ಸಾರಾಂಶ
- ತಣಿಗೆರೆ ರೈತ ಉತ್ಪಾದಕ ಕಂಪನಿ ವಾರ್ಷಿಕ ಮಹಾಸಭೆ- - - ದಾವಣಗೆರೆ: ಇಂದಿನ ತೋಟಗಾರಿಕಾ ಕೃಷಿ ಎನ್ನುವುದು ಪ್ರಕೃತಿಗೆ ಪೂರಕವಾಗಿದ್ದರೆ, ಸುಸ್ತಿರವಾಗಿದ್ದರೆ, ಸಮಗ್ರ ಬೆಳೆಗಳನ್ನು ಅಳವಡಿಸಿಕೊಂಡಿದ್ದರೆ ಮಾತ್ರ ಉತ್ತಮ ಇಳುವರಿ ಪಡೆಯಬಹುದು ಎಂದು ಮೈಕ್ರೋಬಿ ಫೌಂಡೇಶನ್ ಜಿಲ್ಲಾ ಸಂಚಾಲಕ ದಿದ್ದಿಗೆ ಮಹದೇವಪ್ಪ ಹೇಳಿದರು.
ಬೆಂಗಳೂರಿನ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ, ತಣಿಗೆರೆಯ ರಾಮತೀರ್ಥ ರೈತ ಉತ್ಪಾದಕ ಕಂಪನಿ, ಸಹರಾ ಸಂಸ್ಥೆ ಸಹಯೋಗದಲ್ಲಿ ಚನ್ನಗಿರಿ ತಾಲೂಕು ತಣಿಗೆರೆ ಗ್ರಾಮದ ರೈತ ಉತ್ಪಾದಕ ಕಂಪನಿಯ 2023- 2024ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.ಅತಿಯಾದ ರಾಸಾಯನಿಕ ಬಳಕೆಯಿಂದ ರಾಜ್ಯದಲ್ಲಿ ಇಂದು ಶೇ.55ರಷ್ಟು ಭೂಮಿ ಬರಡಾಗಿದೆ. ಇದನ್ನು ಮರುಜೀವಗೊಳಿಸಲು ಕನಿಷ್ಠ ತ್ಯಾಜ್ಯಗಳನ್ನು ಮತ್ತು ಬೆಳೆಯ ಪಳಿಯುಳಿಕೆಗಳನ್ನು ಭೂತಾಯಿಗೆ ಸಮರ್ಪಿಸಿ, ಜೈವಿಕ ಕೃಷಿಗೆ ಹೆಚ್ಚಿನ ಒಲವು ತೋರಿಸಬೇಕಾಗಿದೆ. ಇಂದಿನ ಕೃಷಿ ಪದ್ಧತಿಯಿಂದ ಮನುಷ್ಯನ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳಾಗುತ್ತಿವೆ ಎಂದು ವಿಷಾದಿಸಿದರು.
ಮಿಲಿನಿಯೇರ್ ಫಾರ್ಮರ್ ಆಫ್ ಇಂಡಿಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಹೆದ್ನೆ ಮುರುಗೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಬಿ.ಸಿ.ರುದ್ರೇಶ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ದೇಶ್ ವಾರ್ಷಿಕ ವರದಿ ಮಂಡಿಸಿದರು.ಆಡಳಿತ ಮಂಡಳಿ ಸದಸ್ಯರು ರೈತ ಉತ್ಪಾದಕ ಕಂಪನಿಯ ಷೇರುದಾರರು, ಜಲಾನಯನ ಮತ್ತು ಸಹರಾ ಸಂಸ್ಥೆ ಮುಖ್ಯಸ್ಥರು, ವಿವಿಧ ಕಂಪನಿಗಳ ಮಾರುಕಟ್ಟೆ ಪ್ರತಿನಿಧಿಗಳು, ಗ್ರಾಮದ ರೈತರು ಭಾಗವಹಿಸಿದ್ದರು.
- - - -2ಕೆಡಿವಿಜಿ53ಃ:ಚನ್ನಗಿರಿ ತಾಲೂಕಿನ ತಣಿಗೆರೆ ರೈತ ಉತ್ಪಾದಕ ಕಂಪನಿ ವಾರ್ಷಿಕ ಮಹಾಸಭೆಯನ್ನು ದಿದ್ದಿಗೆ ಮಹದೇವಪ್ಪ ಉದ್ಘಾಟಿಸಿದರು.