ಸಾರಾಂಶ
ಕಿನ್ನಿಗೋಳಿ ಅಂಚೆ ಕಚೇರಿಯಲ್ಲಿ ಕಿನ್ನಿಗೋಳಿ ಅಂಚೆ ವಲಯದ ಆಶ್ರಯದಲ್ಲಿ ಅಂಚೆ ಮಾಹಿತಿ ಕಾರ್ಯಾಗಾರ ನಡೆಯಿತು. ತರಬೇತುದಾರ ಅವಿನಾಶ್ ರಾವ್ ತರಬೇತಿ ನೀಡಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೆ ಅತೀ ಹೆಚ್ಚು ಶಾಖೆ ಹೊಂದಿದ್ದು ಕಳೆದ 150 ಕ್ಕೂ ಹೆಚ್ಚು ವರ್ಷದಿಂದ ಉತ್ತಮ ಸೇವೆ ನೀಡುತ್ತ ಬಂದಿದ್ದು ಇದೀಗ ಅಂಚೆ ಸಿಬ್ಬಂದಿಗಳಿಗೆ ಕಾರ್ಯದಕ್ಷತೆ ಹೆಚ್ಚಿಸಲು ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತರಬೇತುದಾರ ಅವಿನಾಶ್ ರಾವ್ ಹೇಳಿದರು.ಕಿನ್ನಿಗೋಳಿ ಅಂಚೆ ಕಚೇರಿಯಲ್ಲಿ ಕಿನ್ನಿಗೋಳಿ ಅಂಚೆ ವಲಯದ ಆಶ್ರಯದಲ್ಲಿ ನಡೆದ ಅಂಚೆ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅಂಚೆಯ ಯೋಜನೆಗಳನ್ನು ಜನರಿಗೆ ಪರಿಚಯಿಸಿ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.ಮಂಗಳೂರು ವಿಭಾಗದ ಅಂಚೆ ವಲಯದ ಮಟ್ಟದಲ್ಲಿ ಸುಮಾರು 800 ಸಿಬ್ಬಂದಿಗಳಿಗೆ ಹಂತ ಹಂತವಾಗಿ ತರಬೇತಿ ನೀಡಲಾಗುವುದು. ಅಂಚೆ ಇಲಾಖೆಯೇ ಸಿದ್ದಪಡಿಸಿದ ತಂತ್ರಜ್ಞಾನ ಆಳವಡಿಸಿ ಅಂಚೆ ಬಟವಾಡೆ ಹಾಗೂ ಇನ್ನಿತರ ಸೇವೆಯಲ್ಲಿ ತ್ವರಿತ ವಿಲಾವೇರಿ ಮಾಡುವ ನಿಟ್ಟಿನಲ್ಲಿ ಇತಂಹ ತರಬೇತಿ ದೇಶವ್ಯಾಪ್ತಿ ಹಮ್ಮಿಕೊಳ್ಳಲಾಗಿದೆ ಇದರಿಂದ ಗ್ರಾಹಕರಿಗೆ ತ್ವರಿತ ಸೇವೆ ನೀಡುವಲ್ಲಿ ಅಂಚೆ ಇಲಾಖೆ ಉತ್ಸುಕವಾಗಿದೆ. ಗ್ರಾಮೀಣ ಪ್ರದೇಶದ ಅಂಚೆ ಕಚೇರಿಗಳಲ್ಲು ಇಂತಹ ಸೇವೆ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಅಂಚೆ ಸಿಬ್ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಅಂಚೆ ವಲಯ ಹಿರಿಯ ಅಂಚೆ ಅಧೀಕ್ಷಕ ಎಂ. ಸುಧಾಕರ ಮಲ್ಯ ತಿಳಿಸಿದರು.
ಕಿನ್ನಿಗೋಳಿ ಅಂಚೆ ಕಚೇರಿಯ ಅಂಚೆ ಪಾಲಕಿ ಹರಿಣಿ ಅಧ್ಯಕ್ಷತೆ ವಹಿಸಿದ್ದು ಇಲಾಖೆಯ ಶಿವದಾಸ್ ಕಟೀಲು, ಗೀತಾ , ಹೇಮಚಂದ್ರ, ರಾಮಚಂದ್ರ ಕಾಮತ್ , ರವೀಂದ್ರ ಕುಮಾರ್ ಕೆರೆಕಾಡು , ಸನತ್ ಶೆಟ್ಟಿ, ರಾಹುಲ್ ನಾಯ್ಕ್, ಅಂಚೆ ಮೆಲ್‌ಒವರ್‌ಸಿಸ್ ಧನಂಜಯ ಐಗಳ್ ಉಪಸ್ಥಿತರಿದ್ದರು.