ಕಿನ್ನಿಗೋಳಿ ಶಾಂತಿನಗರ ಖಿಲ್‌ರಿಯಾ ಜುಮಾ ಮಸೀದಿ ವಾರ್ಷಿಕ ಸಮಾರಂಭ

| Published : May 15 2025, 01:53 AM IST

ಕಿನ್ನಿಗೋಳಿ ಶಾಂತಿನಗರ ಖಿಲ್‌ರಿಯಾ ಜುಮಾ ಮಸೀದಿ ವಾರ್ಷಿಕ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕಿನ್ನಿಗೋಳಿ ಶಾಂತಿನಗರ ಖಿಲ್‌ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಮ್ ಮದ್ರಸ ಕಮಿಟಿ ನೇತೃತ್ವದಲ್ಲಿ ಮಸೀದಿಯ ಆವರಣದಲ್ಲಿ ಧಾರ್ಮಿಕ ಪ್ರವಚನ, ಖಿಲ್‌ರ್ ಮೌಲೂದ್ ಹಾಗೂ 52ನೇ ವಾರ್ಷಿಕ ಸಮಾರಂಭದ ಸಮಾರೋಪ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಧಾರ್ಮಿಕ ಕಾರ್ಯಕ್ರಮಗಳು ಆಧ್ಯಾತ್ಮದ ಜೊತೆಗೆ ಸೌಹಾರ್ದ ವಾತಾವರಣವನ್ನು ಸೃಷ್ಟಿಸುತ್ತದೆ. ಧಾರ್ಮಿಕ ಜ್ಞಾನವನ್ನು ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗುವ ಕುರಿತು ಎಳೆಯ ಪ್ರಾಯದಲ್ಲೇ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಮೂಲ್ಕಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅರುಣ್ ಪ್ರದೀಪ್ ಡಿಸೋಜ ಹೇಳಿದರು.

ಕಿನ್ನಿಗೋಳಿ ಶಾಂತಿನಗರ ಖಿಲ್‌ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಮ್ ಮದ್ರಸ ಕಮಿಟಿ ನೇತೃತ್ವದಲ್ಲಿ ಮಸೀದಿಯ ಆವರಣದಲ್ಲಿ ನಡೆದ ಧಾರ್ಮಿಕ ಪ್ರವಚನ, ಖಿಲ್‌ರ್ ಮೌಲೂದ್ ಹಾಗೂ 52ನೇ ವಾರ್ಷಿಕ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಜೆಎಂ ಶಾಂತಿನಗರ ಮಸೀದಿ ಸಮಿತಿಯ ಅಧ್ಯಕ್ಷ ಟಿ.ಎ. ಹನೀಫ್ ವಹಿಸಿದ್ದು, ಖತೀಬರಾದ ಉಮರುಲ್ ಫಾರೂಕ್ ಸಖಾಫಿ ದುವಾ ನೆರವೇರಿಸಿದರು.

ಫಾರೂಕ್ ಅಹ್ಮದ್ ಕರ್ನಿರೆ, ಉದ್ಯಮಿ ಅರುಣ್ ಸಾಲ್ಯಾನ್ ಶಾಂತಿಪಲ್ಕೆ, ಶರತ್ ಕುಮಾರ್ ಕಾರ್ನಾಡ್, ಮಿಸ್ಟಾಹುಲ್ ಮದೀನ ಕಲ್ಕರೆ ಪ್ರಾಂಶುಪಾಲ ಅಬ್ದುಲ್ಲಾ ಮದನಿ, ಎಂಜೆಎಂ ಕಿನ್ನಿಗೋಳಿ ಅಧ್ಯಕ್ಷ ಹಾಜಿ ಟಿಎಚ್ ಮಯ್ಯದ್ದಿ, ಅಲ್ ಇಖ್ಯಾಸ್ ಜುಮಾ ಮಸೀದಿ ಎಸ್. ಕೋಡಿ ಅಧ್ಯಕ್ಷ ರಿಝಾನ್ ಬಪ್ಪನಾಡು, ಬದ್ರಿಯಾ ಜುಮಾ ಮಸೀದಿ ಪಕ್ಷಿಕೆರೆ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಮೊಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು ಅಧ್ಯಕ್ಷ ಬಿ. ಮೊಹಮ್ಮದ್, ಎಂಜೆಎಂ ಕಿನ್ನಿಗೋಳಿ ಖತೀಬ್ ನೌಶಾದ್ ಅಝರಿ, ಅಲ್ ಇಖ್ಯಾಸ್ ಮಸೀದಿ ಎಸ್. ಕೋಡಿ ಖತೀಬ್ ಉಮರುಲ್ ಫಾರೂಕ್ ಸಖಾಫಿ, ಎಂಜೆಎಂ ಪುನರೂರು ಖತೀಬ್ ಅಶ್ರಫ್ ಸಅದಿ, ಬಿಜೆಎಂ ಪಕ್ಷಿಕೆರೆ ಖತೀಬ್ ಆದಂ ಅಮಾನಿ, ಕೆಜೆಎಂ ಶಾಂತಿನಗರ ಸಹ ಉಸ್ತಾದ್ ಸುಹೈಲ್ ಸಖಾಫಿ, ಮುಅಲ್ಲಿಂ ನವಾಝ್ ಹಾಶಿಮಿ, ಉಪಾಧ್ಯಕ್ಷ ನವಾಝ್ ಕಲ್ಕರೆ, ಪ್ರಧಾನ ಕಾರ್ಯದರ್ಶಿ ಇಕ್ಸಾಲ್ ಚೋಟರಿಕೆ, ಸಹ ಕಾರ್ಯದರ್ಶಿ ಕೆ. ಆರೀಫ್, ಕೋಶಾಧಿಕಾರಿ ನಾಸೀರ್ ಫ್ಲವರ್, ಲೆಕ್ಕಪರಿಶೋಧಕ ಜೆಹೆಚ್ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.

ಇನ್ಸಾಲ್ ಚೋಟರಿಕೆ ಸ್ವಾಗತಿಸಿದರು. ಜೆಎಚ್ ಜಲೀಲ್‌ ನಿರೂಪಿಸಿದರು.