ಸಾರಾಂಶ
ಕಿನ್ನಿಗೋಳಿ ಅಂಚೆ ಕಚೇರಿಯ ಸ್ವಾಗತ ಸಭಾಭವನದಲ್ಲಿ ಮಂಗಳೂರು ಅಂಚೆ ವಲಯದ ಕ್ಲಸ್ಟರ್ ಮಟ್ಟದ ಅಂಚೆ ಇಲಾಖೆಯ ನೌಕರರಿಗೆ ಕಾರ್ಯಗಾರ ನಡೆಯಿತು. ಐಪಿಬಿಪಿಯ ಪ್ರವರ್ತಕ ವೆಂಕಟೇಶ ಪೈ ಸಾಲ ಯೋಜನೆಯ ಬಗ್ಗೆ , ಅಂಚೆ ಜೀವ ವಿಭಾಗದ ಅಧಿಕಾರಿ ಯತೀನ್ ಅಂಚೆ ಜೀವ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸರ್ಕಾರದ ಮಹತ್ವದ ಯೋಜನೆಗಳಾದ ಸುಕನ್ಯಾ ಸಮೃದ್ದಿ , ಮಹಿಳಾ ಸಮ್ಮಾನ ಹಾಗೂ ಜನ ಸಾಮಾನ್ಯರಿಗೆ ಅಗತ್ಯವಿರುವ ಕಡಿಮೆ ಪ್ರಿಮಿಯಂನ ವಿವಿಧ ವಿಮಾ ಯೋಜನೆಗಳು ಗ್ರಾಮಾಂತರ ಮಟ್ಟದಲ್ಲಿ ಅಂಚೆ ಇಲಾಖೆಯ ಉದ್ಯೋಗಿಗಳು ತಲುಪಿಸಿದ್ದಾರೆ. ಇನ್ನೂ ತಳಮಟ್ಟದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮುಟ್ಟಿಸುವ ಕೆಲಸ ಆಗುವ ಮೂಲಕ ಅಂಚೆ ಇಲಾಖೆ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮಂಗಳೂರು ಅಂಚೆ ವಲಯದ ಹಿರಿಯ ಅಂಚೆ ಅದೀಕ್ಷಕ ಎಂ. ಸುಧಾಕರ ಮಲ್ಯ ಹೇಳಿದ್ದಾರೆ.ಕಿನ್ನಿಗೋಳಿ ಅಂಚೆ ಕಚೇರಿಯ ಸ್ವಾಗತ ಸಭಾಭವನದಲ್ಲಿ ಮಂಗಳೂರು ಅಂಚೆ ವಲಯದ ಕ್ಲಸ್ಟರ್ ಮಟ್ಟದ ಅಂಚೆ ಇಲಾಖೆಯ ನೌಕರರಿಗೆ ನಡೆದ ಕಾರ್ಯಗಾರದಲ್ಲಿ ಮಾತನಾಡಿದರು.
ವಲಯದ ಉಪ ಅಂಚೆ ಅಧೀಕ್ಷಕ ದಿನೇಶ್ ಮಾತನಾಡಿ, ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡು ಅದರ ಪ್ರಯೋಜನಗಳನ್ನು ಜನರಿಗೆ ತಲುಪಿಬೇಕು ಹಾಗೂ ಈಗಾಗಲೇ ಹಲವು ಯೋಜನೆಯ ಪ್ರಗತಿಯನ್ನು ಗುರಿ ಮುಟ್ಟಲು ಪ್ರಯತ್ನಿಸಬೇಕೆಂದು ಹೇಳಿದರು.ಐಪಿಬಿಪಿಯ ಪ್ರವರ್ತಕ ವೆಂಕಟೇಶ ಪೈ ಸಾಲ ಯೋಜನೆಯ ಬಗ್ಗೆ , ಅಂಚೆ ಜೀವ ವಿಭಾಗದ ಅದಿಕಾರಿ ಯತೀನ್ ಅಂಚೆ ಜೀವ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಕಿನ್ನಿಗೋಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಶೀನ , ಮೇಲ್ವಿಚಾರಕ ಧನಂಜಯ ಐಗಳ್ , ಐಕಳ ಪೋಸ್ಟ್ ಮಾಸ್ಟರ್ ತಿಲಕ್ , ಪೆರ್ಮುದೆ ಪೋಸ್ಟ್ ಮಾಸ್ಟರ್ ದೇವದಾಸ ಶ್ಯಾನುಬಾಗ್, ಕಿನ್ನಿಗೋಳಿ ಅಂಚೆ ಕಚೇರಿಯ ಶೋಭಾ , ಶಿವದಾಸ್ ಕಟೀಲ್ , ರವೀಂದ್ರ ಕುಮಾರ್ ಕೆರೆಕಾಡು ಮತ್ತಿತರರು ಇದ್ದರು. ಸಹಾಯಕ ಅಂಚೆ ಅಧೀಕ್ಷಕ ಹರೀಶ್ ಪ್ರಸ್ತಾವನೆಗೈದರು. ರಾಮಚಂದ್ರ ಕಾಮತ್ ವಂದಿಸಿದರು. ಕ್ಲಸ್ಟರ್ ವಲಯದ ೩೦ ಅಂಚೆ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.