ಕಿನ್ನಿಗೋಳಿ: ಜಾನಪದ ಸಾಂಸ್ಕತಿಕ ವೈಭವ, ಆಟಿಡೊಂಜಿ ದಿನ

| Published : Jul 23 2024, 12:47 AM IST

ಸಾರಾಂಶ

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಕಿನ್ನಿಗೋಳಿ, ಹಾಗೂ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ದ. ಕ. ಜಿಲ್ಲಾ ತಾಲೂಕು ಘಟಕ ಮೂಡಬಿದಿರೆ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನ ಪ್ರತಿಭೆಗಳಿಂದ ಜಾನಪದ ಸಾಂಸ್ಕೃತಿಕ ವೈಭವ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಳುನಾಡಿನ ಸಂಸ್ಕೃತಿ, ಆಚರಣೆ, ಆಚಾರ ವಿಚಾರಗಳು ಮರೆಯುವ ಹಂತದಲ್ಲಿ ಇದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಕಿನ್ನಿಗೋಳಿಯ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಹೇಳಿದ್ದಾರೆ.

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಕಿನ್ನಿಗೋಳಿ, ಹಾಗೂ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ದ. ಕ. ಜಿಲ್ಲಾ ತಾಲೂಕು ಘಟಕ ಮೂಡಬಿದಿರೆ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನ ಪ್ರತಿಭೆಗಳಿಂದ ಜರಗಿದ ಜಾನಪದ ಸಾಂಸ್ಕೃತಿಕ ವೈಭವ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರೆ ತಾಲೂಕು ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡ್ಡೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಒಂದಷ್ಟು ಕೆಲಸ ಕಾರ್ಯ ನಡೆದರೆ ಮಾತ್ರ ಸಾಧ್ಯ ಎಂದು ಹೇಳಿದರು.

ದ.ಕ. ಜಿಲ್ಲಾ ಕ.ಜಾ.ಪ. ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಲ್‌ಬ್ಯೆಲ್ , ಕಸಾಪದ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ರಾಜೇಶ್, ಡಾ.ರಾಜೇಶ್ ಆಳ್ವ, ಸದಾನಂದ ನಾರಾವಿ, ಕಜಪಾದ ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರಹಾಸ ದೇವಾಡಿಗ, ಸಾಣೂರು ಅರುಣ್ ಶೆಟ್ಟಿಗಾರ್, ಕಾರ್ಯದರ್ಶಿ ಮಲ್ಲಿಕಾ ಸುಕೇಶ್, ಭವ್ಯ ವಿನಯ್, ಡಾ. ಸೋಮಶೇಖರ್ ಮಯ್ಯ, ಅಭಿಷೇಕ ಶೆಟ್ಟಿ ಐಕಳ, ದೀನ್‌ರಾಜ್, ಬಸವರಾಜ ಮಂತ್ರಿ , ಕಿರಣ್ ಶೆಟ್ಟಿ , ಬಂಟ್ವಾಳ ಕಜಾಪ ಘಟಕದ ಅಧ್ಯಕ್ಷೆ ಪ್ರಮೀಳಾ ಸಾಯಿ ಪ್ರಿಯ ಮಂಗಳೂರು, ಕಾರ್ಯದರ್ಶಿ ಶಿವಪ್ರಸಾದ್ ಕೊಕ್ಕಡ ಪ್ರತಿಮಾ ಇದ್ದರು.

ಚೇತನಾ ರಾಜೇಂದ್ರ ಹೆಗಡೆ ನಿರೂಪಿಸಿದರು. ಜಾನಪದ ಸಾಂಸ್ಕೃತಿ ಕಾರ್ಯಕ್ರಮವನ್ನು ಸುಪ್ರಿಯಾ ಸುಳ್ಯ ನಿರೂಪಿಸಿದರು. ಆಟಿಡೊಂಜಿ ದಿನದಲ್ಲಿ ರಾಯಚೂರಿನ ವಾಯ್ಸ್ ಆಪ್ ಆರಾಧನ ಪ್ರತಿಭೆಗಳು ಭಾಗವಹಿಸಿ ಕಾರ್ಯಕ್ರಮ ಕೊಟ್ಟರು. ಗೇಮ್ಸ್ ಹಾಗೂ ಸಾಂಪ್ರದಾಯಿಕ ತಿಂಡಿತಿನಿಸು ಸವಿದು ಸಂಭ್ರಮಿಸಿದರು.