ಸಾರಾಂಶ
ಸಂಘದ ಸದಸ್ಯರು, ನಿರ್ದೇಶಕರು ನನ್ನನ್ನು 6ನೇ ಬಾರಿ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ್ದಾರೆ. ನನ್ನ ಅವಧಿಯಲ್ಲಿ ಸಂಘಕ್ಕೆ ಹಲಗೂರು ರಸ್ತೆಯಲ್ಲಿ ನಿವೇಶನ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಈ ಸಂಘದಿಂದ ಇದುವರೆಗೂ ಸಾವಿರಾರು ಜನರು ಮೂರೂವರೆ ಕೋಟಿ ರು. ಗಳನ್ನು ಸಾಲವಾಗಿ ಪಡೆದು ಸಾಲವನ್ನು ಮರುಪಾವತಿಸಿ ಸಂಘವನ್ನು ಅಭಿವೃದ್ಧಿಗೊಳಿಸಲು ಕೈಜೋಡಿಸಿದ್ದಾರೆ .
ಮದ್ದೂರು: ತಾಲೂಕಿನ ಭಾರತೀ ನಗರದ ಸ್ಫೂರ್ತಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ.ಎಲ್.ಶಿವರಾಮು 6ನೇ ಬಾರಿ ಆಯ್ಕೆಯಾಗಿದ್ದಾರೆ.
ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಎಲ್.ಶಿವರಾಮು, ಉಪಾಧ್ಯಕ್ಷರಾಗಿ ಎಸ್.ಬಿ.ಸಿದ್ದರಾಮೇಗೌಡ ಅವಿರೋಧವಾಗಿ ಆಯ್ಕೆಗೊಂಡರು. ನೂತನ ಅಧ್ಯಕ್ಷ ಕೆ.ಎಲ್.ಶಿವರಾಮು ಮಾತನಾಡಿ, ಸಂಘದ ಸದಸ್ಯರು, ನಿರ್ದೇಶಕರು ನನ್ನನ್ನು 6ನೇ ಬಾರಿ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ್ದಾರೆ. ನನ್ನ ಅವಧಿಯಲ್ಲಿ ಸಂಘಕ್ಕೆ ಹಲಗೂರು ರಸ್ತೆಯಲ್ಲಿ ನಿವೇಶನ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಈ ಸಂಘದಿಂದ ಇದುವರೆಗೂ ಸಾವಿರಾರು ಜನರು ಮೂರೂವರೆ ಕೋಟಿ ರು. ಗಳನ್ನು ಸಾಲವಾಗಿ ಪಡೆದು ಸಾಲವನ್ನು ಮರುಪಾವತಿಸಿ ಸಂಘವನ್ನು ಅಭಿವೃದ್ಧಿಗೊಳಿಸಲು ಕೈಜೋಡಿಸಿದ್ದಾರೆ ಎಂದರು. ಇದೇ ವೇಳೆ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಸಂಘದ ಸದಸ್ಯರು ಮತ್ತು ಮುಖಂಡರು ಅಭಿನಂದಿಸಿ ಗೌರವಿಸಿದರು.ಸಂಘದ ಉಪಾಧ್ಯಕ್ಷ ಎಸ್.ಬಿ.ಸಿದ್ದರಾಮೇಗೌಡ, ನಿರ್ದೇಶಕರಾದ ಬಿ.ಎನ್.ರಘು, ಎಸ್.ಶಿವಕುಮಾರ್, ಎ.ಬಿ.ರವೀಂದ್ರ, ಎ.ಎಸ್.ವಿನಯ್, ಟಿ.ಪಿ.ಮನೋಹರ್ ಗೌಡ, ಎಸ್.ಎಚ್.ಶಿವರಾಜು, ಸಿ.ಕೆಂಪರಾಜು, ಬಿ.ಕೆ.ಮಮತ, ಎಂ.ಎಸ್.ಸುರೇಶ್, ಎಂ.ಆರ್.ರೇಖಾ, ಎಚ್.ಸಿ.ಆತ್ಮಾನಂದ, ವಿಜೇಂದ್ರ, ಗುರುಸಿದ್ದಯ್ಯ, ಎ.ಎಚ್.ರಮೇಶ್, ಮುಖಂಡರಾದ ಸಬ್ಬನಹಳ್ಳಿ ಹೊನ್ನೇಗೌಡ, ಸಿಇಒ ಕೆ.ಎಸ್.ಅಜಯ್ ಕುಮಾರ್, ಕುಮಾರ್ ಸೇರಿದಂತೆ ಹಲವರಿದ್ದರು.