ಕೆ.ಎನ್.ಕೆಂಗೇಗೌಡರ ರೈತ ಸಭಾಭವನ ಡಿ.4ರಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ: ಕೆ.ಪುರುಷೋತ್ತಮ್

| Published : Dec 03 2024, 12:35 AM IST

ಕೆ.ಎನ್.ಕೆಂಗೇಗೌಡರ ರೈತ ಸಭಾಭವನ ಡಿ.4ರಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ: ಕೆ.ಪುರುಷೋತ್ತಮ್
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಚಿವ ಕೆ.ಎನ್.ರಾಜಣ್ಣ ಬ್ಯಾಂಕಿಂಗ್ ಶಾಖೆಯನ್ನು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಗೊಬ್ಬರದ ಶಾಖೆಯನ್ನು , ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಹೆಚ್. ಟಿ.ಮಂಜು ಸಹಕಾರ ಧ್ವಜಾರೋಹಣ ನೆರವೇರಿಸುವರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಸಬಾ ಸೊಸೈಟಿಯಿಂದ ನಿರ್ಮಿಸಿರುವ ಪಟ್ಟಣದಲ್ಲಿ ನಿರ್ಮಿಸಿರುವ ನೂತನ ಕೆ.ಎನ್.ಕೆಂಗೇಗೌಡ ರೈತ ಸಭಾ ಭವನದ ಕಟ್ಟಡವನ್ನು ಡಿಸೆಂಬರ್ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ತಿಳಿಸಿದರು.

ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದಿಂದ ನೂತನವಾಗಿ ನಿರ್ಮಿಸಿರುವ ಕೆ.ಎನ್.ಕೆಂಗೇಗೌಡ ರೈತ ಸಭಾ ಭವನದ ಕಟ್ಟಡವನ್ನು ಅಂದು ಮಧ್ಯಾಹ್ನ ಸಿಎಂ ಉದ್ಘಾಟಿಸುವರು ಎಂದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಬ್ಯಾಂಕಿಂಗ್ ಶಾಖೆಯನ್ನು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಗೊಬ್ಬರದ ಶಾಖೆಯನ್ನು , ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಹೆಚ್. ಟಿ.ಮಂಜು ಸಹಕಾರ ಧ್ವಜಾರೋಹಣ ನೆರವೇರಿಸುವರು ಎಂದರು.

ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿದರೆ, ಮಾಜಿ ಸಚಿವ ಡಾ. ನಾರಾಯಣಗೌಡ ಸಂಘದ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸುವರು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ರೈತರಿಗೆ ಬೆಳೆ ಸಾಲ ವಿತರಿಸಿದರೆ, ಉಪಾಧ್ಯಕ್ಷ ಹೆಚ್. ಕೆ.ಅಶೋಕ್ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಚೆಕ್ ನೀಡುವರು. ಸಂಘದ ಅಧ್ಯಕ್ಷನಾಗಿ ನಾನು ಸಮಾರಂಭದ ಅಧ್ಯಕ್ಷತೆ ವಹಿಸುವುದಾಗಿ ಹೇಳಿದರು.

ತಾಲೂಕಿನ ಸಹಕಾರಿ ಬಂಧುಗಳು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ರೈತ ಬಾಂಧವರು ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಶೋಭಾ ಬಸವರಾಜು, ಸಂಘದ ಕಾರ್ಯದರ್ಶಿ ಬಿ.ಎನ್.ಕಾಂತರಾಜು, ವೃತ್ತ ಮೇಲ್ವಿಚಾರಕರಾದ ಆದಿಲ್ ಪಾಷ, ರಾಘವೇಂದ್ರ, ಜಲೇಂದ್ರ, ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎಸ್.ಚಂದ್ರು, ಜವರೇಗೌಡ, ಕೆ.ಟಿ.ಚಕ್ರಪಾಣಿ, ಕೆ.ಎನ್.ಕಾಳೇಗೌಡ, ಚಂದ್ರಶೇಖರ್, ಸಿ.ಜೆ.ಮಂಜೇಗೌಡ, ಬಲರಾಮೇಗೌಡ, ರಾಜನಾಯಕ, ರಾಜಯ್ಯ ಹಾಗೂ ಕೆ.ಆರ್.ರಘು ಉಪಸ್ಥಿತರಿದ್ದರು.