23ಕ್ಕೆ ಕಿರಿಕ್‌ ಚಿತ್ರ ರಾಜ್ಯಾದ್ಯಂತ ಬಿಡುಗಡೆ

| Published : May 20 2025, 01:32 AM IST

ಸಾರಾಂಶ

ಮಾ.೨೦ರಂದು ಚಲನಚಿತ್ರದ ಟ್ರೈಲರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬಿಡುಗಡೆ ಮಾಡಿದ್ದು, ರಾಜ್ಯದ ೫೦ ರಿಂದ ೬೦ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಮಂಡ್ಯ: ನಾಗತೀಹಳ್ಳಿ ಗಂಗಾಧರ್ ನಿರ್ದೇಶನದ ‘ಕಿರಿಕ್’ ಚಲನಚಿತ್ರವು ಮೇ ೨೩ರಂದು ರಾಜ್ಯಾದ್ಯಂತ ತೆರ ಕಾಣಲಿದೆ ಎಂದು ಚಿತ್ರದ ಛಾಯಾಗ್ರಾಹಕ ಕೀರ್ತಿವರ್ದನ್ ತಿಳಿಸಿದರು. ಚಲನಚಿತ್ರದಲ್ಲಿ ಶೇ.೭೦ರಷ್ಟು ಕಲಾವಿದರು ಜಿಲ್ಲೆಯ ನಾಗಮಂಗಲ ತಾಲೂಕಿನವರೇ ಆಗಿದ್ದು, ಒಂದು ಕೋಟಿ ರು. ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಮಾ.೨೦ರಂದು ಚಲನಚಿತ್ರದ ಟ್ರೈಲರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬಿಡುಗಡೆ ಮಾಡಿದ್ದು, ರಾಜ್ಯದ ೫೦ ರಿಂದ ೬೦ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣರಂತಹ ಹಿರಿಯ ತಾರಾಗಣವಿದ್ದು, ಮಂಡ್ಯ, ಮೈಸೂರು, ಕಾರವಾರ, ಮಂಗಳೂರು ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಆರ್‌.ವಿ.ಭರತ್ ಅವರ ಸಂಗೀತ ನಿರ್ದೇಶನದಲ್ಲಿ ೪ ಹಾಡುಗಳಿವೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ನಿರ್ಮಾಪಕ ನಾಗರಾಜ್, ಸಹನಿರ್ಮಾಪಕ ಹರೀಶ್ ಶೆಟ್ಟಿ, ನಾಯಕ ನಟ ರವಿಶೆಟ್ಟಿ, ರುದ್ರಾರಾಧ್ಯ, ದೀಪಕ್‌ಗೌಡ, ರಾಜೇಶ್ ಇದ್ದರು.