ಸಾರಾಂಶ
ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ವತಿಯಿಂದ ಹೊನ್ನೇಗೌಡನ ಮನೆ ನಾಗರಾಜು ಗದ್ದೆಯಲ್ಲಿ ಇತ್ತೀಚೆಗೆ ನಡೆದ ಕೆಸರುಗದ್ದೆ ಕ್ರೀಡಾಕೂಟದ ಮಹಿಳೆಯರ ಹಗ್ಗಾಜಗ್ಗಾಟದಲ್ಲಿ ಹಾರಳ್ಳಿ ನಂದಿ ಸಂಸ್ಥೆ ತಂಡ ಪ್ರಥಮ, ಸಿಂಗೂರು ಪಟ್ಟೆ ದ್ವಿತೀಯ ಸ್ಥಾನ ಪಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ವತಿಯಿಂದ ಹೊನ್ನೇಗೌಡನ ಮನೆ ನಾಗರಾಜು ಗದ್ದೆಯಲ್ಲಿ ಇತ್ತೀಚೆಗೆ ನಡೆದ ಕೆಸರುಗದ್ದೆ ಕ್ರೀಡಾಕೂಟದ ಮಹಿಳೆಯರ ಹಗ್ಗಾಜಗ್ಗಾಟದಲ್ಲಿ ಹಾರಳ್ಳಿ ನಂದಿ ಸಂಸ್ಥೆ ತಂಡ ಪ್ರಥಮ, ಸಿಂಗೂರು ಪಟ್ಟೆ ದ್ವಿತೀಯ ಸ್ಥಾನ ಪಡೆಯಿತು.ಮಹಿಳೆಯರ ಥ್ರೋಬಾಲ್‍ನಲ್ಲಿ ಸಿಂಗೂರುಪಟ್ಟೆ(ಪ್ರ), ಕೆಳಗಳ್ಳಿ ಪಟ್ಟೆ(ದ್ವಿ), ದಂಪತಿ ಓಟದಲ್ಲಿ ಪ್ರವೀಣ್ ಪುಣ್ಯ(ಪ್ರ), ರಶಿನ್ ಚರಿತಾ ಮತ್ತು ಸಂದೇಶ್ ಸತ್ಯಪ್ರಿಯ ದ್ವಿತೀಯ ಸ್ಥಾನ ಹಂಚಿಕೊಂಡರು.
ಪುರುಷರ ವಾಲಿಬಾಲ್‍ನಲ್ಲಿ ಕೆಳಗಳ್ಳಿಪಟ್ಟೆ (ಪ್ರ), ನಂದಿಸಂಸ್ಥೆ (ದ್ವಿ),. ಪುರುಷರ ಹಗ್ಗ ಜಗ್ಗಾಟದಲ್ಲಿ ಕೆಳಗಳ್ಳಿ ಪಟ್ಟೆ (ಪ್ರ), ಸಿಂಗೂರುಪಟ್ಟೆ (ದ್ವಿ), 50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಬಿದ್ದಪ್ಪ (ಪ್ರ), ಚಂದ್ರಾಜು (ದ್ವಿ), ಯುವಕರ ವಿಭಾಗದಲ್ಲಿ ಗವೀಶ್ (ಪ್ರ), ಪ್ರೇಮಾನಾಥ್ (ದ್ವಿ), 20 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ವಿ.ಎಂ. ಕಾರ್ತಿಲ್ (ಪ್ರ), ನಿಖಿಲ್(ದ್ವಿ), ಯುವತಿಯರ ವಿಭಾಗದಲ್ಲಿ ಲಿಕಿತಾ (ಪ್ರ), ಹರ್ಷಿತಾ (ದ್ವಿ), ಮಹಿಳೆಯರ ವಿಭಾಗದಲ್ಲಿ ರೀನಾ ಶಿವಕುಮಾರ್ (ಪ್ರ), ಭಾನುವಮತಿ (ದ್ವಿ), ವಯಸ್ಕ ಮಹಿಳೆಯರ ವಿಭಾಗದಲ್ಲಿ ರೇಖಾ(ಪ್ರ), ವಿಶಾಲಾಕ್ಷಿ (ದ್ವಿ) ಸ್ಥಾನ ಗಳಿಸಿದರು.ಬಾಲಕಿಯರ ವಿಭಾಗದಲ್ಲಿ ಮೌಲ್ಯ(ಪ್ರ), ದೀಕ್ಷಿ(ದ್ವಿ), ಬಾಲಕರ ವಿಭಾಗದಲ್ಲಿ ಆಯುಷ್(ಪ್ರ), ಸ್ವರಾಜ್(ದ್ವಿ) ಸ್ಥಾನ ಗಳಿಸಿದರು. ಪುಟಾಣಿಗಳ ವಿಭಾಗದಲ್ಲಿ ಮನ್ವಿ(ಪ್ರ), ಕುಶಾನಿ(ದ್ವಿ) ಸ್ಥಾನ ಗಳಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕೃಷಿಕರಿಗೂ ಕೆಸರುಗದ್ದೆ ಕ್ರೀಡಾಕೂಟಕ್ಕೂ ಅವಿನಾಭಾವ ಸಂಬಂಧವಿದೆ. ಇಂತಹ ಕ್ರೀಡಾಸ್ಪರ್ಧೆಗಳು ನಶಿಸಿಹೋಗದಂತೆ ಎಚ್ಚರ ವಹಿಸಿಬೇಕು. ಮುಂದಿನ ಪೀಳಿಗೆ ಇದನ್ನು ಮುಂದುವರಿಸಿಕೊಂಡು ಹೋಗಬೇಕು. ನಗರ ಪ್ರದೇಶದಲ್ಲಿ ಯುವಕರು ನೌಕರಿ ಮಾಡುತ್ತಿದ್ದರೂ ತಮ್ಮೂರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವರ್ಷಕೊಮ್ಮೆ ಭಾಗವಹಿಸಬೇಕು ಎಂದು ಹೇಳಿದರು.ಗ್ರಾಮ ಮಂಡಳಿ ಅಧ್ಯಕ್ಷ ಚಿದಾನಂದ, ಕಿರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾರಾ ಸುಧೀರ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.