ಕಿನ್ನಿಗೋಳಿ: ಸಾಹಿತ್ಯ ಸಂಭ್ರಮ, ಪ್ರಶಸ್ತಿ ಪ್ರದಾನ, ಕವಿಗೋಷ್ಠಿ

| Published : Apr 19 2025, 12:34 AM IST

ಕಿನ್ನಿಗೋಳಿ: ಸಾಹಿತ್ಯ ಸಂಭ್ರಮ, ಪ್ರಶಸ್ತಿ ಪ್ರದಾನ, ಕವಿಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿನ್ನಿಗೋಳಿಯ ಯುಗಪುರುಷ ಸಭಾಭವದಲ್ಲಿ ಮಂಗಳೂರು ಕಥಾಬಿಂದು ಪ್ರಕಾಶನ ಹಾಗೂ ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ನಡೆದ ಸಾಹಿತ್ಯ ಸಂಭ್ರಮ, ಕವಿ ಗೋಷ್ಠಿ, ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಕೃತಿ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜೊತೆಗೆ ಹೃದಯ ಮುಟ್ಟುವ ಗಟ್ಟಿ ಸಾಹಿತ್ಯಗಳು ಬರಬೇಕೆಂದು ಸಾಹಿತಿ, ಲೇಖಕಿ ಲಕ್ಷ್ಮೀ ವಿ ಭಟ್ ತಲಂಜೇರಿ ಮಂಜೇಶ್ವರ ಹೇಳಿದ್ದಾರೆ.

ಕಿನ್ನಿಗೋಳಿಯ ಯುಗಪುರುಷ ಸಭಾಭವದಲ್ಲಿ ಮಂಗಳೂರು ಕಥಾಬಿಂದು ಪ್ರಕಾಶನ ಹಾಗೂ ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ನಡೆದ ಸಾಹಿತ್ಯ ಸಂಭ್ರಮ, ಕವಿ ಗೋಷ್ಠಿ, ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲಾ ಮಕ್ಕಳು ದಿನ ನಿತ್ಯ ಕನ್ನಡ ಪತ್ರಿಕೆ ಒದುವ ಹವ್ಯಾಸ ಬೆಳಸಿಕೊಳ್ಳಬೇಕು, ಕೃತಿ ರಚನೆ ಮಾಡುವವರು ಇದ್ದಾರೆ ಆದರೆ ಕೃತಿ ಕೊಂಡು ಓದುವ ಸಹೃದಯಿಗಳು ಕಡಿಮೆ ಆಗಿದ್ದಾರೆ. ಈ ನಿಟ್ಟಿನಲ್ಲಿ ನಾವು ಕನ್ನಡ ಉಳಿಸಿ ಬೆಳಸುವ ಕೆಲಸ ಮಾಡಬೇಕೆಂದು ಹೇಳಿದರು.

ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ ಕೃತಿಗಳನ್ನು ಬಿಡುಗಡೆ ಮಾಡಿದರು. ಸಾಹಿತಿ ಹರಿನರಸಿಂಹ ಉಪಾಧ್ಯಾಯ , ಡಾ. ಕೃಷ್ಣಪ್ಪ ಗೌಡ, ಸಾಹಿತಿ ರತ್ನಾ ಕೆ. ಭಟ್, ಹಿರಿಯ ಸಾಹಿತಿ ಡಾ.ಕೊಳ್ಚಪ್ಪ ಗೋವಿಂದ ಭಟ್, ಮಂಗಳೂರು ವಿವಿ ಪ್ರಾಂಶುಪಾಲ ಪ್ರೊ. ಗಣಪತಿ ಭಟ್ , ಮೇಜರ್ ಜಯರಾಜ್ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಸಾಧಕರಾದ ಡಾ. ಪಾಲಾಕ್ಷ ಹಾಗೂ ಡಾ.ಶಾಂತಾ ಪುತ್ತೂರು ಅವರಿಗೆ ಕಥಾಬಿಂಧು ಕನ್ನಡ ಶ್ರೀ ರಾಜ್ಯ ಪ್ರಶಸ್ತಿ, ಸುನಂದಾ ಕೋಟ್ಯಾನ್ ಅವರಿಗೆ ಸಮಾಜ ಸೇವಾ ರತ್ನ , ಮೋಹನ್ ಕೆ. ಬೋಳಾರ್ ಅವರಿಗೆ ಕಲಾ ಚೇತನ, ಸರಿತಾ ಅಂಬರೀಷ್ ಭಂಡಾರಿ ಹಾಗೂ ಗೌರಿಕಾ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿ, ಕಿರಿ ಕವಿಗಳ ಕವಿ ಗೋಷ್ಠಿ, ಚುಟುಕು ಕವಿ ಗೋಷ್ಠಿ ನಡೆಯಿತು. ಕಥಾಬಿಂದು ಪ್ರಕಾಶನದ ಪಿ ವಿ. ಪ್ರದೀಪ್ ಕುಮಾರ್ ಸ್ವಾಗತಿಸಿದರು. ವಿದ್ಯಾ ಶ್ರೀ ಅಡೂರು ಕಾರ್ಯಕ್ರಮ ನಿರೂಪಿಸಿದರು.