ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿಕಿನ್ನಿಗೋಳಿಯ ಯಕ್ಷಲಹರಿ ಯುಗಪುರುಷ ಸಂಸ್ಥೆಯ ಆಶ್ರಯದಲ್ಲಿ ಕಳೆದ 34 ವರ್ಷಗಳಿಂದ ಯಕ್ಷಗಾನದ ಕೈಕಂರ್ಯ ಕಲಾ ಮಾತೆಯ ಸೇವೆ ನಿರಂತರ ನಡೆಯುತ್ತ ಬಂದಿದೆ. ಇದೀಗ 35 ನೇ ವರ್ಷದ ಕಲಾ ಪರ್ವ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ತಾಳಮದ್ದಲೆ ಸ್ಪರ್ಧೆ ಸಪ್ತಾಹ, ಯಕ್ಷ ಲಹರಿಯ ವಾರ್ಷಿಕೋತ್ಸವ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ ಸಮ್ಮಾನ ಜು.27ರಿಂದ ಆ.3ರ ತನಕ ನಡೆಯಲಿದೆ ಎಂದು ಯಕ್ಷಲಹರಿ ಸಂಸ್ಥೆಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ತಿಳಿಸಿಸಿದ್ದಾರೆ.ಕಿನ್ನಿಗೋಳಿಯ ದುರ್ಗಾ ರೆಸಿಡೆನ್ಸಿಯ ಸಭಾಭವನದಲ್ಲಿ ನಡೆದ ತಾಳಮದ್ದಳೆ ಸ್ಪರ್ಧೆ ಪೂರ್ವಾಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, 7 ದಿನಗಳಲ್ಲಿ ಆಹ್ವಾನಿತ ಹವ್ಯಾಸಿ ತಂಡಗಳ ತಾಳಮದ್ದಳೆ ಸ್ಪರ್ಧೆ ನಡೆಯಲಿದ್ದು , ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷ ಕಲಾವಿದರ ಸಮ್ಮಾನ ಜತೆಗೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ , ಸಹಕಾರ ನೀಡುವ ಯೋಜನೆ ನಡೆಯಲಿದೆ ಎಂದರು.ತಾಳಮದ್ದಳೆ ಸ್ಪರ್ಧಾ ಸಪ್ತಾಹದಲ್ಲಿ ಪ್ರತಿದಿನ ಸಭಾ ಕಾರ್ಯಕ್ರಮದಲ್ಲಿ ಹವ್ಯಾಸಿ ಹಿರಿಯ ಕಲಾವಿದರಿಗೆ ಗೌರವ , ಅಗಲಿದ ಹವ್ಯಾಸಿ ಯಕ್ಷಗಾನ ಕಲಾವಿದರ ಸಂಸ್ಮರಣೆ, ವಿದ್ಯಾರ್ಥಿ ವೇತನ ವಿತರಣೆ ,ಕಾರ್ಯಕ್ರಮ ನಡೆಯಲಿದೆಯೆಂದು ಪ್ರಧಾನ ಕಾರ್ಯದರ್ಶಿ ವಸಂತ ದೇವಾಡಿಗೆ ತಿಳಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ಕಾರ್ಯಕ್ರಮದ ರೂಪುರೇಷೆ ತಿಳಿಸಿದರು. ವಿನಯಾಚಾರ್ ಹೊಸಬೆಟ್ಟು , ಸುಧಾಕರ ಕುಲಾಲ್ ಮುಂಡ್ಕೂರು. ಅಶ್ವಥ ರಾವ್ ಮತ್ತಿತರರಿದ್ದರು. ಉಮೇಶ್ ನೀಲಾವರ ವಂದಿಸಿದರು. ಶ್ರೀವತ್ಸ ಭಟ್ ಕಾರ್ಯಕ್ರಮ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))