ಕಿರ್ಲೋಸ್ಕರ್ ಸೊಸೈಟಿ ನಿರ್ದೇಶಕರ ಚುನಾವಣೆ ತಡೆಯಾಜ್ಞೆಗೆ ಮನವಿ: ರಾಮಪ್ಪ

| Published : Feb 21 2025, 12:49 AM IST

ಕಿರ್ಲೋಸ್ಕರ್ ಸೊಸೈಟಿ ನಿರ್ದೇಶಕರ ಚುನಾವಣೆ ತಡೆಯಾಜ್ಞೆಗೆ ಮನವಿ: ರಾಮಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ದಿ ಮೈಸೂರು ಕಿರ್ಲೋಸ್ಕರ್ ಕಾರ್ಮಿಕರ ಸಹಕಾರ ಸೊಸೈಟಿ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಫೆ.22ರಂದು ನಿಗದಿಯಾಗಿದ್ದು, ಈ ಚುನಾವಣೆ ನಡೆಸದಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆಗೆ ಮನವಿ ಸಲ್ಲಿಸಿದ್ದೇವೆ ಎಂದು ಆಡಳಿತ ವಿರೋಧಿ ಬಣದ ಕಾರ್ಮಿಕ ಮುಖಂಡ ಎಸ್.ಕೆ. ರಾಮಪ್ಪ ಹೇಳಿದ್ದಾರೆ.

ಹರಿಹರ: ದಿ ಮೈಸೂರು ಕಿರ್ಲೋಸ್ಕರ್ ಕಾರ್ಮಿಕರ ಸಹಕಾರ ಸೊಸೈಟಿ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಫೆ.22ರಂದು ನಿಗದಿಯಾಗಿದ್ದು, ಈ ಚುನಾವಣೆ ನಡೆಸದಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆಗೆ ಮನವಿ ಸಲ್ಲಿಸಿದ್ದೇವೆ ಎಂದು ಆಡಳಿತ ವಿರೋಧಿ ಬಣದ ಕಾರ್ಮಿಕ ಮುಖಂಡ ಎಸ್.ಕೆ. ರಾಮಪ್ಪ ಹೇಳಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಆಡಳಿತ ನಡೆಸುತ್ತಿರುವ ಗುಂಪಿನ ಮೇಲೆ ವ್ಯಾಪಕ ದೂರುಗಳು ಇವೆ. ದಾವಣಗೆರೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಿಂದಿನ ಆಡಳಿತ ಮಂಡಳಿಯಿಂದ ಹಣ ವಸೂಲು ಮಾಡಲು ಫೆ.17ರಂದು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಚುನಾವಣೆ ನಡೆಸದಂತೆ ತಡೆಯಾಜ್ಞೆಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಪ್ರತಿ 5 ವರ್ಷಕೊಮ್ಮೆ ನಡೆಯುವ ಈ ಚುನಾವಣೆಯಲ್ಲಿ ಸತತ 3 ಅವಧಿಗಳ ಕಾಲ ಭ್ರಷ್ಟಾಚಾರ ನಡೆಸಿದ ತಂಡ ಮತ್ತೊಮ್ಮೆ ಚುನಾವಣೆಗೆ ತಯಾರಿ ನಡೆಸಿದೆ. ತಡೆಯಾಜ್ಞೆ ಸಿಗದಿದ್ದಲ್ಲಿ ಅವರನ್ನು ಸೋಲಿಸುವ ಸಲುವಾಗಿ ಚುನಾವಣೆಯಲ್ಲಿ ಕ್ರಮ ಸಂಖ್ಯೆ 80 ಎಸ್.ಕೆ. ರಾಮಪ್ಪ (ಷಾಮಿಯಾನ ಗುರುತು) ಆದ ನಾನು, ಹಾಗೂ ಕ್ರಮಸಂಖ್ಯೆ 01 ಎಚ್. ಅಜ್ಜಯ್ಯ (ಗಾಡ್ರೇಜ್ ಗುರುತಿನಲ್ಲಿ) ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದೇವೆ. ಚುನಾವಣೆ ನಡೆದಲ್ಲಿ ಮತದಾರರು ನಮಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಈ ಬಾರಿ ಅತ್ಯಂತ ಮಹತ್ವದ ಚುನಾವಣೆಯಾಗಿದೆ. ಭ್ರಷ್ಟ ಆಡಳಿತಗಾರರಿಗೆ ಮತದಾನ ಮೂಲಕ ತಕ್ಕ ಉತ್ತರ ನೀಡಲು ಮತದಾರ ಕಾರ್ಮಿಕರು ಮಂದಾಗಬೇಕು ಎಂದು ಮುಖಂಡರಾದ ಎಚ್. ಅಜ್ಜಯ್ಯ, ಚನ್ನಕೇಶವ ಮೂರ್ತಿ, ನಾಗೇಂದ್ರಪ್ಪ ಕ್ಯಾತಾರಿ, ಸ್ಯಾಂಸನ್ ವಿ. ಆಗ್ರಹಿಸಿದರು.

- - - -20ಎಚ್.ಆರ್.ಆರ್03: