ಸಾರಾಂಶ
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭ. ಡಾ| ಲಿಲ್ಲಿ ಪೀರೆರಾ ಅವರನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಇಂದಿನ ದಿನಗಳಲ್ಲಿ ಶಿಕ್ಷಣ ಪದ್ಧತಿಯಲ್ಲಿ ಮಾನವೀಯ ಮೌಲ್ಯಯುತವಾದ ಶಿಕ್ಷಣದ ಅಗತ್ಯವಿದೆ ಎಂದು ಬೆಥನಿ ವಿದ್ಯಾ ಸಂಸ್ಥೆಗಳ ಪ್ರಾಂತ್ಯಾಧಿಕಾರಿಣಿ ಭಗಿನಿ ಡಾ. ಲಿಲ್ಲಿ ಪೀರೆರಾ ಬಿ ಎಸ್ ಹೇಳಿದರು.ಕಿನ್ನಿಗೋಳಿ ಲಿಟ್ಲ್ ಪ್ಲವರ್ ಪ್ರೌಢ ಶಾಲೆಯಲ್ಲಿ ಜರುಗಿದ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಮಾಡಿದರು. ಕಿನ್ನಿಗೋಳಿ ಚರ್ಚಿನ ಸಹಾಯಕ ಧರ್ಮಗುರು ಫಾ. ಸ್ಟೀವನ್ ಕುಟಿನ್ನೂ ಆಶೀರ್ವಚನಗೈದರು. ಮೇರಿವೆಲ್ ಕಾನ್ವೆಂಟಿನ ಸೂಪಿರಿಯರ್ ವಂ. ಭ. ಪ್ರೇಮಲತಾ ಬಿ. ಎಸ್, ಶಾಲಾ ಸಂಚಾಲಕಿ ಭ ಮೋರಿನ್, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿ ದೀಪಕ್ ರೋಡ್ರಿಗಸ್, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಸವಿತಾ ಕುಂದರ್, ಕಾರ್ಯದರ್ಶಿ ಆಶಾ, ಮುಖ್ಯ ಶಿಕ್ಷಕಿ ಸಿ. ಮೋನಿಕಾ ರೆಬೆಲ್ಲೂ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಭ. ಡಾ| ಲಿಲ್ಲಿ ಪೀರೆರಾ ಅವರನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಭ. ಲೋಲಿಟಾ ಬಿಸ್ ಸ್ವಾಗತಿಸಿದರು. ಸಂಗೀತಾ ವಂದಿಸಿದರು. ಶಿಕ್ಷಕ ಅಲ್ವಿನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.