ಕಿತ್ತೂರು ರಾಣಿ ಚನ್ನಮ ಕನ್ನಡ ಮಣ್ಣಿನ ವೀರರಾಣಿ: ಡಾ.ವೀರಣ್ಣ ಚರಂತಿಮಠ

| Published : Oct 24 2025, 01:00 AM IST

ಕಿತ್ತೂರು ರಾಣಿ ಚನ್ನಮ ಕನ್ನಡ ಮಣ್ಣಿನ ವೀರರಾಣಿ: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರರಾಣಿ, ಕನ್ನಡ ಮಣ್ಣಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರ ಚನ್ನಮ್ಮನವರ ಶೌರ್ಯ ಎಂದೆಂದಿಗೂ ಸ್ಮರಣಿಯವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರರಾಣಿ, ಕನ್ನಡ ಮಣ್ಣಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರ ಚೆನ್ನಮ್ಮನವರ ಶೌರ್ಯ ಎಂದೆಂದಿಗೂ ಸ್ಮರಣಿಯವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜೀನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಕಿತ್ತೂರು ಚೆನ್ನಮ್ಮನ ಜಯಂತಿ ಆಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ನನರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಬೀಜಗಳನ್ನು ಬಿತ್ತಿದ ಪ್ರಮುಖ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕೂಡ ಒಬ್ಬರು. ಚನ್ನಮ್ಮ ಜನರು ಸ್ವತಂತ್ರರಾಗಿರಬೇಕು ಮತ್ತು ಸ್ವಾಭಿಮಾನದಿಂದ ತಮ್ಮ ಜೀವನವನ ನಡೆಸಬೇಕೆಂದು ಬಯಸಿದ್ದರು, ಅವರ ಹೋರಾಟದ ಜೀವನ ಎಲ್ಲರಿಗೂ ಆದರ್ಶ ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿ, ಶಿವಾನಂದ ಟವಳಿ ಕಿತ್ತೂರ ಚೆನ್ನಮ್ಮ ಜೀವನ ಚರಿತ್ರೆ ವಿವರಿಸಿದರು. ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾರಾವ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೆಮಾದ್ರಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಶ್ರೀಧರ ನಾಗರಬೆಟ್ಟ, ಗುಂಡುರಾವ ಶಿಂಧೆ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ರವಿ ಪಟ್ಟಣದ, ಉಪಾಧ್ಯಕ್ಷ ಶಂಕರ ಅರಷಿಣಗುಡಿ, ಸಂತೋಷ ಜಕಾತಿ, ಪರಶುರಾಮ ಮುಳಗುಂದ, ಸಿದ್ದಣ್ಣ ಹಂಪನಗೌಡರ, ರಾಮಣ್ಣ ಜುಮನಾಳ, ಆನಂದ ಕೊಟಗಿ, ರವಿ ಧಾಮಜಿ, ಸಂಗಣಗೌಡ ಗೌಡರ, ಪ್ರಶಾಂತ ಕಗ್ಗೋಡ, ಈರಣ್ಣ ಕಲಬುರಗಿ, ನೀಲಪ್ಪ ಬೇವೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.