ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ

| Published : Feb 17 2024, 01:16 AM IST

ಸಾರಾಂಶ

ವಾದ್ಯ ಮೇಳ, ವೀರಭದ್ರ ಕುಣಿತದೊಂದಿಗೆ ಎತ್ತಿನಗಾಡಿಯನ್ನು ಬಣ್ಣ ಬಣ್ಣದ ಬಲೂನ್ ಗಳಿಂದ ಸಿಂಗರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಸಂವಿಧಾನ ಜಾಗೃತಿ ಜಾಥಾ ರಥವು ತಾಲೂಕಿನ ಕಿರಗಸೂರು ಗ್ರಾಪಂ ವ್ಯಾಪ್ತಿಯ ಹುಣಸೂರು ಗ್ರಾಮ ಪ್ರವೇಶಿಸಿತು.

ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ಏಳುಮಲೆ ಮಂಜು, ಗ್ರಾಮಸ್ಥರು ವಾದ್ಯ ಮೇಳ, ವೀರಭದ್ರ ಕುಣಿತದೊಂದಿಗೆ ಎತ್ತಿನಗಾಡಿಯನ್ನು ಬಣ್ಣ ಬಣ್ಣದ ಬಲೂನ್ ಗಳಿಂದ ಸಿಂಗರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಡೈರಿ ಅಧ್ಯಕ್ಷ ಮಹದೇವಪ್ಪ, ಡಾ. ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಪುಟ್ಟಯ್ಯ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷೆ ಚಿನ್ನತಾಯಮ್ಮ, ಪಿಡಿಒ ಧರಣೇಶ್, ಕಾರ್ಯದರ್ಶಿ ಮೀನಾಕ್ಷಿ, ಗ್ರಾಪಂ ಸದಸ್ಯರಾದ ಶಿವರಾಜು, ಸಿ‌. ನಿಂಗರಾಜು, ನಾಗರಾಜು, ಭಾಗ್ಯ, ಎಂ. ಮಹೇಶ್, ರಾಜೇಶ್ವರಿ, ಗಿರಿಜಮ್ಮ, ಸರೋಜಮ್ಮ, ಜ್ಯೋತಿ, ಮಹದೇವಸ್ವಾಮಿ, ಪಿ. ನಾಗರಾಜು, ಮಂಗಳಮ್ಮ, ನಾಗರತ್ನಮ್ಮ, ಕಾಮಿನಿ, ಗಿರೀಶ್, ಬಸವರಾಜ್, ಗ್ರಾಮಸ್ಥರು, ಅಧಿಕಾರಿ ವರ್ಗದವರು ಇದ್ದರು.