ ಗಗನ್ ಅವರು ಮಣ್ಣಿನ ಪೊಟರೆಯಲ್ಲಿ ಅವಿತಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟು ಸಮಸ್ಯೆಯನ್ನು ಪರಿಹರಿಸಿದ್ದಾರೆ.