ಸಾರಾಂಶ
ಕಿನ್ನಿಗೋಳಿ ಬಸ್ ನಿಲ್ದಾಣ ಬಳಿ ವೇದಿಕೆಯಲ್ಲಿ ಕಿನ್ನಿಗೋಳಿ ಬಸ್ ಚಾಲಕ, ನಿರ್ವಾಹಕ ಸಂಘದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಬಸ್ ಚಾಲಕ, ನಿರ್ವಾಹಕರು ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಉತ್ತಮ ಸೇವೆ ನೀಡುವ ಊರಿನ ರಾಯಭಾರಿಗಳು ಎಂದು ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ ಹೇಳಿದರು.ಕಿನ್ನಿಗೋಳಿ ಬಸ್ ನಿಲ್ದಾಣ ಬಳಿ ವೇದಿಕೆಯಲ್ಲಿ ನಡೆದ ಕಿನ್ನಿಗೋಳಿ ಬಸ್ ಚಾಲಕ, ನಿರ್ವಾಹಕ ಸಂಘದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಮಂಗಳೂರು ಉತ್ತರ ಸಂಚಾರಿ ಠಾಣೆಯ ಯೋಗೇಶ್ ಎಸ್.ಆರ್. ಹಾಗೂ ಮೂಲ್ಕಿ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ ಸಂಜೀವ ಅವರನ್ನು ಸನ್ಮಾನಿಸಲಾಯಿತು. ಬಸ್ ಚಾಲಕ, ನಿರ್ವಾಹಕರನ್ನು ಗೌರವಿಸಲಾಯಿತು.ಕಿನ್ನಿಗೋಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ತಾಲೂಕ್ ಪಂಚಾಯಿತಿ ಮಾಜಿ ಸದಸ್ಯ ದಿವಾಕರ ಕರ್ಕೇರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪ್ರಕಾಶ್ ಕಿನ್ನಿಗೋಳಿ, ಬಸ್ ಚಾಲಕ, ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭಾಸ್ಕರ ಪೂಜಾರಿ, ಅಧ್ಯಕ್ಷ ಸಂದೀಪ್ ಅಂಚನ್, ಕಾರ್ಯದರ್ಶಿ ಕ್ಯಾನ್ಯೂಟ್ ಕ್ಯಾಸ್ತೆಲಿನೋ (ಕೋನಿ), ಕೋಶಾಧಿಕಾರಿ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು. ಶರತ್ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.